ಸರ್ಕಾರಿ ಉದ್ಯೋಗಗಳಲ್ಲಿ ಸಾಮಾನ್ಯವಾಗಿ ದುಡಿಯುವ ಜನರಿಗೆ ತುಂಬಾ ಸುರಕ್ಷಿತ ಮತ್ತು ಅನುಕೂಲಕರ ಎಂದುಕ್ಕೊಳ್ಳುತ್ತೇವೆ, ಆದರೆ ಉತ್ತರ ಪ್ರದೇಶದಲ್ಲಿ ಈಗ ಹಾಗಲ್ಲ. ಏಕೆ ಗೊತ್ತೆ ?ಯೋಗಿ ಆದಿತ್ಯನಾಥ್ ಸರ್ಕಾರವು 68000 ಕ್ಕೂ ಹೆಚ್ಚು ಉತ್ತರ ಪ್ರದೇಶ ಸರ್ಕಾರಿ ನೌಕರರ ವೇತನವನ್ನು ತಡೆಹಿಡಿಯುವ ಮೂಲಕ ಅಪರೂಪದ ಹೆಜ್ಜೆ ಇಟ್ಟಿದೆ.

ಪದೇ ಪದೇ ಸೂಚನೆಗಳು ಮತ್ತು ಗಡುವುಗಳನ್ನು ನೀಡಿದ್ದರೂ ಸಹ, ಈ ನೌಕರರು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳ ವಿವರಗಳನ್ನು ಮಾನವ್ ಸಂಪದ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ವಿಫಲವಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಅಧಿಕಾರಿಗಳ ಪ್ರಕಾರ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕ್ರಮಗಳ ಭಾಗವಾಗಿ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ಆಸ್ತಿಗಳ ಬಹಿರಂಗಪಡಿಸುವಿಕೆ ಕಡ್ಡಾಯವಾಗಿತ್ತು.ನಿಯಮವನ್ನು ನಿರ್ಲಕ್ಷಿಸಿದವರು ಈಗ ತಕ್ಷಣದ ಆರ್ಥಿಕ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ, ಅವರ ಮಾಸಿಕ ವೇತನವನ್ನು ತಡೆಹಿಡಿಯಲಾಗಿದೆ. ಪೋರ್ಟಲ್‌ನಲ್ಲಿ ಸಂಪೂರ್ಣ ಮತ್ತು ನಿಖರವಾದ ಆಸ್ತಿ ಘೋಷಣೆಗಳನ್ನು ಸಲ್ಲಿಸಿದ ನಂತರವೇ ಸಂಬಳವನ್ನು ನೀಡಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಭಾರತದಾದ್ಯಂತ ಹಲವಾರು ರಾಜ್ಯಗಳು ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಇಂತಹ ನಿಯಮಗಳನ್ನು ಜಾರಿಗೆ ತರಲು ಪ್ರಾರಂಭಿಸುತ್ತವೆಯೇ ಎಂದು ಕಾದು ನೋಡಬೇಕಾಗಿದೆ.













