ಬಿಬಿಎಂಪಿ ಚುನಾವಣೆ ನಿಮಿತ್ತ ಸಲ್ಲಿಸಿದ್ದ ಡಿ ಲಿಮಿಟೇಶನ್ಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಜೂನ್ 9ರಂದು ರಾಜ್ಯ ಸರ್ಕಾರಕ್ಕೆ ಈ ಪ್ರಸ್ತಾವನೆಯನ್ನ ಸಲ್ಲಿಸಲಾಗಿತ್ತು.
ಇದೀಗ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿರುವುದರಿಂದ 198 ಇದ್ದ ವಾರ್ಡಿನ ಸಂಖ್ಯೆ 243ಕ್ಕೆ ಅಧಿಕೃತವಾಗಿ ಏರಿಕೆಯಾಗಿದೆ.

ಒಂದು ವೇಳೆ ಸಾರ್ವಜನಿಕರಿಂದ ಆಕ್ಷೇಪಗಳಿದ್ದರೆ ನಗರಾಭಿವೃದ್ಧಿ ಇಲಾಖೆಗೆ 15 ದಿನಗಳ ಒಳಗಾಗಿ ಆಕ್ಷೇಪಣೆ ಅಥವಾ ಸಲಹೆಗಳಿದ್ದರೆ ತಿಳಿಸುವಂತೆ ಸೂಚಿಸಲಾಗಿದೆ.
ಈ ಮೂಲಕ ಪಾಲಿಕೆ ಚುನಾವಣೆಗೆ ತೊಡಕಾಗಿದ್ದ ಡಿ ಲಿಮಿಟೇಷನ್ ವಿಘ್ನ ನಿವಾರಣೆಯಾಗಿದೆ.