
ಶಿವಮೊಗ್ಗ: ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ತಂದೆ ಡಿಜಿಪಿ ರಾಮಚಂದ್ರರಾವ್ ಕಡ್ಡಾಯ ರಜೆ ಮೇಲೆ ತೆರಳಿರುವ ವಿಚಾರವಾಗಿ ಶಿವಮೊಗ್ಗದಲ್ಲಿ ಸಚಿವ ಸಂತೋಷ್ ಲಾಡ್ ಮಾತನಾಡಿ, ಏರ್ಪೋರ್ಟ್ ಅಥಾರಿಟಿ ಇರುವುದು ಕೇಂದ್ರ ಸರ್ಕಾರದ ಅಧೀನದಲ್ಲಿ, ಆದರೂ ಪ್ರೋಟೋಕಾಲ್ ಉಲ್ಲಂಘನೆಯಾಗಿದೆ ಅಂತ ನಮ್ಮನ್ನು ಸುಮ್ಮನೆ ಪ್ರಶ್ನೆ ಕೇಳುತ್ತಿದ್ದೀರಾ..? ಎಂದು ಪ್ರಶ್ನೆ ಕೇಳಿದ್ದಾರೆ.

ಸರ್ಕಾರದ ಸಿನಿಯರ್ ಆಫೀಸರ್ಗಳು ಭಾಗಿಯಾಗಿದ್ದರೆ ತನಿಖೆಯಾಗಲಿ ಅಭ್ಯಂತರ ಇಲ್ಲ ಎಂದಿದ್ದಾರೆ ಸಚಿವ ಸಂತೋಷ್ ಲಾಡ್. ಗೋಲ್ಡ್ ಕೇವಲ ಬೆಂಗಳೂರಿಗೆ ಮಾತ್ರ ಬಂದಿಲ್ಲ. ಸರ್ವೇ ರಿಪೂರ್ಟ್ ಪ್ರಕಾರ ಗೋಲ್ಡ್ ಸ್ಮಗ್ಲಿಂಗ್ ಭಾರತದಲ್ಲಿ ಬಾಂಬೆ ನಂಬರ್ ಒನ್ ಸ್ಥಾನದಲ್ಲಿದೆ. ಇದು ಸಮರ್ಪಕವಾಗಿ ತನಿಖೆ ಆಗಲಿ ಎಂದು ನಾನು ಒತ್ತಾಯ ಮಾಡುತ್ತೇನೆ ಎಂದು ಆಗ್ರಹ ಮಾಡಿದ್ದಾರೆ.

ಡಿಜಿಪಿ ರಾಮಚಂದ್ರ ರಾವ್ ರಜೆ ತೆಗೆದುಕೊಂಡಿರುವ ಉದ್ದೇಶ ನನಗೆ ಗೊತ್ತಿಲ್ಲ. ಡಿಜಿಪಿ ರಾಮಚಂದ್ರ ರಾವ್ ಏರ್ಪೋರ್ಟ್ ನಲ್ಲಿ ಇರುವುದಿಲ್ಲ. ಏರ್ಪೋರ್ಟ್ ನಲ್ಲಿ ಇರುವ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳು. ಪ್ರೋಟೋ ಕಾಲ್ ದುರ್ಬಳಕೆ ಆಗಿದ್ದರೆ ತನಿಖೆ ಆಗಲಿ ಎಂದಿದ್ದಾರೆ.
ಒಂದು ಬಾರಿ ಅಲ್ಲ 30 ರಿಂದ 40 ಬಾರಿ ಆಕೆ ದುಬೈಗೆ ಹೋಗಿ ಬಂದಿರುವುದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇಲ್ಲವಾ..? ಎಂದು ಪ್ರಶ್ನಿಸಿರುವ ಸಂತೋಷ್ ಲಾಡ್, ಪೊಲೀಸ್ ಆಫೀಸರ್ ಏನು ಮಾಡಲು ಸಾಧ್ಯ..? ಪೊಲೀಸ್ ಆಫೀಸರ್ ಹೇಳಿದ ತಕ್ಷಣ ಕಸ್ಟಮ್ ಅಧಿಕಾರಿಗಳು ಬಿಟ್ಟು ಬಿಡುತ್ತಾರಾ..? ಪೊಲೀಸ್ ಆಫೀಸರ್ಸ್ ಬ್ಯಾಗ್ ಹಿಡಿದುಕೊಂಡು ಕಸ್ಟಮ್ ಅಧಿಕಾರಿಗಳನ್ನು ಬೈ ಪಾಸ್ ಮಾಡಿ ಕರೆದುಕೊಂಡು ಬರುತ್ತಾರಾ..? ಎಂದು ಪ್ರಶ್ನಿಸಿದ್ದಾರೆ.

ಕಸ್ಟಮ್ಸ್ ಅಧಿಕಾರಿಗಳು ಯಾರು, ಅವರನ್ನು ಹೇಗೆ ಬಿಟ್ಟರು ಎಂದು ಮೊದಲು ಬಿಜೆಪಿ ಅವರಿಗೆ ಕೇಳಬೇಕು ಎಂದಿರುವ ಸಂತೋಷ್ ಲಾಡ್, ಒಂದು ಬಾರಿ ಓಕೆ ಎರಡು ಬಾರಿ ಓಕೆ 30-40 ಬಾರಿ ಹೋಗಿ ಬಂದಿದ್ದಾರೆ. ಇದರಲ್ಲಿ ಯಾರು ಇನ್ ವಾಲ್ಡ್ ಇದ್ದಾರೆ ಹೇಳಿ..? ಪ್ರೋಟೊ ಕಾಲ್ ಉಲ್ಲಂಘನೆ ಆಗಿದೆ ಎಂದು ಪದೇ ಪದೇ ನಮಗೆ ಕೇಳುತ್ತಿರಾ, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಬರುವುದಿಲ್ಲ. ಲೋಪ ಆಗಿರುವುದು ಕಸ್ಟಮ್ ಅಧಿಕಾರಿಗಳಿಂದ. ಕೇಂದ್ರ ಸರ್ಕಾರದ ಅಧೀನದಲ್ಲಿ ಕಸ್ಟಮ್ ಅಧಿಕಾರಿಗಳು ಕೆಲಸ ಮಾಡ್ತಾರೆ ಎಂದಿದ್ದಾರೆ.

ರನ್ಯಾ ಪ್ರಕರಣದಲ್ಲಿ ಇಬ್ಬರು ಸಚಿವರ ಭಾಗಿಯಾಗಿದ್ದಾರೆ ಎಂದು ಶಾಸಕ ಮುನಿರತ್ನ ಹೇಳಿಕೆ ವಿಚಾರವಾಗಿ ಮಾತನಾಡಿ, ಮುನಿರತ್ನ ಏನು ಮಾತಾಡಿದ್ದಾರೆ ಅದರ ಬಗ್ಗೆ ನಾನು ಟೀಕೆ ಮಾಡಲು ಹೋಗುವುದಿಲ್ಲ. ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಗೋತ್ತಾಬೇಕು ಅಲ್ವಾ..? ಅದಾನಿಗೆ ಸೇರಿದ ರ್ಪೋರ್ಟ್ನಲ್ಲಿ 21 ಸಾವಿರ ಕೋಟಿಯ ಡ್ರಗ್ಸ್ ಪತ್ತೆ ಆಗಿತ್ತು. ಅದರ ಬಗ್ಗೆ ಯಾಕೆ ಈ ದೇಶದಲ್ಲಿ ಯಾರು ಮಾತಾಡಲಿಲ್ಲ..? ನಮ್ಮ ರಾಜ್ಯ ಸರ್ಕಾರದಿಂದ ಯಾರಾದರು ಅಧಿಕಾರಿ ಭಾಗಿಯಾಗಿದ್ದರೆ ಕ್ರಮ ಕೈಗೊಳ್ಳಲಿ. ಕಸ್ಟಮ್ ಅಧಿಕಾರಿಗಳು ಭಾಗಿಯಾಗದೇ ಈ ಸ್ಮಗ್ಲಿಂಗ್ ಮಾಡಲು ಆಗಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ..