ಆರ್ಥಿಕವಾಗಿ ದುರ್ಬಲರಾದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆರೋಪಿದ್ದಾರೆ.
ಈ ಕುರಿತು ಇಂದು ಪತ್ರಿಕಾಗೀಷ್ಠಿ ಮಾಡಿದ ಅವರು, ಬಿಜೆಪಿ ಸರ್ಕಾರ ಬಂದಿದ್ದೇ ವಾಮಮಾರ್ಗದಿಂದ ಅದನ್ನ ಮುಂದುವರೆಸಿಕೊಂಡು ಹೋಗ್ತಿದೆ. ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರವಾಗಿದೆ ಸಾವಿರಾರು ಕೋಟಿ ಹಗರಣ ನಡೆದಿವೆ ಹೇಳುವುದು ನೀತಿ ಮಾಡುವುದು ಬದನೆಕಾಯಿ ಎಂದು ರಾಕ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮುಂದುವರೆದು, ಬಿಲ್ಡಿಂಗ್ ಬಿದ್ದರೆ ಮತ್ತೆ ಕಟ್ಟಬಹುದು, ರಸ್ತೆ ಹಾಳಾದರೆ ಅದನ್ನ ಸರಿಪಡಿಸಬಹುದು, ಶಿಕ್ಷಣ ಕ್ಷೇತ್ರದಲ್ಲಿ ಆದ್ರೆ ಸರಿಪಡಿಸಲಾಗಲ್ಲ ಎಂದು ಹೇಳಿರುವ ಅವರು, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ನಡೆದಿದೆ ಈಗ ಲ್ಯಾಪ್ ಟಾಪ್ ಖರೀದಿಯಲ್ಲೂ ಅವ್ಯವಹಾರ ಆಗಿದೆ ಎಂದು ಆರೋಪಿಸಿದ್ದಾರೆ.
ಲ್ಯಾಪ್ ಟಾಪ್ ಖರೀದಿಗೆ ಟೆಂಡರ್ ಕರೆದಿದ್ದೆವು. ಹೆಚ್ಪಿ,ಲೆನೆವೋ,ಏಸರ್ ಕಂಪನಿ ಟೆಂಡರ್ ಹಾಕಿದ್ದವು ಇವೆಲ್ಲವೂ ವಿಶ್ವಮಟ್ಟದಲ್ಲಿ ಉತ್ತಮ ಕ್ವಾಲಿಟಿ ಇರುವಂತಹವು ಕಡಿಮೆ ದರ ಬಿಡ್ ಮಾಡಿದ್ದ ಏಸರ್ ಗೆ ಟೆಂಡರ್ ನೀಡಿದ್ದೆವು ಆಗ ೧೪.೪೯೦ ರೂಗೆ ಲ್ಯಾಪ್ ಟಾಪ್ ಖರೀದಿಸಿದ್ದೆವು. ೨೦೧೮ ರಲ್ಲಿ ಮತ್ತೆ ಟೆಂಡರ್ ಕರೆದಾಗ ಟೆಂಡರ್ ಆಗುವ ಮುನ್ನವೇ ಆಗ ಬಿಎಸ್ ವೈ ಮತ್ತು ಈಶ್ವರಪ್ಪ ಹಣ ಲೂಟಿಯಾಗ್ತಿದೆ ಎಂದು ಆಪಾದನೆ ಮಾಡಿ ತನಿಖೆಗೆ ಒತ್ತಾಯಿಸಿದ್ರು ಚುನಾವಣೆ ಬಂದ ಕಾರಣ ಮತ್ತೆ ಟೆಂಡರ್ ಕರೆಯಲ್ಲಿಲ್ಲ ಎಂದು ಹೇಳಿದ್ದಾರೆ.
ನಾವು ಕೊಟ್ಟಿದ್ದ ದರದಲ್ಲಿ ಲ್ಯಾಪ್ ಟಾಪ್ ನೀಡಿದ್ದರೆ ಸರ್ಕಾರಕ್ಕೆ 159.26 ಕೋಟಿ ವೆಚ್ಚ ತಗುಲುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಒಪ್ಪಿರುವ ದರಕ್ಕೆ ಖರೀದಿ ಮಾಡಿದಾಗ ಒಟ್ಟು 311.28 ಕೋಟಿ ವೆಚ್ಚ ತಗುಲಿದೆ. ಇದರಿಂದ ಒಟ್ಟು 152 ಕೋಟಿ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿದೆ. ಈ ವಿಚಾರವಾಗಿ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಸೇರಿದಂತೆ ಪ್ರಿಯಾಂಕ್ ಖರ್ಗೆ ಹಾಗೂ ಕೃಷ್ಣ ಭೈರೇಗೊಡ ಅವರು ಈ ವಿಚಾರವಾಗಿ ಸದನದಲ್ಲಿ ಧ್ವನಿ ಎತ್ತಿದ್ದರು. ಆದರೆ ಸದನವನ್ನು ಏಕಾಏಕಿ ಮುಂದೂಡಿದ ಪರಿಣಾಮ ವಿಚಾರವನ್ನು ಅಲ್ಲಿಗೆ ಅಂತ್ಯವಾಡಿದರು.
ಈ ಲ್ಯಾಪ್ ಟಾಪ್ ಹಗರಣದ್ಲ್ಲಿ 100 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದ್ದು, ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ನನಗೆ ಗೊತ್ತಿಲ್ಲ. ನಾನು ಬೇಕಾಬಿಟ್ಟಿ ಯಾರ ಮೇಲೂ ಆರೋಪ ಮಾಡುವುದಿಲ್ಲ. ಆದರೆ ಉನ್ನತ ಶಿಕ್ಷಣ ಸಚಿವರಾಗಿರುವ ಅಶ್ವತ್ಥ್ ನಾರಾಯಣ ಅವರು ನೈತಿಕ ಹೊಣೆ ಹೊರಬೇಕು. ಇನ್ನು ಬೊಮ್ಮಾಯಿ ಅವರು ಆಗ ಗೃಹ ಸಚಿವರಾಗಿದ್ದು, ಸಂಪುಟದ ಭಾಗವಾಗಿದ್ದರು. ಈಗ ಮುಖ್ಯಮಂತ್ರಿಯಾಗಿದ್ದು, ಅವರಿಗೆ ನೈತಿಕತೆ ಇದ್ದರೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ಅಥವಾ ಲೋಕಾಯುಕ್ತ ತನಿಖೆಗೆ ನೀಡಬೇಕು. ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಈ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಸಚಿವರಿಗೆ ಮಾಹಿತಿ ಇದ್ದು, ಆದರೂ ಅವರು ಮೌನವಾಗಿದ್ದಾರೆ. ಇನ್ನು ಸರ್ಕಾರ ವಿದ್ಯಾರ್ಥಿಗಳಿಗೆ 1.55 ಲಕ್ಷ ಟ್ಯಾಬ್ಲೆಟ್ ವಿತರಣೆ ನೀಡಿದ್ದು, ಅನೇಕ ವಿದ್ಯಾರ್ಥಿಗಳು ಟ್ಯಾಬ್ಲೆಟ್ ಗಳು ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದು ನಿಷ್ಪ್ರಯೋಜಕವಾಗಿದೆ. ಈ ಬಗ್ಗೆಯೂ ತನಿಖೆ ಆಗಬೇಕು.
ಮತ್ತೊಂದು ಪ್ರಮುಖ ವಿಚಾರ ಎಂದರೆ ಶಿಕ್ಷಣ ಇಲಾಖೆಯಲ್ಲಿ 412 ಸರ್ಕಾರಿ ಕಾಲೇಜು ಇದ್ದು, ಅದರಲ್ಲಿ ಪ್ರತಿ ವರ್ಷ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರು ನಿವೃತ್ತಿಯಾಗುತ್ತಿರುತ್ತಾರೆ. ಇದು ಸಹಜ ಪ್ರಕ್ರಿಯೆ. ನಾನು ಸಚಿವನಾಗಿದ್ದಾಗ 2170 ಸಹಾಯಕ ಪ್ರಾಧ್ಯಾಪಕರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ನೇಮಕ ಮಾಡಿದ್ದೆ. ಒಬ್ಬ ಅಭ್ಯರ್ಥಿಯೂ ಅಕ್ರಮವಾಗಿ ಆಯ್ಕೆಯಾಗಿಲ್ಲ. ಪಾರದರ್ಶಕವಾಗಿ ಪರೀಕ್ಷೆ ನಡೆಸಿ ನೇಮಕಾತಿ ಮಾಡಲಾಗಿತ್ತು.
ಆದರೆ ಈಗ 1270 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಕರ್ನಾಟಕ ಪರಿಕ್ಷಾ ಪ್ರಾಧಿಕಾರ ಮೂಲಕ ಮಾಡಿದ್ದು, ಮೈಸೂರಿನಲ್ಲಿ ಇದರ ಪ್ರಶ್ನೆ ಪತ್ರಿಕೆ ಮಾಡಿದ್ದು, ಅಲ್ಲಿನ ಸಹಾಯಕ ಪ್ರಾಧ್ಯಾಪಕರು ಹಾಗೂ ಕುಲಸಚಿವರು, ಸಚಿವರು ಒಟ್ಟಾಗಿ 50-80 ಲಕ್ಷ ಕೊಟ್ಟವರಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿದೆ.
ಶಿಕ್ಷಣ ಸಂಸ್ಥೆ ನಡೆಸುವ ಅಶ್ವತ್ಥ್ ನಾರಾಯಣ ಅವರು ಇಂತಹ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದಕ್ಕೆ ನಾಚಿಕೆಯಾಗಬೇಕು. ಇನ್ನು ಪ್ರಾಮಾಣಿಕ ಮುಖ್ಯಮಂತ್ರಿಯಾಗಿದ್ದ ಎಸ್.ಆರ್ ಬೊಮ್ಮಾಯಿ ಅವರ ಪುತ್ರ ಮುಖ್ಯಮಂತ್ರಿ ಬೊಮ್ಮಾಯಿ ಅವರು ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿರುವುದು ನೋಡಿದರೆ ಅಸಹ್ಯವಾಗುತ್ತಿದೆ.
ಇನ್ನು ಮೂರನೇ ವಿಚಾರ 412 ಪ್ರಾಂಶುಪಾಲರ ನೇಮಕ ನಡೆಯಬೇಕಾಗಿದ್ದು, 402 ಪ್ರಾಂಶುಪಾಲರು ಪರ್ಮನೆಂಟ್ ಪ್ರಾಶುಪಾಲರಿಲ್ಲ. ನಾನು ಸಚಿವನಾಗಿದ್ದ ಸಮಯದಲ್ಲಿ 390 ಪ್ರಾಂಶುಪಾಲರ ನೇಮಕಾತಿ ಮಾಡಬೇಕಾಗಿತ್ತು. ಇದನ್ನು ಹೇಗೆ ಮಾಡಬೇಕು ಎಂದು ಆಗಿನ ಮುಖ್ಯ ಕಾರ್ಯದರ್ಶಿಗಳ ವಿಜಯ್ ಭಾಸ್ಕರ್ ನೇತೃತ್ವದಲ್ಲಿ ಸಮಿತಿ ಮಾಡಿ ನಿಯಮಾವಳಿ ರೂಪಿಸಿದ್ದೆವು. ನಂತರ ನಮ್ಮ ಸರ್ಕಾರದ ಅವಧಿ ಮುಗಿದಿತ್ತು. ಈಗ ಆ ಪ್ರಕ್ರಿಯೆ ಮುಂದುವರಿಸಲು ಮುಂದಾಗಿದ್ದು, ಇದರಲ್ಲೂ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ. ಪ್ರತಿ ಪ್ರಾಂಶುಪಾಲರಿಗೆ 1 ಕೋಟಿಗೂ ಹೆಚ್ಚಿನ ಹಣ ಪಡೆಯಲಾಗುತ್ತಿದೆ. ಹೀಗೆ ಙಣ ಕೊಟ್ಟು ಬಂದ ಪ್ರಾಧ್ಯಾಪಕರು, ಇಂಜಿನಿಯರ್ ಗಳಿಂದ ವಿದ್ಯಾರ್ಥಿಗಳು ಉನ್ನತ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವೇ? ಇದರಿಂದ ದೇಶದ ಭವಿಷ್ಯವೇ ಕುಸಿಯಲಿದೆ. ಹೀಗಾಗಿ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯಬಾರದು. ಹೀಗಾಗಿ ಇದು ಮಾನ ಮರ್ಯಾದೆ ಇಲ್ಲದ ಲಜ್ಜೆಗೆಟ್ಟ ಸರ್ಕಾರ.
ಬೊಮ್ಮಾಯಿ ಅವರು ನೈತಿಕತೆ ಹೊತ್ತು ರಾಜೀನಾಮೆ ನೀಡುವುದಿಲ್ಲ. ಕಾರಣ ಅವರು ಕುರ್ಚಿಗೆ ಅಂಟಿಕೊಂಡು ಕೂತಿದ್ದಾರೆ. ಸರ್ಕಾರ ಈ ಹಗರಣಗಳ ಬಗ್ಗೆ ತನಿಖೆ ಮಾಡದಿದ್ದರೆ ನಮ್ಮ ನಾಯಕರ ಜತೆ ಚರ್ಚೆ ಮಾಡಿ ಈ ವಿಚಾರವಾಗಿ ಯಾವ ರೀತಿ ಹೋರಾಟ ಮಾಡಬೇಕು ಎಂಬುದನ್ನು ಚರ್ಚೆ ಮಾಡುತ್ತೇವೆ.
ಆರ್ಥಿಕವಾಗಿ ದುರ್ಬಲರಾದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಸದನ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ವಿಧಾನಪರಿಷತ್ನಲ್ಲಿ ಮಾರ್ಚ್ 25 2020ರಂದು ಪದೇ ಪದೇ ಧರಣಿ ನಡೆಯಿತು.