ಚಿಂತಕ – ವಾಗ್ಮಿ , ಹಿಂದುತ್ವವಾದಿ ಚಕ್ರವರ್ತಿ ಸೋಲಿಬೆಲೆ (Chakravarthi sulibele) ಚುನಾವಣಾ ರಾಜಕಾರಣಕ್ಕೆ (Electoral politics) ಎಂಟ್ರಿ ಕೊಡಲಿದ್ದಾರಾ ? ಇಂಥದ್ದೋದು ವದಂತಿ ಸದ್ಯ ರಾಜ್ಯದಲ್ಲಿ ಭಾರೀ ಸದ್ದು ಮಾಡ್ತಿದೆ. ಈಗಾಗಲೇ ೨೦ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿರುವ ಬಿಜೆಪಿ(BJP) ಇನ್ನು ಕೆಲವು ಕ್ಷೇತ್ರಗಳ ಟಿಕೆಟ್ (Ticket) ಹಂಚಿಕೆ ಬಾಕಿ ಉಳಿಸಿಕೊಂಡಿದೆ. ಆ ಪೈಕಿ ಉತ್ತರ ಕನ್ನಡ (uttara kannada) ಕೂಡ ಒಂದು. ಹಾಲಿ ಸಂಸದ ಅನಂತ ಕುಮಾರ್ ಹೆಗ್ಡೆ ಗೆ ಈ ಬಾರಿ ಟಿಕೆಟ್ ಡೌಟ್ ಎನ್ನಲಾಗ್ತಿದ್ದು ಆ ಸ್ಥಾನಕ್ಕೆ ಈವರೆಗೂ ವಿಶ್ವೇಶ್ವರ ಕಾಗೇರಿ (Vishweshwara kageri) ಹೆಸರು ಪ್ರಬಲವಾಗಿ ಕೇಳಿಬರ್ತಿತ್ತು. ಆದ್ರೆ ಇದೀಗ ಅಚ್ಚರಿ ಎಂಬಂತೆ ಪ್ರಕರ ಹಿಂದುತ್ವವಾದಿ ಚಕ್ರವರ್ತಿ ಸೂಲಿಬೆಲೆ (sulibele) ಹೆಸ್ರು ರೇಸ್ ನಲ್ಲಿ ಕೇಳಿಬರ್ತಿದೆ.

ಈ ಬಗ್ಗೆ ಮಾತನಾಡಿರುವ ಚಕ್ರವರ್ತಿ(Chakravarthi), ಸ್ಪರ್ಧೆ ಮಾಡಲೇಬೇಕು ಎಂಬ ಮಹತ್ವಾಕಾಂಕ್ಷೆ ಇಲ್ಲ. ಆದ್ರೆ ಮೋದಿಯನ್ನು (Narendra modi) ಮತ್ತೊಮ್ಮೆ ಪ್ರಧಾನಿ (Prime minister) ಮಾಡಲು ಅವಕಾಶ ಸಿಕ್ಕರೆ ಖಂಡಿತ ಸ್ಪರ್ಧೆ ಮಾಡ್ತೀನಿ ಅಂಥ ಹೇಳಿದ್ದಾರೆ. ಪಕ್ಷ ಟಿಕೆಟ್ ಕೊಟ್ಟು ಸ್ಪರ್ಧೆ ಮಾಡಲು ಹೇಳಿದರೆ ನಾನು ಸ್ಪರ್ಧೆ ಮಾಡುತ್ತೇನೆ ಎನ್ನೋದ್ರ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ (Chakravarthi sulibele), ಮೋದಿ ಗೆ(Modi) ರಾಜ್ಯದಿಂದ 28 ಸಂಸದರನ್ನ (28 MP) ಆಯ್ಕೆ ಮಾಡಿ ಕಳುಹಿಸಬೇಕು ಅನ್ನೋದು ನಮ್ಮ ಗುರಿ. ಆದ್ರೆ ಆ 28 ಸಂಸದರ ಪೈಕಿ ನಾನೂ ಕೂಡ ಒಬ್ಬನಾಗಿರಬೇಕು ಎಂಬ ಮಹದಾಸೆ ಏನಿಲ್ಲ , ಆದ್ರೆ ಪಕ್ಷ ಅವಕಾಶ ಕೊಟ್ರೆ ಸ್ಪರ್ಧೆ ಮಾಡಲು ಅಭ್ಯಂತರವೇನಿಲ್ಲ ಎಂದು ಹೇಳೋದ್ರ ಮೂಲಕ ಕುತೂಹಲ ಮೂಡಿಸಿದ್ದಾರೆ.












