ಲೈಂಗಿಕ ದೌರ್ಜನ್ಯ ಹಾಗು ಕಿಡ್ನ್ಯಾಪ್ ಕೇಸ್ನಲ್ಲಿ A1 ಆರೋಪಿ ಆಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಶನಿವಾರ ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದೆ. ಈ ನಡುವೆ ಎಸ್ಐಟಿ ಟೀಂ ಮಾಜಿ ಮಿನಿಸ್ಟರ್ ದೇಶ ಬಿಟ್ಟು ಹೋಗದಂತೆ ಲುಕ್ಔಟ್ ನೋಟಿಸ್ ನೀಡಿದೆ.
ಈಗಾಗಲೇ ಮೂರು ಬಾರಿ ನೋಟಿಸ್ ಕೊಟ್ಟರೂ ವಿಚಾರಣೆಗೆ ಹಾಜರಾಗದ ಹೆಚ್.ಡಿ ರೇವಣ್ಣ ದೇಶ ಬಿಟ್ಟು ಪರಾರಿ ಆದರೆ ತನಿಖೆಗೆ ಅಡ್ಡಿಯಾಗಲಿದೆ. ಹೀಗಾಗಿ ಲುಕ್ಔಟ್ ನೋಟಿಸ್ ಕೊಟ್ಟಿದ್ದು, ಹೊರ ರಾಜ್ಯ ಅಥವಾ ವಿದೇಶಕ್ಕೆ ಹೋಗುವಾಗ ತಡೆಯಲಾಗುತ್ತದೆ.
ಈಗಾಗಲೇ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ಔಟ್ ನೋಟಿಸ್ ಹೊರಡಿಸಲಾಗಿದೆ. ಬೆಂಗಳೂರಗೆ ಬಂದಿಳಿಯುತ್ತಿದ್ದಂತೆ ಪೊಲೀಸ್ರು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಹೆಚ್.ಡಿ ರೇವಣ್ಣ ವಿರುದ್ದವೂ ಲುಕ್ ಔಟ್ ನೋಟೀಸ್ ಜಾರಿ ಆಗಿದೆ.
ದೇಶ ಬಿಟ್ಟು ತೆರಳದಂತೆ ಲುಕ್ ಔಟ್ ನೋಟಿಸ್ ಜಾರಿ ಮಾಡಿರೋ ಎಸ್ಐಟಿ ಟೀಂ ಎಲ್ಲಾ ಆಯಾಮಾದಲ್ಲೂ ತನಿಖೆ ನಡೆಸುತ್ತಿದೆ. ಈಗಾಗಲೇ ಕಿಡ್ನ್ಯಾಪ್ ಕೇಸ್ನಲ್ಲಿ ಭವಾನಿ ರೇವಣ್ಣ ಆಪ್ತ ಸತೀಶ್ ಬಾಬಣ್ಣನನ್ನು ಪೊಲೀಸ್ರು ಅರೆಸ್ಟ್ ಮಾಡಲಾಗಿದೆ. ಈ ಬೆನ್ನಲ್ಲೇ A1 ಆರೋಪಿ ರೇವಣ್ಣಗೂ ಬಂಧನ ಭೀತಿ ಎದುರಾಗಿದೆ.