
ಲೋಡೆಡ್ ಬಂದೂಕು (Loaded gun) ಹಿಡಿದು ಆಟವಾಡುವಾಗ ಮಿಸ್ ಫೈರಿಂಗ್ ಆಗಿ, ಗುಂಡು ತಗುಲಿ 3 ವರ್ಷದ ಮಗು ಸಾವನ್ನಪ್ಪಿದ ಘಟನೆ ಮಂಡ್ಯದ ನಾಗಮಂಗಲದಲ್ಲಿ (Nagamangala) ನಡೆದಿದೆ.

ಮಂಡ್ಯದ ನರಸಿಂಹ ಮೂರ್ತಿ (Narasimha murthy) ಎಂಬಾತನಿಗೆ ಸೇರಿದ್ದ ಕೋಳಿ ಫಾರಂನಲ್ಲಿ ಹಲವು ವರ್ಷಗಳಿಂದ ಶಶಾಂಕ್, ಲಿಪಿಕಾ ದಂಪತಿ ಕಾರ್ಮಿಕರಾಗಿ ಕೆಲಸ ಮಾಡ್ತಿದ್ದರು. ಶಶಾಂಕ್‌ರ 3 ವರ್ಷದ ಪುತ್ರ ಅಭಿಷೇಕ್ ಹಾಗೂ ಅವರ ಸಂಬಂಧಿಯಾಗಿರೋ 13 ವರ್ಷದ ಸುದೀಪ್ ಇಬ್ಬರು ನರಸಿಂಹಮೂರ್ತಿಗೆ ಸೇರಿದ ಬಂದೂಕು ಹಿಡಿದು ಆಟವಾಡ್ತಿದ್ದರು.
ಈ ವೇಳೆ ನಕಲಿ ಬಂದೂಕು ಅಂಡ್ಕೊಂಡಿದ್ದ ಸುದೀಪ್ ಪುಟ್ಟ ಬಾಲಕ ಅಭಿಷೇಕ್ ಎದೆಗೆ ಗುರಿಯಿಟ್ಟು ಟ್ರಿಗರ್ ಒತ್ತಿದ್ದ. ತಕ್ಷಣ ಹೊರ ಬಂದ ಬುಲೆಟ್ ಅಭಿಷೇಕ್ ಹೊಟ್ಟೆ ನುಸುಳಿ ಪ್ರಾಣ ತೆಗೆದಿದೆ. ಅಭಿಷೇಕ್ ಮಾತ್ರವಲ್ಲದೇ ಆತನ ತಾಯಿ ಕೈಗೂ ಗುಂಡು ತಗುಲಿ ಗಾಯಗೊಂಡಿದ್ದಾರೆ.
ಇನ್ನು ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಾಗಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಬಂದೂಕು ವಶಕ್ಕೆ ಪಡೆದಿದ್ದಾರೆ.













