ಮೈಕ್ರೋ ಫೈನಾನ್ಸ್ ನಾಗಾಲೋಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ.

ಈಗಿನಿಂದ ಆರು ತಿಂಗಳುಗಳ ಕಾಲ ಈ ಸುಗ್ರೀವಾಜ್ಞೆ ಜಾರಿಯಲ್ಲಿರಲಿದ್ದು, ಮುಂದಿನ ಸದನದಲ್ಲಿ ಈ ಕುರಿತು ಮಸೂದೆಯನ್ನು ಮಂಡಿಸುವಂತೆ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಗಳ ನಿರ್ದೇಶನದಂತೆ ಈ ಸುಗ್ರೀವಜ್ಞೆಯ ಕರಡು ಪ್ರತಿಯನ್ನು ಸಿದ್ಧಪಡಿಸಲಾಗಿದ್ದು, ರಾಜ್ಯಪಾಲರ ಸಹಿಗಾಗಿ ರಾಜಭವನಕ್ಕೆ ಕಳುಹಿಸಲಾಗಿತ್ತು.

ಆದ್ರೆ ಈ ಕರಡಿನಲ್ಲಿ ಸಾಲ ನೀಡಿದವರಿಗೆ ಯಾವುದೇ ರೀತಿಯ ರಕ್ಷಣೆ ಕಾಣುತ್ತಿಲ್ಲ ಎಂದು ಕಾರಣ ನೀಡಿ, ಈ ಲೋಪವನ್ನು ಸರಿಪಡಿಸಲು ಸೂಚನೆ ನೀಡಿ ಸಹಿ ಹಾಕದೆ ಕರಡು ಪ್ರತಿಯನ್ನು ಹಾಗೆಯೇ ವಾಸ್ ಕಳುಹಿಸಿದ್ದರು.
ಇದಾದ ಬಳಿಕ ಈ ಎಲ್ಲಾ ತಿದ್ದುಪಡಿಗಳನ್ನು ಪೂರ್ಣಗೊಳಿಸಿ ಮತ್ತೊಮ್ಮೆ ರಾಜ್ಯಪಾಲರ ಸಹಿಗಾಗಿ ರಾಜಭವನಕ್ಕೆ ಕಳುಹಿಸಲಾಗಿತ್ತು. ಇದೀಗ ರಾಜ್ಯಸರ್ಕಾರದ ಈ ಸುಗ್ರೀವಾಜ್ಞೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ನಾಳೆಯಿಂದ ಆರು ತಿಂಗಳುಗಳ ಕಾಲ ಜಾರಿಯಲ್ಲಿರಲಿದೆ.
ಹೀಗಾಗಿ ಇನ್ನಾದ್ರೂ ಈ ಮೈಕ್ರೋ ಫೈನಾನ್ಸ್ ಆಟಕ್ಕೆ ಬ್ರೇಕ್ ಬೀಳುತ್ತಾ ಎಂಬುದನ್ನು ಕಾದುನಿಡಬೇಕುದೇ.