ವಯನಾಡುವಿನಲ್ಲಿ (Vayanad) ಭಾರೀ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಭೂಕುಸಿತಕ್ಕೆ ಮಕ್ಕಳು ಸೇರಿದಂತೆ 47ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರೋ ಬಗ್ಗೆ ವರದಿಯಾಗಿದೆ. ವಯನಾಡಿನ ಮೆಪ್ಪಡಿಯಲ್ಲಿ (Meppadi) ಈ ದುರ್ಘಟನೆ ಸಂಭವಿಸಿದ್ದು, ಹಲವಾರು ಮಂದಿ ಅವಶೇಷದಡಿಯಲ್ಲಿ ಸಿಲುಕಿದ್ದಾರೆ.

ಮುಂದಕ್ಕೆ (mundakkai), ಚೂರಲ್ ಮಾಲಾ (Chooral mala), ಅಟ್ಟಮಾಲಾ ಮತ್ತು ನೂಲ್ವುಳಾ ಗ್ರಾಮಗಳು ಸೇರಿದಂತೆ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಗೆ ಭೂಕುಸಿತ ಸಂಭವಿಸಿದೆ. ಮುಂಕ್ಷೆ ಪ್ರದೇಶದಲ್ಲಿ ಅನೇಕ ಜನರನ್ನು ಏರ್‌ಲಿಫ್ಟ್ (Airlift) ಮಾಡುವ ಮೂಲಕ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಎನ್‌ಡಿಆಎಫ್ (NDRF) ತಂಡ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದ್ದು, ಸದ್ಯ ಸ್ಥಳದಲ್ಲಿನ ಪರಿಸ್ಥಿತಿ ಕಾರ್ಯಚರನೆಯನ್ನ (Rescue operation) ಬಹಳ ಕಷ್ಟಕರವನ್ನಾಗಿಸಿದೆ. ಜನರು ಸಿಲುಕಿರುವ ಸ್ಥಳಗಳಿಗೆ ತಲುಪೋದೇ ಅಸಾಧ್ಯವಾಗಿದ್ದು, ಇದೀಗ ಹೆಲಿಕಾಪ್ಟರ್‌ಗಳ (Helicopter) ಮೂಲಕ ರಕ್ಷಣಾ ಕಾರ್ಯಾ ಮುಂದುವರೆಸಲು ಯೋಜನೆ ಮಾಡಲಾಗಿದೆ.