ವಿಜಯ ದಿವಸದ ಪ್ರಯುಕ್ತ ಭಾರತ ಸರ್ಕಾರವು ಸೈನಿಕರಿಗೆ ವಿಶಿಷ್ಟವಾಗಿ ಗೌರವ ಸಲ್ಲಿಸಿದ್ದು 1971ರ ಯುದ್ದದಲ್ಲಿ ಪಾಕಿಸ್ತಾನ ಭಾರತದ ವಿರುದ್ದ ಸೋತು ಶರಣಾಗಿರುವ ಪೋಟೋವನ್ನು ಹಂಚಿಕೊಂಡು ಸಂಭ್ರಮಿಸಿದೆ.
1971ರಲ್ಲೆ ನಡೆದಿದ್ದ ಭಾರತ-ಪಾಕ್ ಯುದ್ದ ಹಾಗೂ ಬಾಂಗ್ಲಾದೇಶ ವಿಮೋಚನೆಯ ಸ್ಮರಣಾರ್ಥ ಡಿಸೆಂಬರ್ 16ರಂದು ದೇಶಾದ್ಯಂತ ವಿಜಯ ದಿವಸ್‌ಅನ್ನು ಆಚರಿಸಲಾಗುತ್ತದೆ.
ಈ ಕುರಿತು ಭಾರತ ಸರ್ಕಾರದ ಅಧಿಕೃತ ಟ್ವಿಟರ್ ಖಾತೆ MyGovIndiaದಲ್ಲಿ ಟ್ವೀಟ್ ಮಾಡಲಾಗಿದ್ದು 1971ರ ಯುದ್ದದಲ್ಲಿ ಹೋರಾಡಿದ ನಮ್ಮ ಸೈನಿಕರಿಗೆ ವಿಜಯ ದಿವಸದ ಈ ಸಂದರ್ಭದಲ್ಲಿ ನಮಿಸುತ್ತೇವೆ ದೇಶದ ಸುರಕ್ಷತೆಯನ್ನು ಖಾತ್ರಿ ಪಡಿಸಿದ ಅವರ ತ್ಯಾಗಕ್ಕೆ ಸರ್ಕಾರ ಗೌರವ ಸಲ್ಲಿಸುತ್ತದೆ ಎಂದು ಟ್ವೀಟ್ ಮಾಡಿದೆ.