ಗುಜರಾತ್ ನ ಕಾಂಡ್ಲಾ ಬಂದರಿನಲ್ಲಿ 1439 ಕೋಟಿ ರೂ. ಮೊತ್ತದ ಹೆರಾಯಿನ್ ಪತ್ತೆಯಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಸುಮಾರು 17 ಕಂಟೇನರ್ ಗಳಲ್ಲಿ ಆಗಮಿಸಿದ್ದ 205.60 ಕೆಜಿ ತೂಕದ ಹೆರಾಯಿನ್ ಅನ್ನು ರೆವಿನ್ಯೂ ಇಂಟಲಿಜೆನ್ಸ್ ನಿರ್ದೇಶನಾಲಯ ವಶಕ್ಕೆ ಪಡೆದಿದೆ.
![](https://pratidhvani.com/wp-content/uploads/2022/04/drugs.jpg)
ಇದಕ್ಕೂ ಮುನ್ನ ಅಂದರೆ ಏಪ್ರಿಲ್ 21ರಂದು ಸುಮಾರು 300 ಕೆಜಿ ಅಂದರೆ 1300 ಕೋಟಿ ರೂ. ಮೌಲ್ಯದ ಹೆರಾಯಿನ್ ಪತ್ತೆಯಾಗಿತ್ತು. ಮಾದಕ ದ್ರವ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಗುಜರಾತ್ ಬಂದರು ಮೂಲಕ ಆಗಮಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.