ಭಾರತ ಬಾಹ್ಯಾಕಾಶ ಸಂಶೋಧನೆಯಲ್ಲಿ ಚಂದ್ರನ ಮುಟ್ಟಿ, ಸೂರ್ಯನೆಡೆಗೆ ಹೊರಟ ಇಸ್ರೋ ಅಧ್ಯಕ್ಷರಿಗೆ ಬೆಂಗಳೂರು (Bengaluru) ವಿವಿಯ ಗೌರವ ಡಾಕ್ಟರೇಟ್ ನೀಡಲಾಯಿತು.
ಪ್ರತಿಷ್ಠಿತ ಚಂದ್ರಯಾನ ಹಾಗೂ ಆದಿತ್ಯ ಯೋಜನೆಯ ನೇತೃತ್ವ ವಹಿಸಿದ್ದ ವಿಜ್ಞಾನಿ ಹಾಗೂ ಇಸ್ರೋ (ISRO) ಸಂಸ್ಥೆಯ ಅಧ್ಯಕ್ಷ ಎಸ್.ಸೊಮನಾಥ್ (S Somanath) ಅವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಘೋಷಿಸಿತ್ತು, ಕಾರಣಾಂತರಗಳಿAದ ಘಟಿಕೋತ್ಸವಕ್ಕೆ ಭರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾ ಥಾವರ್ ಚಂದ್ ಗೆಹ್ಲೋಟ್ (Thawarchand Gehlot) ಡಾಕ್ಟರೇಟ್ ನೀಡಿ ಗೌರವಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವ ಸಮಾರಂಭದಲ್ಲಿ, ದೇಶದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ್ ಅವರಿಗೆ ಗೌರವ ಪದವಿಯನ್ನು ಘೋಷಿಸಲಾಗಿತ್ತು, ಆ ಸಮಯದಲ್ಲಿ ಘಟಿಕೋತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಇವತ್ತಿನ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ನೀಡಿದ್ದು, ಈ ಗೌರವ ಪದವಿಯನ್ನು ಅಲಂಕರಿಸುವ ಮೂಲಕ ಗೌರವ ಪದವಿಯ ಮೌಲ್ಯವೂ ಹೆಚ್ಚಿದೆ ಎಂದು ರಾಜ್ಯಪಾಲರು ತಿಳಿಸಿದರು.
ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ರಾಕೆಟ್‌ಗಳ ವಿಬಾಗದಲ್ಲಿ ಸೋಮನಾಥ್ ಪ್ರಖ್ಯಾತರಾಗಿದ್ದು, ಲಾಂಚರ್ ರಾಕೆಟ್‌ಗಳ ಸಿಸ್ಟಮ್ ಎಂಜಿನಿಯರಿAಗ್ ಕ್ಷೇತ್ರದಲ್ಲಿ ಪರಿಣತರಾಗಿದ್ದಾರೆ, ನೀವು ಪಿ.ಎಸ್.ಎಲ್.ವಿ. ಮತ್ತು ಜಿ. ಎಸ್.ಎಲ್.ವಿ. ರಾಕೆಟ್ ಒಟ್ಟಾರೆ ಆರ್ಕಿಟೆಕ್ಚರ್, ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಎಸ್ ಸೋಮನಾತ್ ಅವರ ಅತ್ಯುತ್ತಮ ಸಾಧನೆಗಳು ಮತ್ತು ನಿಮ್ಮ ಕೊಡುಗೆಗಾಗಿ ಅಭಿನಂದಿಸುತ್ತೇನೆ ಎಂದ ಅವರು ದೇಶಕ್ಕಾಗಿ ಅವರ ಸೇವೆ ನಿರಂತರವಾಗಿರಲಿ ಎಂದು ಹಾರೈಸಿದರು.
#ISRO #SSomnath #Doctorate #Bengaluru #Chandrayaan-2 #AdityaL1 #Space #SpaceResearch #Governor #RajBhavan #BengaluruUniversity