ವಾರಣಾಸಿ ಜಿಲ್ಲಾ ನ್ಯಾಯಾಲಯವು ಕಾಶಿ ವಿಶ್ವನಾಥ ದೇವಾಲಯ-ಜ್ಞಾನವಾಪಿ ಮಸೀದಿ ಪ್ರಕರಣದ ವಾದ-ಪ್ರತಿವಾದಗಳ ವಿಚಾರಣೆಯನ್ನು ಸೋಮವಾರ ಪೂರ್ಣಗೊಳಿಸಿದೆ ಮತ್ತು ತನ್ನ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.
ವಿಶೇಷ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು ಸಿವಿಲ್ ದಾವೆಯ ವಿಚಾರಣೆ ನಡೆಸುತ್ತಿದ್ದರು. ಜ್ಞಾನ್ವಾಪಿ ಮಸೀದಿ ಸಮೀಕ್ಷೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ ಕೆಲವು ದಿನಗಳ ನಂತರ ವಾರಣಾಸಿ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಯಿತು.
ವಿಚಾರಣೆಯ ವೇಳೆ 19 ವಕೀಲರು ಮತ್ತು ನಾಲ್ವರು ಅರ್ಜಿದಾರರು ಸೇರಿದಂತೆ ಕೇವಲ 23 ಜನರಿಗೆ ಮಾತ್ರ ನ್ಯಾಯಾಲಯದ ಒಳಗೆ ಅನುಮತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೈವ್ ಲಾ ವರದಿಯ ಪ್ರಕಾರ, ‘ವಾಕಲತ್ನಾಮ’ದಲ್ಲಿ ಯಾರ ಹೆಸರಿದೆಯೋ ಅವರಿಗೆ ಮಾತ್ರ ನ್ಯಾಯಾಲಯದ ಕೊಠಡಿಯೊಳಗೆ ಅವಕಾಶ ನೀಡಲಾಗಿದೆ ಎಂದು ನ್ಯಾಯಾಲಯದ ನೌಕರರು ತಿಳಿಸಿದ್ದಾರೆ. ನಾಳೆ ತೀರ್ಪು ಹೊರಬೀಳಲಿದ್ದು, ಎಲ್ಲರ ಚಿತ್ತ ವಾರಣಾಸಿ ಕೋರ್ಟ್‌ನತ್ತ ಇರುವುದು ಸುಳ್ಳಲ್ಲ.