ಸರ್ಕಾರ ಬೀಳಲಿದೆ ಎಂಬ ಏಕನಾಥ್ ಶಿಂಧೆ ಹೇಳಿಕೆಗೆ ಸಿಎಂ (cm) ಸಿದ್ದರಾಮಯ್ಯ (Siddaramaiah) ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು ನಾವು ಲೋಕಸಭಾ ಚುನಾವಣೆಯಲ್ಲಿ 20ಸ್ಥಾನ (20 seats) ಗೆಲ್ಲೇವೆ ಅದಕ್ಕೆ ಅವರು ಹತಾಶರಾಗಿ ಸರ್ಕಾರ ಬೀಳಿಸೋ ಬಗ್ಗೆ ಮಾತನ್ನಾಡ್ತಿದ್ದಾರೆ.ಸರ್ಕಾರ ಬೀಳಲಿದೆ ಎಂಬುದು ಬಿಜೆಪಿಯವರ (Bjp) ಭ್ರಮೆ ಅಪರೇಷನ್ ಕಮಲ (Operation lotus) ಸಾಧ್ಯ ಇಲ್ಲ ಅವರು ಪಾರ್ಲಿಮೆಂಟ್ ಚುನಾವಣೆಗೆ (Parliment election) ಸೋಲಲಿದ್ದಾರೆ. ಈಗಾಗಲೇ ಅವರು ಪ್ರಯತ್ನ ಮಾಡಿ ವಿಫಲರಾಗಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ರು.

ಮಹಾರಾಷ್ಟ್ರ (Maharashtra) ಮಾದರಿಯಲ್ಲಿಯೇ ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ (Congress government) ಪತನವಾಗಲಿದೆ ಎಂಬ ಏಕನಾಥ್ ಶಿಂಧೆ (Eknath shindhe) ಹೇಳಿಕೆಯ ವಿಚಾರ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಈ ಮುಂಚೆ ಪ್ರತಿಕ್ರಿಯಿಸಿದ್ರು.ನಾವ್ಯಾರು ಇಲ್ಲಿನ ಸರ್ಕಾರ ಬೀಳಿಸುವುದಿಲ್ಲ.ನಮಗೆ ಸರ್ಕಾರ ಬೀಳಿಸುವ ಕೆಲಸವು ಇಲ್ಲ ಎಂದು ಹೇಳಿದ ಅವರು, ಕಾಂಗ್ರೆಸ್ಸಿಗರೇ (Congress) ಸರ್ಕಾರ ಕೆಡವಲಿದ್ದಾರೆ ಎಂದು ಹೇಳಿದ್ದರು.

ಈ ಕಾಂಗ್ರೆಸ್ಸಿಗರ ಅಧಿಕಾರದ ದಾಹದಿಂದಲೇ ಸರ್ಕಾರ ಪತನವಾಗಲಿದೆ.ನಮ್ಮ ಪಕ್ಷಕ್ಕೆ ಯಾವುದೇ ಇಂತಹ ಆಸೆ ಇಲ್ಲ.ನಾನು ಮುಖ್ಯಮಂತ್ರಿ (CM), ಉಪ-ಮುಖ್ಯಮಂತ್ರಿ (Dcm), ಸಚಿವ (Minister), ಶಾಸಕ (Mia) ಅಂತಾ ಅಧಿಕಾರದ ದಾಹ ಕಾಂಗ್ರೆಸ್‌ನಲ್ಲಿ ಬಹಳ ಇದೆ.ಅವರ ಆಡಳಿತ ವ್ಯವಸ್ಥೆ, ಭ್ರಷ್ಟಾಚಾರ, ಕರ್ಮಕಾಂಡದಿಂದಲೇ ಸರ್ಕಾರ ಹೋಗುತ್ತದೆ ಎಂದು ಹೇಳಿದ್ದರು. ಇದೀಗ ಈ ಎಲ್ಲಾ ಹೇಳಿಕೆಗಳಿಗೆ ಸಿಎಂ(Cm) ಟಾಂಗ್ ಕೊಟ್ಟಿದ್ದಾರೆ.