ನಿಮಗೆ ಅಷ್ಟೋಂದು ಇಷ್ಟವಾಗಿದ್ದರೆ ಭಾರತಕ್ಕೆ ಹೋಗಿ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ವಿಪಕ್ಷ ನಾಯಕಿ ಮರಿಯಮ್ ನವಾಜ್ ಹೇಳಿದ್ದಾರೆ.
ವಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್, ಭಾರತಕ್ಕೆ ಯಾವುದೇ ಸೂಪರ್ ಪವರ್ ರಾಷ್ಟ್ರಗಳು ಒತ್ತಡ ಹೇರುವ ಸ್ಥಿತಿಯಲ್ಲಿಲ್ಲ. ಏಕೆಂದರೆ ಅದು ಬೆಳೆಯುತ್ತಿರುವ ದೇಶವಾಗಿದೆ ಎಂದು ಹೇಳಿಕೆ ನೀಡಿದ್ದರು.
ಇಮ್ರಾನ್ ಖಾನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಹಾಗೂ ವಿಪಕ್ಷ ನಾಯಕಿಯಾಗಿರುವ ಮರಿಯಮ್ ನವಾಜ್, ನಾವು ಭಾರತದ ವಿರುದ್ಧ ಇಲ್ಲ. ಆದರೆ ಅವರಿಗೆ ಆ ದೇಶ ಅಷ್ಟೋಂದು ಇಷ್ಟವಾಗಿದ್ದರೆ ಅಲ್ಲಿಯೇ ಹೋಗಿ ನೆಲಸಲಿ ಎಂದಿದ್ದಾರೆ.
ಯಾವ ವ್ಯಕ್ತಿ ತಮ್ಮದೇ ಪಕ್ಷವನ್ನು ವಜಾ ಮಾಡುತ್ತಾರೆ. ಯಾವ ನಾಯಕ ಅವಿಶ್ವಾಸ ಗೊತ್ತುವಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಂತಹ ವ್ಯಕ್ತಿ ಮತ್ತೊಂದು ದೇಶದ ಉದಾಹರಣೆ ಹೇಳುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.