ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿನದಿಂದ ದಿನಕ್ಕೆ ಸಾಕಷ್ಟು ಜನಸಂದಣಿ ಆಗುತ್ತಿದ್ದು, ತಮಿಳುನಾಡಿನ ಹೊಸೂರಿನಲ್ಲಿ ಏರ್ಪೋರ್ಟ್ ನಿರ್ಮಾಣಕ್ಕೆ ಅವಕಾಶ ಕೊಡಬೇಕು ಅನ್ನೋ ಬಗ್ಗೆ ತಮಿಳುನಾಡು ಮೂಲಕ ಸಂಸದ ತಂಬಿದೊರೆ ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಕೂಡಲೇ ಮಾಜಿ ಪ್ರಧಾನಿ ಹಾಗು ರಾಜ್ಯಸಭಾ ಸದಸ್ಯ ಹೆಚ್.ಡಿ ದೇವೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಕೇಂದ್ರ ಸರ್ಕಾರ ಬೆಂಗಳೂರು ಏರ್ಪೋರ್ಟ್ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕ ಸರ್ಕಾರ ತೆಗೆದುಕೊಳ್ಳುವ ಕ್ರಮದ ಆಧಾರದಲ್ಲಿ ಏರ್ಪೋರ್ಟ್ಗೆ ಅವಕಾಶ ಕೊಡಬೇಕು ಎಂದಿದ್ದಾರೆ.
ಕರ್ನಾಟಕದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಅನ್ನೋ ತಂಬಿದೊರೆ ಮಾತನ್ನ ನಾನೂ ಕೂಡ ಒಪ್ತೇನೆ ಎಂದಿರುವ ಮಾಜಿ ಪ್ರಧಾನಿ ದೇವೇಗೌಡರು, ಆದರೆ ಬೆಂಗಳೂರು ಏರ್ಪೋರ್ಟ್ ಸಮಸ್ಯೆಯನ್ನು ಕರ್ನಾಟಕ ಸರ್ಕಾರ ಸರಿ ಮಾಡಲಿದೆ. ಅದಕ್ಕಾಗಿ ಈಗಾಗಲೇ ಮತ್ತೊಂದು ಏರ್ಪೋರ್ಟ್ ನಿರ್ಮಾಣಕ್ಕಾಗಿ ಸಿದ್ಧತೆ ನಡೆಸಲಾಗ್ತಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ ಮೊದಲು ಕರ್ನಾಟಕದ ಪ್ರಸ್ತಾಪವನ್ನು ಗಮನಿಸಿದ ಬಳಿಕ ತಮಿಳುನಾಡಿನ ಪ್ರಸ್ತಾಪ ನೋಡಬೇಕು ಎಂದು ಆಗ್ರಹ ಮಾಡಿದ್ದಾರೆ.
ವಿಮಾನಯಾನ ಸಚಿವರು ದೇವೇಗೌಡರ ಮಾತಿಗೆ ಅಸ್ತು ಅಂದಿದ್ದು, ಕರ್ನಾಟಕ ಸರ್ಕಾರ ಏಪೋರ್ಟ್ಗೆ ಜಾಗ ಗುರುತಿಸಬೇಕಿದೆ. ಕರ್ನಾಟಕ ಸರ್ಕಾರ ಜಾಗ ಗುರ್ತಿಸಿದ ಮೇಲೆ ಕೇಂದ್ರ ಸರ್ಕಾರ ಪರಿಶೀಲನೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದಾರೆ. ಒಂದು ವೇಳೆ ಹೊಸೂರಿನಲ್ಲಿ ಏರ್ಪೋರ್ಟ್ ಆದರೆ ತಮಿಳುನಾಡಿನ ಕಡೆಗೆ ಬೆಂಗಳೂರು ವಾಲುವ ಸಾಧ್ಯತೆಯಿದ್ದು, ಬೆಂಗಳೂರು ಏರ್ಪೋರ್ಟ್ ನಂತರ ಕೊಸೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಮೂಲಕ ಆದಾಯದ ಮೂಲಕ ಕೈ ಹಾಕಲು ತಮಿಳುನಾಡು ಸರ್ಕಾರ ಯೋಜನೆ ರೂಪಿಸುತ್ತಿದೆ.