ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿಗಳ ಪೈಕಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruha lakshmi scheem) ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣ ಕಳೆದ ಕೆಲ ತಿಂಗಳಿಂದ ಮಹಿಳೆಯರಿಗೆ ತಲುಪಬೇಕಿದ್ದ 2000 ಹಣವನ್ನು ಸರ್ಕಾರ ಖಾತೆಗಳಿಗೆ ಹಾಕದೆ ಬಾಕಿ ಉಳಿಸಿಕೊಂಡಿರುವುದು.

ಆದ್ರೆ ಇದೀಗ ಸ್ಥಗಿತಗೊಂಡಿರುವ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಣ ಬಿಡುಗಡೆ ತಡವಾದ ಕಾರಣ ರಾಜ್ಯ ಸರ್ಕಾರದ ಇಮೇಜೆಬ್ಗೆ ಡ್ಯಾಮೇಜ್ ಆಗಿರುವ ಕಾರಣ ಕೂಡಲೇ ಹಣ ಬಿಡುಗಡೆ ಮಾಡಲು ಸರ್ಕಾರ ಚಿಂತಿಸಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಹಿಂದೆ ಪಿಎಂ ಕಿಸಾನ್ ಮೊತ್ತ ಬಿಡುಗಡೆ ಮಾಡಿರುವ ಹಿನ್ನಲೆ , ಇತ್ತ ರಾಜ್ಯ ಸರ್ಕಾರ ಕೂಡ ಈಗ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಮಹಿಳೆಯರಂಖತೆಗೆ ಹಣ ಬರುವ ನಿರೀಕ್ಷೆಯಿದೆ.