ಸ್ಯಾಂಡಲ್ವುಡ್ ನ ಭರವಸೆಯ ನಟ ಕಿರಣ್ ರಾಜ್ ಹುಟ್ಟು ಹಬ್ಬದಂದು ಸಿಕ್ಕಿತು ಮತ್ತೊಂದು ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ ಮತ್ತು ಉದ್ಯೋನ್ಮುಖ ನಟ ಕಿರಣ್ ರಾಜ್, ಕಾಂಬಿನೇಷನ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದೇ,ಅದುವೇ ಜಾಕಿ 42 ಮೂಲಕ.

ಗೋಲ್ಡನ್ ಗೇಟ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ, ಭಾರತಿ ಸತ್ಯ ನಾರಾಯಣ, ನಿರ್ಮಿಸುತ್ತಿರುವ ಮೊಟ್ಟ ಮೊದಲ ಚಿತ್ರ ಜಾಕಿ42 ಹಾರ್ಸ್ ರೇಸಿಂಗ್ ಕಥಾ ವಸ್ತುವನ್ನೇ ಮೂಲವಾಗಿಟ್ಟು, ಸಿನೆಮಾ ಮಾಡುತ್ತಿರುವ,ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಮೊದಲ ಸಿನಿಮಾ ಇದಾಗಲಿದೆ ಎಂದರು ಸಹ ತಪ್ಪಿಲ್ಲ..

ಈಗಾಗಲೇ ಬೆಂಗಳೂರು ಸುತ್ತ ಮುತ್ತಲೂ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಜಾಕಿ 42 ಚಿತ್ರಕ್ಕಾಗಿಯೇ ನಾಯಕ ನಟ ಕಿರಣ್ ರಾಜ್ ಥೈಲ್ಯಾಂಡ್ ಗೆ ಹಾರ್ಸ್ ರೈಡಿಂಗ್ ಜಾಕಿ ಟ್ರೈನಿಂಗ್ ತೆಗೆದುಕೊಂಡು ಬಂದಿರುವುದು ವಿಶೇಷವಾಗಿದೆ ಚಿತ್ರದಲ್ಲಿ ದೊಡ್ಡ ಮಟ್ಟದ ಕಲಾವಿದರ ದಂಡು ಇರಲಿದ್ದು, ಮುಂದಿನ ದಿನಗಳಲ್ಲಿ ಆದರ ಬಗ್ಗೆ ಮಾಹಿತಿ ಸಿಗಲಿದೆ