ಮೌಡ್ಯ ಹಾಗೂ ಮೂಢನಂಬಿಕೆಗೆ ಒಳಗಾಗಿ ಮೊಮ್ಮಗನೇ ತನ್ನ ಅಜ್ಜಿಯನ್ನು ಕೊಂದಿರುವ ಭೀಕರ ಘಟನೆ, ಛತ್ತೀಸ್‌ಗಢದ (Chattisghar) ನಂಕಟ್ಟಿ ಗ್ರಾಮದಲ್ಲಿ ನಡೆದಿದೆ. ಗುಲ್ಕನ್ ಗೋಸ್ವಾಮಿ (Gulshan goswamy) ಹಾಗೂ ಕೊಲೆಯಾದ ಅಜ್ಜಿರುಕ್ಕಿಣಿ ಗೋಸ್ವಾಮಿ (Rukmini goswami) ನಂಕಟ್ಟಿ ಗ್ರಾಮದ ಶಿವ ದೇವಾಲಯದ ಬಳಿ ವಾಸವಿದ್ದರು.
ಆದ್ರೇ ಕಳೆದ ಶನಿವಾರ ಆರೋಪಿ ಮೊಮ್ಮಗೆ ಗುಲ್ಕನ್ ಗೋಸ್ವಾಮಿ ಅಜ್ಜಿಯನ್ನು ಶಿವನ ತ್ರಿಶೂಲದಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಅಜ್ಜಿಯ ರಕ್ತವನ್ನು ಶಿವಲಿಂಗಕ್ಕೆ ಅರ್ಪಿಸಿ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳೀಯರ ಪೊಲೀಸ್ರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು,ಗಂಭೀರವಾಗಿ ಗಾಯಗೊಂಡಿದ್ದ ಆರೋಪಿಯನ್ನ ಆಸ್ಪತ್ರೆಗೆ ದಾಖಲಿಸಿ,ಅಜ್ಜಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.