• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಒಂದು ಕಡೆ ಗ್ಯಾರಂಟಿ, ಇನ್ನೊಂದು ಕಡೆ ಸುಲಿಗೆ!!

ಪ್ರತಿಧ್ವನಿ by ಪ್ರತಿಧ್ವನಿ
February 9, 2025
in ಕರ್ನಾಟಕ, ರಾಜಕೀಯ
0
ಒಂದು ಕಡೆ ಗ್ಯಾರಂಟಿ, ಇನ್ನೊಂದು ಕಡೆ ಸುಲಿಗೆ!!
Share on WhatsAppShare on FacebookShare on Telegram

//ಮೆಟ್ರೋ ರೈಲು ಪ್ರಯಾಣ ದರ ಏರಿಸಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ//

ADVERTISEMENT

ಗ್ಯಾರಂಟಿ ಹಣ ಭರ್ತಿ ಮಾಡಿಕೊಳ್ಳಲು, ಲೂಟಿ ಹೊಡೆಯಲು ಜನರ ಮೇಲೆ ದರ ಏರಿಕೆ ದಂಡ ಪ್ರಯೋಗ ಎಂದು ಕಿಡಿ

ಹಾವೇರಿ (ರಾಣಿಬೆನ್ನೂರು): ಒಂದು ಕಡೆ ಗ್ಯಾರಂಟಿ ಕೊಡುತ್ತೇವೆ ಎಂದು ಜನರ ಕಣ್ಣೊರೆಸುವ ನಾಟಕ ಆಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ; ಇನ್ನೊಂದು ಕಡೆ ಜನರಿಂದ ದರ ಏರಿಸಿ ಸುಲಿಗೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಪಟ್ಟಣದಲ್ಲಿ ಜಾತ್ಯತೀತ ಜನತಾದಳ ಕಚೇರಿಗೆ ಭೇಟಿ ನೀಡಿ ಅವರು ಮಾತನಾಡಿದರು.

HD Kumaraswamy: ಡಿಕೆಶಿ ಅವರು ಕುಂಭಮೇಳಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದೇನು..! #kumbmela #dks

ಅಧಿಕಾರಕ್ಕೆ ಬಂದ ಮೇಲೆ ಒಂದಾದ ಮೇಲೆ ಒಂದರಂತೆ ಗ್ಯಾರಂಟಿಗಳನ್ನೇನೋ ರಾಜಯ ಸರಕಾರ ಕೊಟ್ಟಿದೆ. ಆದರೆ, ಗ್ಯಾರಂಟಿ ಹಣವನ್ನು ಜನರಿಂದಲೇ ವಸೂಲಿ ಮಾಡಿ ಖಜಾನೆ ತುಂಬಿಸಿಕೊಳ್ಳುತ್ತಿದೆ. ಮುದ್ರಾಂಕ ಶುಲ್ಕ, ಮಾರ್ಗದರ್ಶಿ ಮೌಲ್ಯ ಏರಿಕೆ, ಮದ್ಯದ ದರ ಏರಿಕೆ, ಬಸ್ ದರ ಏರಿಕೆ ಸೇರಿದಂತೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಸರಕಾರ ದರ ಏರಿಕೆ ದಂಡ ಪ್ರಯೋಗ ಮಾಡುತ್ತಿದೆ. ಈಗ ಬೆಂಗಳೂರು ನಗರದ ಮೆಟ್ರೋ ರೈಲು ಪ್ರಯಾಣ ದರವನ್ನು ಜನರೇ ಬೆಚ್ಚಿ ಬೀಳುವಷ್ಟರ ಮಟ್ಟಿಗೆ ಶೇ.40ರಿಂದ 50ರಷ್ಟು ಏರಿಕೆ ಮಾಡಿದೆ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು.

ಅಭಿವೃದ್ಧಿ ಎಂದರೆ ಈ ಸರಕಾರದ ಪಾಲಿಗೆ ಕೇವಲ ದರ ಏರಿಕೆ ಎನ್ನುವಂತೆ ಆಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಎನ್ನುವುದು ಸತ್ತು ಹೋಗಿದೆ. ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತವಾಗಿದೆ. ಮಹಿಳೆಯರಿಗೆ ಬರೀ ಎರಡು ಸಾವಿರ ಕೊಟ್ಟು ಬೇರೆ ಕಡೆ ಸಾಲ ಮಾಡಿ ಅದರ ಹೊರೆಯನ್ನು ಜನರ ಮೇಲೆಯೇ ಹೇರುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಗ್ಯಾರಂಟಿ ಕೊಡಲಿಕ್ಕೂ ಕಾಂಗ್ರೆಸ್ ಸರಕಾರ ಸಾಲ ಮಾಡುತ್ತಿದೆ. ಈಗಾಗಲೇ ರಾಜ್ಯದ ಸಾಲ ಏಳು ಲಕ್ಷ ಕೋಟಿಗೆ ಮುಟ್ಟಿದೆ. ಆ ಸಾಲ ತೀರಿಸೋದು ಕೂಡ ನೀವೇ. ಬಳ್ಳಾರಿ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಬಾಣಂತಿಯರು, ನವಜಾತ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಸರಕಾರಕ್ಕೆ ಈ ಬಗ್ಗೆ ಚಿಂತೆ ಇಲ್ಲ ಎಂದು ಅವರು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರಕಾರ ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಜನರು ಇವರಿಗೆ ಮತ ಹಾಕಿದ್ದಕ್ಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ನಮ್ಮ ಪಕ್ಷ ಜನರ ಪರವಾಗಿ ದನಿಯೆತ್ತಿ ಹೋರಾಟ ನಡೆಸುತ್ತಿದೆ. ಕಾರ್ಯಕರ್ತರು, ಮುಖಂಡರು ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಕೇಂದ್ರ ಸಚಿವರು ಕರೆ ನೀಡಿದರು.

ಮೈಕ್ರೋ ಫೈನಾನ್ಸ್ ಉಪಟಳಕ್ಕೆ ರಾಜ್ಯದ ಬಡಜನರು ತತ್ತರಿಸಿ ಹೋಗಿದ್ದಾರೆ. ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಾಲ ಮಾಡಿದ್ದೀರಿ, ಅಪರಾಧ ಮಾಡಿಲ್ಲ. ಹೀಗಾಗಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯ ಇಲ್ಲ. ನಮ್ಮ ರಾಜ್ಯ ಸರಕಾರವೇ ಏಳು ಲಕ್ಷ ಕೋಟಿ ಸಾಲ ಮಾಡಿ ಧೈರ್ಯವಾಗಿದೆ, ಇನ್ನೂ ಲೂಟಿ ಹೊಡೆಯುತ್ತಿದೆ. ಹೀಗಿದ್ದ ಮೇಲೆ ಅಲ್ಪಸ್ವಲ್ಪ ಸಾಲ ಮಾಡಿರುವ ಜನರು ಯಾಕೆ ಹೆದರಬೇಕು. ಯಾವುದೇ ಕಾರಣಕ್ಕೂ ಹೆದರಬೇಡಿ. ನಿಮ್ಮ ಜತೆ ನಾವಿದ್ದೇವೆ ಎಂದು ಕೇಂದ್ರ ಸಚಿವರು ಧೈರ್ಯ ತುಂಬಿದರು.

ರಾಜ್ಯದಲ್ಲಿ ತಳಮಟ್ಟದಿಂದ ಜೆಡಿಎಸ್ ಸಂಘಟನೆಗೆ ಒತ್ತು ಕೊಡಲಾಗುವುದು. ಹಾಗೆಯೇ ಉತ್ತರ ಕರ್ನಾಟಕದ ಭಾಗದಲ್ಲಿಯೂ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ಪ್ರಯತ್ನ ಮಾಡಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇದೇ ವೇಳೆ ಪಕ್ಷದ ಕಚೇರಿಯಲ್ಲಿ ಸಚಿವರಿಗೆ ಸನ್ಮಾನ ಮಾಡಲಾಯಿತು. ಪಕ್ಷದ ಹಾವೇರಿ ಜಿಲ್ಲಾಧ್ಯಕ್ಷ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಅನೇಕರು ಉಪ್ಥಿತರಿದ್ದರು.

ಇದಕ್ಕೂ ಮೊದಲು ಸಚಿವರು ಪಕ್ಷದ ಮುಖಂಡರಾದ ಬಸವರಾಜ ಕೊಪ್ಪದ ಅವರ ಮನೆಗೆ ಭೇಟಿ ನೀಡಿದರು.

Tags: bangalore metro price hikebengaluru metro ticket pricebengaluru metro ticket price hikebmrclbmrcl | metro ticket price hikebmrcl ticket pricemetro price hikemetro ticket fare hikemetro ticket pricemetro ticket price hikemetro ticket pricesmetro train ticket price hikemumbai metro ticket price hikenamma metro ticket fare hikenamma metro ticket fare hikednamma metro ticket price hike newsticket price hike
Previous Post

ಇವಿಎಂ ಬಗ್ಗೆ ಮಾತನಾಡುವುದು ಫ್ಯಾಷನ್ ಆಗಿದೆ: ಬಸವರಾಜ ಬೊಮ್ಮಾಯಿ

Next Post

“ನಮ್ ಪೈಕಿ ಒಬ್ಬ ಹೋಗ್ಬುಟ” ಅಂತ ಹಾಡು ಬರೆದ‌ ಯೋಗರಾಜ್ ಭಟ್.”

Related Posts

“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಇದೀಗ

“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

by ಪ್ರತಿಧ್ವನಿ
February 6, 2026
0

ಬೆಂಗಳೂರು: ಪ್ರಯಾಣಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನಮ್ಮ ಮೆಟ್ರೊ ದರ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊದಲ‌ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.‌ ಈ ಕುರಿತು ಹೇಳಿಕೆ ಬಿಡುಗಡೆ...

Read moreDetails
Supreme Court: ಮಗುವಿನ ಹಕ್ಕಿಗಿಂತ ತಾಯಿ ಹಕ್ಕು ಮುಖ್ಯ: 30ನೇ ವಾರದಲ್ಲೂ ಗರ್ಭಪಾ**ಕ್ಕೆ ಸುಪ್ರೀಂ ಅನುಮತಿ

Supreme Court: ಮಗುವಿನ ಹಕ್ಕಿಗಿಂತ ತಾಯಿ ಹಕ್ಕು ಮುಖ್ಯ: 30ನೇ ವಾರದಲ್ಲೂ ಗರ್ಭಪಾ**ಕ್ಕೆ ಸುಪ್ರೀಂ ಅನುಮತಿ

February 6, 2026
ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

February 6, 2026
Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

February 6, 2026
BREAKING: ನಟ ನಂದಕಿಶೋರ್‌ಗೆ ಸಾಲ ನೀಡಿದ ವ್ಯಕ್ತಿಯ ಕಿಡ್ನಾಪ್‌: ಮಾಜಿ ರೌಡಿಶೀಟರ್ ಯಶಸ್ವಿನಿ ಅರೆಸ್ಟ್‌

BREAKING: ನಟ ನಂದಕಿಶೋರ್‌ಗೆ ಸಾಲ ನೀಡಿದ ವ್ಯಕ್ತಿಯ ಕಿಡ್ನಾಪ್‌: ಮಾಜಿ ರೌಡಿಶೀಟರ್ ಯಶಸ್ವಿನಿ ಅರೆಸ್ಟ್‌

February 6, 2026
Next Post
“ನಮ್ ಪೈಕಿ ಒಬ್ಬ ಹೋಗ್ಬುಟ” ಅಂತ ಹಾಡು ಬರೆದ‌ ಯೋಗರಾಜ್ ಭಟ್.”

"ನಮ್ ಪೈಕಿ ಒಬ್ಬ ಹೋಗ್ಬುಟ" ಅಂತ ಹಾಡು ಬರೆದ‌ ಯೋಗರಾಜ್ ಭಟ್."

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada