
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿ ಆಗಿರುವ ಚಿತ್ರನಟಿ ರನ್ಯಾ ರಾವ್ ಪ್ರಕರಣದಲ್ಲಿ ಇಂದು ಜಾಮೀನು ಭವಿಷ್ಯ ನಿರ್ಧಾರ ಆಗಲಿದೆ. ನಟಿ ರನ್ಯಾ ರಾವ್ ಜಾಮೀನು ಅದೇಶ ಪ್ರಕಟಿಸಲಿದೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ. ವಾದ ಪ್ರತಿವಾದ ಆಲಿಸಿದ ಬಳಿಕ ಕೋರ್ಟ್ ಇಂದಿಗೆ ಅದೇಶ ಕಾಯ್ದಿರಿಸಿತ್ತು. ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ನಟಿ ರನ್ಯಾ ರಾವ್ ಪರವಾಗಿ ಕಿರಣ್ ಜವಳಿ ವಾದ ಮಾಡಿದ್ರೆ, ಡಿಆರ್ಐ ಪರವಾಗಿ ಮಧು ರಾವ್ ವಾದ ಮಾಡಿದ್ದರು.

ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಡಿಆರ್ಐ ತನಿಖೆ ಮಾಡ್ತಿದ್ದು, ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಜನವರಿಯಿಂದ ಇಲ್ಲಿವರೆಗೂ ದುಬೈನಿಂದ ಭಾರತಕ್ಕೆ 38.98 ಕೆ.ಜಿ ಚಿನ್ನ ಅಕ್ರಮವಾಗಿ ಚಿನ್ನ ಸಾಗಾಟ ಆಗಿದೆ. ಅದರಲ್ಲೂ ಬೆಂಗಳೂರು ಹಾಗೂ ಮುಂಬೈ ಏರ್ ಪೋರ್ಟ್ಗೆ 38.98 KG ಚಿನ್ನ ಬಂದಿದೆ. ಈ ಸಂಬಂಧ ಇದುವರೆಗೂ ನಾಲ್ಕು ಪ್ರಕರಣ ದಾಖಲಿಸಿಕೊಂಡಿದ್ದಾರೆ ಡಿಆರ್ಐ ಅಧಿಕಾರಿಗಳು. ಈ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ತನಿಖೆ ನಡೆಸಲು ಈ ಹಿಂದೆಯೇ ಸಿಬಿಐಗೆ ಪತ್ರ ಬರೆದಿದ್ದರು ಡಿಆರ್ಐ ಅಧಿಕಾರಿಗಳು. ಹೀಗಾಗಿ ಬೆಂಗಳೂರು ಹಾಗೂ ಮುಂಬೈ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರ ವಿಚಾರಣೆ ಮಾಡಲಾಗ್ತಿದೆ. ಕಸ್ಟಮ್ಸ್ ಆಧಿಕಾರಿಗಳಿಗೆ ನೋಟಿಸ್ನೀಡಿ ವಿಚಾರಣೆ ಮಾಡ್ತಿದ್ದಾರೆ ಸಿಬಿಐ ಅಧಿಕಾರಿಗಳು. ಕಸ್ಟಮ್ಸ್ ಅಧಿಕಾರಿಗಳ ಸಹಾಯ ಇಲ್ಲದೆ ಇಷ್ಟೆಲ್ಲಾ ದೊಡ್ಡ ಮಟ್ಟದ ಚಿನ್ನ ಸಾಗಾಣೆ ಸಾಧ್ಯ ಇಲ್ಲ ಅನ್ನೋ ಅನುಮಾನ ವ್ಯಕ್ತವಾಗಿದೆ. 2024ರಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭಾಗಿ ಆಗಿರೋದು ಬಯಲಾಗಿತ್ತು. ಹೀಗಾಗಿ ಕಸ್ಟಮ್ಸ್ ಅಧಿಕಾರಿಗಳ ವಿಚಾರಣೆಗೆ ಮುಂದಾಗಿದೆ ಸಿಬಿಐ.

ಸಿಬಿಐ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡಿದ್ದಾರೆ. ಕೇಸ್ ದಾಖಲಾಗ್ತಿದ್ದಂತೆ ಬೆಂಗಳೂರು ಹಾಗೂ ಮುಂಬೈನಲ್ಲಿ ಇ.ಡಿ ದಾಳಿ ನಡೆಸಿದೆ. ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು, ಬಂಧಿತ ಆರೋಪಿಗಳು, ಶಂಕಿತರು, ಉದ್ಯಮಿಗಳು, ಚಿನ್ನದ ವ್ಯಾಪಾರಸ್ಥರು ಹಾಗೂ ಕಚೇರಿಗಳ ಮೇಲೆ ಇ.ಡಿ ದಾಳಿ ಮಾಡಿದೆ. ಚಿನ್ನ ಕಳ್ಳಸಾಗಾಣೆ, ವಿತರಣೆ ಬಗ್ಗೆ ಚಿನ್ನದ ವ್ಯಾಪಾರಸ್ಥರ ಬಳಿ ವಿಚಾರಣೆ ಮಾಡಲಾಗ್ತಿದೆ. ದಾಳಿ ವೇಳೆ ಚಿನ್ನದ ವ್ಯಾಪಾರಸ್ಥರ ಬಳಿ ಅಪಾರ ಚಿನ್ನಾಭರಣ ಪತ್ತೆಯಾಗಿದೆ. ಇದ್ರಲ್ಲಿ ಕಳ್ಳ ಸಾಗಾಣೆಯ ಚಿನ್ನ ಇದೆಯಾ ಅನ್ನೋ ಬಗ್ಗೆ ಇಡಿ ತನಿಖೆ ಮಾಡುತ್ತಿದೆ. ಹವಾಲಾ ಜಾಲವೂ ಇರೋ ಬಗ್ಗೆಯೂ ತನಿಖೆ ನಡೆಯುತ್ತಿದೆ.