ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಜಯನಗರ ಕ್ಷೇತ್ರದ ನಾಗರೀಕ ಸಂಘ ಸಂಸ್ಥೆಗಳ ಒಕ್ಕೂಟದಿಂದ ಸಭೆ ನಡೆಸಲಾಗಿದೆ. ಜಯನಗರದ ಜೆಸಿಸಿಎ ಕ್ಲಬ್‌ನಲ್ಲಿ ನಡೆದ ಸಭೆಯಲ್ಲಿ ಜಯನಗರ ಶಾಸಕ ಸಿ ಕೆ ರಾಮಮೂರ್ತಿ ನೇತೃತ್ವದಲ್ಲಿ ಸಭೆ ಮಾಡಲಾಗಿದ್ದು, ಸಭೆಯಲ್ಲಿ ಕ್ಷೇತ್ರದ ಮುಖಂಡರು, ಸಂಘ ಸಂಸ್ಥೆಗಳ ಅಧ್ಯಕ್ಷರು, ನಟಿ ತಾರಾ ಅನುರಾಧಾ ಭಾಗಿಯಾಗಿ, ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿದ್ದಾರೆ.ನಮ್ಮ ತೆರಿಗೆ ನಮ್ಮ ಹಕ್ಕು ಹೆಸರಿನಡಿ ಸಭೆ ಮಾಡಲಾಗಿದೆ.
ಸಭೆ ಬಳಿಕ ಸಿ ಕೆ ರಾಮಮೂರ್ತಿ ಮಾತನಾಡಿ, 10 ಕೋಟಿ ಅನುದಾನವನ್ನ ತಕ್ಷಣವೇ ಬಿಡುಗಡೆ ಮಾಡಬೇಕು. ನಾನು ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡುತ್ತೇನೆ.ಅವರು ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಇದ್ದಾರೆ.ಎಲ್ಲಾ ಒಕ್ಕೂಟ ಸೇರಿ ಭೇಟಿ ಮಾಡಿ ಮನವಿ ಮಾಡುತ್ತೇನೆ. ಮತ್ತೊಂದು ಸಭೆ ಕರೆಯುತ್ತೇವೆ. ಮತದಾರರ ಮುಂದೆ ನಾನು ತಲೆಬಾಗಬೇಕು.ಡಿ.ಕೆ ಶಿವಕುಮಾರ್ ಅವರು ನಮಗೆ ತಗ್ಗಿ ಬಗ್ಗಿ ಇರಬೇಕು ಎಂದಿದ್ದಾರೆ. ನಾವು ಅದೇ ರೀತಿ ನಡೆದುಕೊಳ್ಳುತ್ತೇವೆ.ತಗ್ಗಿ ಬಗ್ಗಿ ನಡೀಬೇಕು ಎಂದು ಹೇಳಿದ್ದಾರೆ.ಅವರ ಮುಂದೆ ನಾವು ಹಾಗೇ ಇರುತ್ತೇವೆ ಎಂದಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ದೊಡ್ಡವರು, ನಾವು ಚಿಕ್ಕವರು. ಹೀಗಾಗಿ ಅವರು ನಮಗೆ ಅನುದಾನ ನೀಡಲಿ ಎಂದು ಮನವಿ ಮಾಡುತ್ತೇವೆ ಎಂದಿದ್ದಾರೆ.
ನಟಿ ತಾರಾ ಅನುರಾಧಾ ಮಾತನಾಡಿ, ನಮ್ಮ ತೆರಿಗೆ ನಮ್ಮ ಹಕ್ಕು ಕೇಳೋಕೆ ಚನ್ನಾಗಿದೆ. ಕಷ್ಟ ಪಟ್ಟು ದುಡಿದ ಹಣವನ್ನ ಸರ್ಕಾರಕ್ಕೆ ನೀಡುತ್ತಿದ್ದೇವೆ. ನಮ್ಮ ಹಣಕ್ಕೆ ನಾವು ಲೆಕ್ಕ ಹಾಕುತ್ತೇವೆ. ಇದೇ ರೀತಿ ನಾವು ತೆರಿಗೆ ಕಟ್ಟುತ್ತೇವೆ. ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯದ ಮೂಲಕವೂ ನಾವು ಲಾಭ ಪಡೆಯುತ್ತೇವೆ. ಆದ್ರೆ ಅದು ನಮ್ಮ ತೆರಿಗೆ ಹಣದಿಂದ ಅಭಿವೃದ್ಧಿ ಆಗಬೇಕು. ಮೂಲ ಸೌಕರ್ಯವನ್ನು ನಮ್ಮ ತೆರಿಗೆ ಹಣದಿಂದ ಆಗುತ್ತದೆ. ಅದರ ಅನುಕೂಲ ಆಗುತ್ತಿದ್ಯಾ..? ನಮ್ಮ ಕುಟುಂಬ ಕೂಡ ಸಾರ್ವಜನಿಕ ಜೀವನದಲ್ಲಿದೆ.
ನಾವು ನಮ್ಮ ಸೇವಕರನ್ನು ಆರಿಸುತ್ತೇವೆರಾಮಮೂರ್ತಿ ಅವರು ನಮ್ಮ ಕ್ಷೇತ್ರದ ಶಾಸಕರು.ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಮುಂದೆಯೂ ಮಾಡುತ್ತಾರೆ.ಆದ್ರೆ ಡಿಸಿಎಂ ಡಿಕೆ ಶಿವಕುಮಾರ್ ಅಣ್ಣ ನೀರಿನ ಬಿಲ್ ಜಾಸ್ತಿ ಮಾಡಿಲ್ಲ ಎನ್ನುತ್ತಿದ್ದಾರೆ. ಜಯನಗರ ಕ್ಷೇತ್ರಕ್ಕೆ ಶಕ್ತಿ ಇದೆ. ಅಭಿವೃದ್ಧಿ ಕೆಲಸ ಆಗಬೇಕು. ನಮ್ಮ ತೆರಿಗೆ ಹಣಕ್ಕೆ ಏನು ಕೆಲಸ ಆಗುತ್ತಿದೆ ಅನ್ನೋದನ್ನು ನಾವು ತಿಳಿದುಕೊಳ್ಳಬೇಕು ಎಂದಿದ್ದಾರೆ.