IT 8 (IT Employees) 14 ಗಂಟೆಗಳ ಕೆಲಸದ (14 hours work schedule) ಅವಧಿ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ, ಇದೀಗ ಸರ್ಕಾರದ ವಿರುದ್ಧ ಐಟಿ ಕಂಪನಿಗಳ ಉದ್ಯೋಗಿಗಳು ಮೇಲ್ (Mail) ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಮೇಲ್ ಕಳುಹಿಸುವ ಮೂಲಕ ಸರ್ಕಾರದ ವಿರುದ್ಧ ಸಮರ ಸಾರಲು ತೀರ್ಮಾನ ಮಾಡಲಾಗಿದೆ.
ಮಾಸ್ ಮೇಲ್ (Mass) ಮೂಲಕ 14 ಗಂಟೆಗಳ ಕೆಲಸದ ಅವಧಿ ವಿಸ್ತರಣೆ ನಿರ್ಧಾರವನ್ನು ವಿರೋಧ ಮಾಡೋಕ್ಕೆ ಈ ಮೂಲಕ ಯತ್ನಿಸಲಾಗುತ್ತಿದೆ. ಈ ಮೇಲ್ ಮೂಲಕ 14 ಗಂಟೆಗಳ ಕೆಲಸ ಮಾಡಲು ನಾನು ವಿರೋಧ ವ್ಯಕ್ತ ಪಡಿಸುತ್ತೇನೆ ಅಂತ ಉದ್ಯೋಗಿಗಳು ಮೆಸೇಜ್ ಮಾಡುತ್ತಿದ್ದಾರೆ.
ಈಗಾಗಲೇ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh lad), ಸಿಎಂ ಸಿದ್ದರಾಮಯ್ಯಗೆ (Cm siddaramaiah) ಈ ರೀತಿಯ ಸಹಸ್ರಾರು ಸಂಖ್ಯೆಯಲ್ಲಿ ಮೇಲ್ ಬಂದಿದ್ದು, ಕರ್ನಾಟಕ ರಾಜ್ಯ ಐಟಿ ಮತ್ತು/ಐಟಿಇಎಸ್ ಎಂಪ್ಲಾಯೀಸ್ ಯುನಿಯನ್ ಇಂದ ಈ ನಿರ್ಧಾರ ಹಿಂಪಡೆಯಲು ಒತ್ತಡ ಶುರುವಾಗಿದೆ.