• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, November 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಿಎಫ್ ಉದ್ಯೋಗಿಗಳಿಗೆ ಕೇಂದ್ರದಿಂದ ಸಿಹಿಸುದ್ದಿ: ಕನಿಷ್ಠ ಪಿಂಚಣಿ ₹7,500ಕ್ಕೆ ಏರಿಕೆಯಾಗುವ ಸಾಧ್ಯತೆ!

Shivakumar by Shivakumar
November 5, 2026
in Top Story, ದೇಶ
0
Good news from the Centre for PF employees: Minimum pension likely to increase to ₹7,500!
Share on WhatsAppShare on FacebookShare on Telegram

ನವದೆಹಲಿ :  ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ವ್ಯಾಪ್ತಿಯಲ್ಲಿ ಬರುವ ಪಿಎಫ್ ಚಂದಾದಾರರು ಮತ್ತು ಪಿಂಚಣಿದಾರರಿಗೆ ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ ಸಿಗುವ ಸಾಧ್ಯತೆ ಇದೆ. ನೌಕರರ ಪಿಂಚಣಿ ಯೋಜನೆ (EPS-95) ಅಡಿಯಲ್ಲಿ ನೀಡಲಾಗುತ್ತಿರುವ ಕನಿಷ್ಠ ಮಾಸಿಕ ಪಿಂಚಣಿಯನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.

ADVERTISEMENT

ಪ್ರಸ್ತುತ ಇಪಿಎಫ್‌ಒ ಅಡಿಯಲ್ಲಿ ಕನಿಷ್ಠ ಮಾಸಿಕ ಪಿಂಚಣಿ ಕೇವಲ ₹1,000 ಆಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಇದನ್ನು ₹7,500ಕ್ಕೆ ಹೆಚ್ಚಿಸಬೇಕೆಂದು ನೌಕರರ ಸಂಘಟನೆಗಳು ಹಾಗೂ ನಿವೃತ್ತ ನೌಕರರು ದೀರ್ಘಕಾಲದಿಂದ ಬಲವಾಗಿ ಒತ್ತಾಯಿಸುತ್ತಿದ್ದಾರೆ.

ಗುಜರಾತ್‌ನ ಗಿರ್‌ನಲ್ಲಿ ನವೆಂಬರ್ 19ರಂದು ಇಪಿಎಫ್‌ಒದ 240ನೇ ‘ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್’ (CBT) ಸಭೆ ನಡೆಯಲಿದೆ. ಈ ಮಹತ್ವದ ಸಭೆಯಲ್ಲಿ ಕನಿಷ್ಠ ಪಿಂಚಣಿಯನ್ನು ₹1,000ದಿಂದ ₹7,500ಕ್ಕೆ ಹೆಚ್ಚಿಸುವ ಪ್ರಸ್ತಾಪದ ಕುರಿತು ಚರ್ಚೆ ನಡೆದು, ಸಕಾರಾತ್ಮಕ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಇತ್ತೀಚೆಗಷ್ಟೇ ಇಪಿಎಫ್‌ಒ ವ್ಯಾಪ್ತಿಗೆ ಒಳಪಡುವ ಗರಿಷ್ಠ ವೇತನ ಮಿತಿಯನ್ನು ಕೇಂದ್ರ ಸರ್ಕಾರವು ₹15,000ದಿಂದ ₹25,000ಕ್ಕೆ ಹೆಚ್ಚಿಸಿದೆ. ಈ ಬೆನ್ನಲ್ಲೇ ಪಿಂಚಣಿ ಮೊತ್ತದಲ್ಲೂ ಪರಿಷ್ಕರಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.

ಪಿಂಚಣಿ ಲೆಕ್ಕಾಚಾರದ ವಿಧಾನ ಹೇಗೆ?

ಉದ್ಯೋಗಿಯೊಬ್ಬರು ಕನಿಷ್ಠ 10 ವರ್ಷಗಳ ಸೇವಾವಧಿ ಪೂರೈಸಿದರೆ, 60 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ.

ಒಂದು ವೇಳೆ ಸೇವಾವಧಿ 10 ವರ್ಷಕ್ಕಿಂತ ಕಡಿಮೆಯಿದ್ದರೆ, ಕೆಲಸ ಬಿಡುವ ಸಂದರ್ಭದಲ್ಲಿ ಪಿಂಚಣಿ ನಿಧಿಯನ್ನು ಒಟ್ಟಾಗಿ ಹಿಂಪಡೆಯಲು ಅವಕಾಶವಿದೆ.

ಪಿಂಚಣಿಯ ಮಾಸಿಕ ಮೊತ್ತವನ್ನು (ಪಿಂಚಣಿಗೆ ಅರ್ಹ ವೇತನ × ಅರ್ಹತಾ ಸೇವಾವಧಿ) ÷ 70 ಸೂತ್ರದ ಮೂಲಕ ಲೆಕ್ಕಹಾಕಲಾಗುತ್ತದೆ. ನಿವೃತ್ತಿಗೆ ಮುನ್ನ ಪಡೆದ ಕೊನೆಯ 60 ತಿಂಗಳ ಸರಾಸರಿ ಮೂಲ ವೇತನವನ್ನು ಇದಕ್ಕೆ ಪರಿಗಣಿಸಲಾಗುತ್ತದೆ.

ಕೇಂದ್ರ ಸರ್ಕಾರದಿಂದ ಈ ಪ್ರಸ್ತಾಪಕ್ಕೆ ಅಂತಿಮ ಅನುಮೋದನೆ ದೊರೆತರೆ, ದೇಶಾದ್ಯಂತ ಲಕ್ಷಾಂತರ ನಿವೃತ್ತ ಉದ್ಯೋಗಿಗಳಿಗೆ ಮತ್ತು ಪ್ರಸ್ತುತ ಪಿಎಫ್ ಚಂದಾದಾರರಿಗೆ ವೃದ್ಧಾಪ್ಯದಲ್ಲಿ ದೊಡ್ಡ ಆರ್ಥಿಕ ನೆರವು ಸಿಗಲಿದೆ.

ರಾಜ್ಯದ ಜನತೆಗೆ ಕೆಎಂಎಫ್ ಶಾಕ್: ನಂದಿನಿ ತುಪ್ಪ, ಪನ್ನೀರ್ ಬೆಲೆಯೂ ಏರಿಕೆ

Tags: EPFOepsgood news
Previous Post

ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದ ಸಕ್ಕರೆ ಕಾರ್ಖಾನೆಗಳು : ಪ್ರತಿ ಟನ್‌ಗೆ ₹3,600 ದರ ನಿಗದಿ

Next Post

ಹಾಸನಾಂಬ ಕ್ರೀಡೋತ್ಸವ: ವಿಜೇತ ಕುಸ್ತಿಪಟುಗಳಿಗೆ ಸಚಿವ ಶಿವಲಿಂಗೇಗೌಡರಿಂದ ಪ್ರಶಸ್ತಿ ಪ್ರದಾನ

Related Posts

State Cabinet gives the green signal for several projects, including ₹20000 crore for road development and the introduction of robotic surgery!
Top Story

ರಾಜ್ಯದಲ್ಲಿ ರಸ್ತೆ ಅಭಿವೃದ್ಧಿಗೆ ₹20,000 ಕೋಟಿ, ರೋಬೋಟಿಕ್ ಸರ್ಜರಿ ಸೇರಿ ಹಲವು ಯೋಜನೆಗಳಿಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ ! 

by Shivakumar
November 5, 2026
0

ಬೆಂಗಳೂರು: ಇಂದು ಸಿಎಂ ಡಿ.ಕೆ. ಶಿವಕುಮಾರ್ (CM D.K. Shivakumar) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಮೂಲಸೌಕರ್ಯ, ಆರೋಗ್ಯ, ಕೈಗಾರಿಕೆ, ನೀರಾವರಿ ಹಾಗೂ...

Read moreDetails
Kannada is the only language that views a human being as a human being: T.S. Nagabharana

ಮನುಷ್ಯನನ್ನು ಮನುಷ್ಯನಂತೆ ಕಾಣುವ ಏಕೈಕ ಭಾಷೆ ಕನ್ನಡ: ಟಿ.ಎಸ್. ನಾಗಾಭರಣ

November 5, 2026
Rahul Gandhi’s style is ‘no data, only commotion’: BJP national spokesperson Sambit Patra launches an attack

ರಾಹುಲ್ ಗಾಂಧಿ ಅವರದ್ದು ‘ನೋ ಡಾಟಾ, ಓನ್ಲಿ ಗಲಾಟ’: ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ವಾಗ್ದಾಳಿ

November 5, 2026
Are you doing your Diwali shopping using a credit card? If so, don't forget these 4 precautions!

ಕ್ರೆಡಿಟ್ ಕಾರ್ಡ್ ಬಳಸಿ ದೀಪಾವಳಿ ಶಾಪಿಂಗ್ ಮಾಡುತ್ತಿದ್ದೀರಾ? ಹಾಗಾದರೆ ಈ 4 ಎಚ್ಚರಿಕೆಗಳನ್ನು ಮರೆಯದಿರಿ!

November 5, 2026
24-hour deadline begins the moment a person is taken into custody: Supreme Court's significant ruling

ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಯ ಗಡುವು ಆರಂಭ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

November 5, 2026
Next Post
Hassanamba Sports Festival: Minister Shivalingegowda presents awards to winning wrestlers

ಹಾಸನಾಂಬ ಕ್ರೀಡೋತ್ಸವ: ವಿಜೇತ ಕುಸ್ತಿಪಟುಗಳಿಗೆ ಸಚಿವ ಶಿವಲಿಂಗೇಗೌಡರಿಂದ ಪ್ರಶಸ್ತಿ ಪ್ರದಾನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada