ಗೋವಾದ ಎಲ್ಲಾ ಬೀಚ್ ರೆಸ್ಟೋರೆಂಟ್ಗಳಲ್ಲಿ ರಾಜ್ಯದ ಪ್ರಮುಖ ಆಹಾರವಾದ ‘ಮೀನು ಕರಿ-ರೈಸ್’ನ್ನು(fish curry-rice) ತಮ್ಮ ಮೆನುಗಳಲ್ಲಿ ಸೇರಿಸಬೇಕು ಎಂದು ಸರ್ಕಾರ ಆದೇಶ ನೀಡಿದೆ. ‘ಮೀನು ಕರಿ-ರೈಸ್’ ರಾಜ್ಯದಲ್ಲಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲೂ ಪ್ರಸಿದ್ಧತೆಯನ್ನು ಪಡೆಯಬೇಕು ಎಂದು ಹೇಳಿದ್ದಾರೆ. ಗೋವಾದ ರೆಸ್ಟೋರೆಂಟ್ಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪಾಕಪದ್ಧತಿಗಳನ್ನು ಅಂದರೆ ಈ ಮೆನುಗಳಲ್ಲಿ ನಮ್ಮ ರಾಜ್ಯದ ‘ಮೀನು ಕರಿ-ರೈಸ್’ ನ್ನು ಕೂಡ ನೀಡಬೇಕು ಎಂದು ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ಹೇಳಿದ್ದಾರೆ. ತೆಂಗಿನಕಾಯಿ, ರುಚಿಯಾದ ಮಸಾಲೆ ಹಾಕಿ ಮಾಡಿದ ಮೀನು ಕರಿಯನ್ನು ಪ್ರವಾಸಿಗರಿಗೆ ನೀಡಬೇಕು. ಇದರ ಜತೆಗೆ ದೇಶ- ವಿದೇಶದಲ್ಲಿ ನಮ್ಮ ಆಹಾರ ಪರಿಚಯವಾಗಬೇಕು, ಅದಕ್ಕಾಗಿ ನಿಮ್ಮ ರೆಸ್ಟೋರೆಂಟ್ ಮೆನುಗಳಲ್ಲಿ ಇದನ್ನು ಸೇರಿಸಿ ಎಂದು ಹೇಳಲಾಗಿದೆ.
ಈ ಹಿಂದೆ ಗೋವಾ ಬೀಚ್ಗಳ ಹೊಟೇಲ್ಗಳಲ್ಲಿ ಉತ್ತರ ಭಾರತದ ಆಹಾರಗಳನ್ನು ಮಾತ್ರ ನೀಡಲಾಗಿತ್ತು. ಗೋವಾದ ಭಕ್ಷ್ಯಗಳು ಇರಲಿಲ್ಲ ಎಂದು ಸಚಿವರು ಹೇಳಿದ್ದಾರೆ. ಇನ್ನು ಮುಂದೆ ಕಡ್ಡಾಯವಾಗಿ ಎಲ್ಲ ರೆಸ್ಟೋರೆಂಟ್ಗಳಲ್ಲಿ ಗೋವಾದ ಆಹಾರಗಳನ್ನು ನೀಡಬೇಕು ಹಾಗೂ ಪ್ರದರ್ಶನ ಮಾಡಬೇಕು ಎಂದು ಹೇಳಿದ್ದಾರೆ. ನಾವು ನಮ್ಮ ರಾಜ್ಯದ ಶ್ರೀಮಂತ ಪಾಕವಿಧಾನಗಳನ್ನು ದೇಶಕ್ಕೆ ಮತ್ತು ವಿದೇಶಗಳಿಗೆ ತಿಳಿಸಬೇಕು. ಈ ಬಗ್ಗೆ ಇತ್ತೀಚೆಗೆ ಕ್ಯಾಬಿನೆಟ್ನಲ್ಲೂ ಚರ್ಚೆ ನಡೆಸಲಾಗಿದೆ. ಈ ಸಭೆಯಲ್ಲಿ ಅಕ್ರಮ ಮಾರಾಟಗಳನ್ನು ಮಾಡಲಾಗುತ್ತಿದೆ ಎಂಬ ವಿಚಾರದ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.