
ರಾಜ್ಯ ಸರ್ಕಾರಕ್ಕೆ ಬಿಸಿ ತುಪ್ಪವಾದ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ. ರಾಜ್ಯ ಸರ್ಕಾರದ ಸಚಿವರೇ ಪ್ರಕರಣದಲ್ಲಿ ಸಿಕ್ಕಿ ಬೀಳುವ ಬಗ್ಗೆ ವ್ಯಾಪಕ ಚರ್ಚೆ ಬೆನ್ನಲ್ಲೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಚರ್ಚೆ ಮಾಡಿದ್ದಾರೆ. ಅರ್ಧ ಗಂಟೆಗಳ ಕಾಲ ಕ್ಲೋಸ್ಡ್ ಡೋರ್ ಮೀಟಿಂಗ್ ಮಾಡಿದ್ದಾರೆ. ಯಾರನ್ನೂ ಒಳಗೆ ಬಿಟ್ಟುಕೊಳ್ಳದೇ ಚರ್ಚೆ ನಡೆಸಿದ್ದಾರೆ ಸಿಎಂ ಹಾಗೂ ಡಿಸಿಎಂ.
ಈಗಾಗಲೇ ಪ್ರಕರಣದ ತನಿಖೆಗೆ ಸಿಬಿಐ ಎಂಟ್ರಿ ಆಗಿದ್ದು, ರಾಜ್ಯ ಸರ್ಕಾರ ಏನು ಮಾಡಬೇಕು ಅನ್ನೋ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ. ಬಿಜೆಪಿ ಶಾಸಕ ಸುನಿಲ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ಚಿತ್ರನಟಿ ರನ್ಯಾ ರಾವ್‌ನ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಸಂಬಂಧಿಸಿದಂತೆ ಅನುಮಾನ ಮೂಡಿಸಿದೆ. ದುಬೈನಿಂದ ಬರುವಾಗ ಚಿನ್ನ ಕಳ್ಳ ಸಾಗಾಣಿಕೆ ಆಗಿರೋದು ಪತ್ತೆಯಾಗಿದೆ. ಅಂದು ಕಳ್ಳ ಸಾಗಾಣೆ ಮಾಡಿದ ಗೋಲ್ಡ್ ಎಲ್ಲಿಗೆ ಹೋಗಿದೆ..? ಎಂದು ಪ್ರರ್ಶನಿಸಿದ್ದಾರೆ.

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಜಕಾರಣಿಗಳು ಹಾಗು ಸರ್ಕಾರಿ ಅಧಿಕಾರಿಗಳ ಪಾತ್ರವಿಲ್ಲದೆ ಇಷ್ಟೆಲ್ಲಾ ಆಗಲು ಸಾಧ್ಯವಿಲ್ಲ. ಒಬ್ಬ ಹಿರಿಯ ಅಧಿಕಾರಿಯ ಮಗಳಿಗೆ ಸರ್ಕಾರ ಪ್ರೊಟೋಕಾಲ್ ಯಾಕೆ ಕೊಡ್ತಿತ್ತು..? ತಿಂಗಳಲ್ಲಿ ನಾಲ್ಕೈದು ಬಾರಿ ದುಬೈಗೆ ಹೋಗಿರೋ ಮಾಹಿತಿ ಇದೆ. ಈವರೆಗೂ ಕಳ್ಳತನ ಆಗಿರೋ ಗೋಲ್ಡ್ ಚಾಮರಾಜಪೇಟೆಗೋ, ಸದಾಶಿವನಗರಕ್ಕೋ ಅಥವಾ ವಿಧಾನಸಭೆ ಮೊಗಸಾಲೆಗೋ..? ಎಲ್ಲಿಗೆ ಹೋಯ್ತು..? ಎಂದಿದ್ದಾರೆ.
ಸರ್ಕಾರಕ್ಕೆ ಇಷ್ಟು ಕಳ್ಳ ಸಾಗಾಣೆ ಆಗಲು ಕಾರಣ ಯಾರು.? ಪೊಲೀಸ್ ನೆರಳಲ್ಲೇ ಇಷ್ಟು ಕಳ್ಳ ಸಾಗಾಣಿಕೆ ಆಗಿದೆ ಅನ್ನೋ ಅನುಮಾನ ಇದೆ. ಕೇರಳದಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಎಷ್ಟೆಲ್ಲಾ ಚರ್ಚೆಗೆ ಕಾರಣವಾಯಿತು. ಕರ್ನಾಟಕ ಸರ್ಕಾರ ಕೂಡ ಇದೇ ರೀತಿ ಸುದ್ದಿಯಾಗಿದೆ. ಕೇಂದ್ರ ಸರ್ಕಾರದ ಮಾಹಿತಿಯಿಂದಲೇ ಈ ಪ್ರಕರಣ ಹೊರಗೆ ಬಂದಿರುವುದು. ಕಳ್ಳ ಸಾಗಣೆ ತಡೆಯುವುದು ಕೇಂದ್ರ ಸರ್ಕಾರ ಕರ್ತವ್ಯ ಅಂತ ರಾಜ್ಯ ಸರ್ಕಾರ ಕಳ್ಳ ಸಾಗಾಣಿಕೆ ಬಿಟ್ಟು ಬಿಡ್ತೀರಾ..? ಎಂದು ಪ್ರಶ್ನಿಸಿದ್ದಾರೆ. ಸರ್ಕಾರ, ಮಂತ್ರಿ ಮಂಡಲ ಸ್ವಚ್ಚವಾಗಿದ್ರೆ ತನಿಖೆಗೆ ನೀಡಿ ಎಂದು ಶಾಸಕ ಸುನಿಲ್ ಕುಮಾರ್ ಆಗ್ರಹ ಮಾಡಿದ್ದಾರೆ.

ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಡಿಐಜಿ ರಾಮಚಂದ್ರರಾವ್ ಅಧಿಕಾರ ದುರ್ಬಳಕೆ ಸಂಬಂಧ ತನಿಖೆಗೆ ನೇಮಿಸಿರುವ ಬೆನ್ನಲ್ಲೆ ಸಿಎಂ ಭೇಟಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಪ್ರಕರಣದ ತನಿಖಾಧಿಕಾರಿ ಗೌರವ್ ಗುಪ್ತಾ. ವಿಧಾನಸಭೆಯ ಸಿಎಂ ಸಿದ್ದರಾಮಯ್ಯ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಪ್ರೋಟೋಕಾಲ್ ಪ್ರಕರಣದ ತನಿಖಾಧಿಕಾರಿಯಾಗಿ ಗೌರವ್ ಗುಪ್ತಾ ನೇಮಕ ಆಗಿದ್ದಾರೆ. ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ಗೆ ಪೊಲೀಸರ ಸಹಕಾರದ ತನಿಖೆ ಮಾಡಲಿದ್ದಾರೆ ಗೌರವ್ ಗುಪ್ತಾ.