
ಈ ಬಾರಿಯ ನಾಡಹಬ್ಬ ದಸರಾ 2025 (Dasara 2025) ಸಮೀಪಿಸುತ್ತಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ಈಗಾಗಲೇ ಸಿದ್ಧತೆಗಳು ಆರಂಭವಾಗಿದೆ. ಗಜಪಡೆಯ ತಾಲೀಮಿನಿಂದ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ವೇದಿಕೆ ಸಿದ್ಧವಾಗುತ್ತಿದೆ.

ಈ ನಡುವೆ ಮೈಸೂರು ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಪಾಸ್ ಗಳನ್ನು ಬಿಡುಗಡೆ ಮಾಡಲಾಗಿದೆ. ಯಾವುದಕ್ಕೆ ಎಷ್ಟು ದರ ಎಂದು ನೋಡಿದ್ರೆ.. ಪಂಜಿನ ಕವಾಯತು 1500/- ಜಂಬೂಸವಾರಿ 3500/- , ಗೋಲ್ಡ್ ಕಾರ್ಡ್ 6500/- ಇದೆ

ಒಂದೇ ಬಾರಿ 6500/- ಕೊಟ್ಟು ಒಂದು ಗೋಲ್ಡ್ ಕಾರ್ಡ್ ಖರೀದಿಸಿರುವವರು ಚಾಮರಾಜೇಂದ್ರ ಪ್ರಾಣಿ ಸಂಗ್ರಹಾಲಯ, ಮೈಸೂರು ಅರಮನೆ, ಚಾಮುಂಡಿ ಬೆಟ್ಟಕ್ಕೆ ಒಂದು ಬಾರಿ ಮಾತ್ರ ಉಚಿತವಾಗಿ ಪ್ರವೇಶ ದೊರೆಯಲಿದೆ. ಡ್ರೋನ್ ಶೋ, ಪಂಜಿನ ಕವಾಯಿತು ಹಾಗೂ ಜಂಬೂಸವಾರಿ ವೀಕ್ಷಣೆಗೆ ಗೋಲ್ಡನ್ ಕಾರ್ಡ್ ಪಡೆದಿರುವವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಇರಲಿದೆ.