
ಮಾಜಿ ಸಚಿವ, ಬಿಜೆಪಿ ಶಾಸಕ ಜನಾರ್ದನ ರೆಡ್ಡಿಗೆ (Bjp janardhana reddy) ಬಳ್ಳಾರಿಗೆ ತೆರಳಲು ಇದ್ದ ನಿರ್ಬಂಧ ತೆರವುಗೊಳಿಸಿ ಸುಪ್ರೀಂ ಕೋರ್ಟ್ (Supreme court) ಆದೇಶ ಹೊರಡಿಸಿದೆ. ಈ ಮೂಲಕ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಬಳ್ಳಾರಿ ಅಕ್ರಮ ಗಣಿಗಾರಿಕೆ (Bellary illegal mining) ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಪ್ರಮುಖ ಆರೋಪಿಯಾಗಿದ್ದರಿಂದ ನ್ಯಾಯಾಲಯ ಬಳ್ಳಾರಿ ಪ್ರೇಶಕ್ಕೆ ನಿರ್ಬಂಧ ಹೇರಿತ್ತು. 2011 ರ ಸೆಪ್ಟೆಂಬರ್ 5 ರಂದು ಜನಾರ್ದನ ರೆಡ್ಡಿ ಬಂಧನವಾಗಿತ್ತು. ಆರೋಪಿ ಪ್ರಭಾವಿಯಾಗಿದ್ದು ಸಾಕ್ಷಿನಾಶ ಮಾಡುವ ಸಾಧ್ಯತೆಯಿದೆ ಎಂದು ಪರಿಗಣಿಸಿದ ನ್ಯಾಯಾಲಯ ಅಮದು ರೆಡ್ಡಿ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.

ಇಲ್ಲಿ ತನಕ ರೆಡ್ಡಿ ಬಳ್ಳಾರಿಗೆ ಹೋಗಬೇಕಂದ್ರೆ ಸಕಾರಣ ನೀಡಿ ನ್ಯಾಯಾಲಯದಿಂದ ಪೂರ್ವಾನುಮತಿ ಪಡೆದು, ನಂತರ ನಿಗಧಿತ ದಿನಗಳಿಗೆ ಮಾತ್ರ ಬಳ್ಳಾರಿ ಪ್ರೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದ್ರೆ ಇನ್ಮುಂದೆ ಯಾವ ಪೂರ್ವಾನುಮತಿಯೂ ಇಲ್ಲದೆ ರೆಡ್ಡಿ ಬಳ್ಳಾರಿಗೆ ತೆರಳಬಹುದಾಗಿದೆ. ಸುಪ್ರೀಂ ಕೋರ್ಟ್ ನ ನ್ಯಾ.ಎಂ.ಎಂ. ಸುಂದರೇಶನ್ (Judge sundareshan) ರವರ ದ್ವಿಸದಸ್ಯ ಪೀಠದಿಂದ ಈ ಆದೇಶ ಹೊರಡಿಸಲಾಗಿದ್ದು, ಜನಾರ್ದನ ರೆಡ್ಡಿ ಫುಲ್ ಖುಷ್ ಆಗಿದ್ದಾರೆ.
