ಕುರಿಗಳ ರಕ್ಷಣೆ ಮಾಡಲು ಹೋದ ಕುರಿಗಾಯಿ ಆಯ ತಪ್ಪಿ ರಸ್ತೆಗೆ ಹಾಕುವ ಡಾಂಬರ್ (Dambar) ಸುರಿದಿದ್ದ ಗುಂಡಿಗೆ ಬಿದಿದ್ದು, ಪ್ರಾಣಾಪಾಯದಿಂದ ಪರಾದ ಘಟನೆ ತುಮಕೂರು (Tumakuru) ತಾಲ್ಲೂಕಿನ ಹಿರೇಹಳ್ಳಿ ಬಳಿಯ ಮಂದಾರಗಿರಿ ಬೆಟ್ಟದ (Mandaragiri Hills) ಪಕ್ಕದಲ್ಲಿ ನಡೆದಿದೆ. ಮೈತುಂಬ ಡಾಂಬರ್ ಮೆತ್ತಿಕೊಂಡಿದ್ದ ಕುರಿಗಾಯಿಯನ್ನು ಎಸ್ಸಿಸಿ ಬೆಟಾಲಿಯನ್ (NCC Betaliyan) ಕ್ಯಾಂಪ್ ತಂಡದ ಸದಸ್ಯರ ಸಮಯ ಪ್ರಜ್ಞೆಯಿಂದ ಬದುಕುಳಿದಿದ್ದು, ಜಿಲ್ಲಾಸ್ಪತ್ರೆಗೆ (District Hospital) ದಾಖಲಿಸಲಾಗಿದೆ.
ಪ್ರಾಣಕ್ಕೆ ಕುತ್ತುತಂದುಕೊಂಡ ಕುರಿಗಾಯಿ
ಮಂದರಗಿರಿ ಬೆಟ್ಟದ ಬಳಿ ಕುರಿ ಮೇಯಿಸಲು ಕುರಿಗಾಯಿ ತೆರಳಿದ್ದರು. ಈ ವೇಳೆ ರಸ್ತೆಗೆ ಹಾಕುವ ಡಾಂಬರ್ ಸುರಿದಿದ್ದ ಗುಂಡಿಗೆ ಸುಮಾರು ಏಳೆಂಟು ಕುರಿಗಳು (7-8 Sheeps) ಬಿದಿದ್ದವು. ಅವುಗಳನ್ನು ರಕ್ಷಿಸುವ ಭರದಲ್ಲಿ ಆಯತಪ್ಪಿ ಡಾಂಬರ್ ಗುಂಡಿಗೆ ತಾವೇ ಬಿದ್ದು ಪ್ರಾಣಕ್ಕೆ ಕುತ್ತುತಂದುಕೊಂಡಿದ್ದಾರೆ.ಸುಮಾರು ಎರಡು ಗಂಟೆಗಳ ಕಾಲ ಡಾಂಬರ್ ಗುಂಡಿಯಲ್ಲೇ ಕುರಿಗಾಯಿ ಬಿದಿದ್ದು, ಅದೇ ಸಮಯಕ್ಕೆ ಎನ್ ಸಿಸಿ ಕ್ಯಾಂಪ್ಗೆ (NCC Camp) ತೆರಳಿದ್ದ ತಂಡ ಫೈರಿಂಗ್ ತರಬೇತಿ ಪಡೆಯುವ ವೇಳೆ ಕುರಿಗಾಯಿಯನ್ನು ಗಮನಿಸಿದ್ದಾರೆ. ಕೂಡಲೇ ಅವರನ್ನು ಗುಂಡಿಯಿಂದ ಮೇಲಕ್ಕೆ ಎತ್ತಿ ರಕ್ಷಣೆ ಮಾಡಲಾಗಿದೆ.