ಬೀದರ್: ಕೋಡಿ ಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದು, ಜಾಗತಿಕ ಮಟ್ಟದಲ್ಲಿ ಅಪಾಯ ಆಗುವ ಲಕ್ಷಣ ಇದೆ ಎಂದಿದ್ದಾರೆ.
ನಗರದಲ್ಲಿ ಮಾತಾಡಿದ ಸ್ವಾಮೀಜಿ, ಜಗತ್ತಿನಾದ್ಯಂತ ನೀರು, ಬೆಂಕಿಯಿಂದ ಮಿಲಿಯನ್ ಗಟ್ಟಲೆ ಸಾವಾಯ್ತು.
ಸತ್ತಿರುವ ಆತ್ಮಗಳಿಗೆ ಸರಿಯಾಗಿ ಸಂಸ್ಕಾರ ಆಗಿಲ್ಲ.
ಆತ್ಮಗಳು ಜಗತ್ತಿನಾದ್ಯಂತ ಸಂಚರಿಸುತ್ತಿರುವುದರಿಂದ ಮನುಕುಲಕ್ಕೆ ಅಪಾಯವಿದೆ ಎಂದಿದ್ದಾರೆ.
ಜನರಲ್ಲಿ ಏಕಾಂಗಿತನ, ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವುದು, ಇದ್ದಕ್ಕಿದಂಗೆ ಬೀಳುವುದು, ಹುಚ್ಚುತನ ತೋರಿಸುವುದು, ಶರೀರದ ಅಂಗಾಂಗ ವ್ಯತ್ಯಾಸ ಆಗುತ್ತವೆ. 2025 ಕ್ಕಿಂತ 2026 ರಲ್ಲಿ ಹತ್ತು ಪಟ್ಟು ಅಪಾಯ ಇದೆ. ಇದು ಜಾಗತಿಕ ಸಮಸ್ಯೆ, ದೇಶಗಳು ನಾಶ ಆಗ್ತವೆ. ಮಳೆ, ಬೆಂಕಿ ಅಂಥ ಪಂಚಭೂತಗಳಿಂದ ಕಷ್ಟ ಇದೆ ಎಂಬ ಭವಿಷ್ಯ ಹೇಳಿದ್ದಾರೆ.
ಇನ್ನು ಜಗತ್ತಿನಲ್ಲಿ ಜಾಸ್ತಿ ಮಳೆ ಆಗುವ ಲಕ್ಷಣ ಇದೆ, ನಂತರ ಹವಾಮಾನ ವ್ಯತ್ಯಾಸದಿಂದ ಜನರ ಸಾವು-ನೋವು, ದುಃಖಗಳು ಹೆಚ್ಚಾಗುತ್ತವೆ.
ಪ್ರಾಕೃತಿಕ ದೋಷ ಅಂದ್ರೆ ನೀರು, ಆಘಾತಗಳು ಜಾಸ್ತಿ, ಇವು ಆಕಸ್ಮಿಕವಾಗಿ ಆಗಬಹುದು ಹಾಗೂ ಮನುಷ್ಯನೇ ಆಪತ್ತು ಮಾಡಿಕೊಳ್ತಿದ್ದಾನೆ.
ಭವಿಷ್ಯದಲ್ಲಿ ಎರಡು ರೀತಿಯ ಭವಿಷ್ಯ ಇದೆ.
ಸೂರ್ಯನ ಮೇಲೆ ಭವಿಷ್ಯ ಹೇಳೊದು, ಚಂದ್ರನ ಮೇಲೆ ಹೇಳೋದು. ಚಂದ್ರಮಾನ ಯುಗಾದಿ, ಉತ್ತರಾಯಣ ಬದಲಾವಣೆ ಅಂತ ಇದೆ.
ಸೂರ್ಯ ಗೃಹ ಬದಲಾವಣೆ ಆಗುತ್ತಿರುವುದರಿಂದ ಹೆಚ್ಚಿನ ಪ್ರಮಾಣದ ದೊಡ್ಡ ದೊಡ್ಡ ವ್ಯಾಪಾರಸ್ಥರ ಮೇಲೆ ಬಿಳುತ್ತದೆ. ಕೆಲವು ರಾಜಕೀಯ ವ್ಯಕ್ತಿಗಳು, ಬಹಳಷ್ಟು ಪಾಳೆಗಾರರು, ಶ್ರೀಮಂತರಿಗೆ ಬೀಳುತ್ತದೆ.
ಅದರಿಂದ ಈ ಸಂಕ್ರಾಂತಿ ಅಂತ ಅಶುಭ ಕಾಣ್ತಿಲ್ಲ ಎಂದು ಬೀದರ್‌ನಲ್ಲಿ ಕೋಡಿ ಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.












