ಹೀಗಂದ್ರಂತೆ ದರ್ಶನ್ ಜಡ್ಜ್ ಮುಂದೆ. ಬಿಸಿಲು ನೋಡಿ ತುಂಬಾ ದಿನ ಆಯ್ತು, ಜೈಲಲ್ಲಿ ಚಿತ್ರ ಹಿಂಸೆ ಆಗ್ತಿದೆ. ಬಟ್ಟೆಗಳಿಗೆಲ್ಲಾ ಫಂಗಸ್ ಬಂದಿದೆ ಬಟ್ಟೆಗಳೆಲ್ಲಾ ಒಗೆದು ತುಂಬಾ ದಿನ ಆಯ್ತು ದಯಮಾಡಿ ವಿಷ ಕೊಡಿ ಅಂದ ದರ್ಶನ್ ಗೆ ಹಂಗೆಲ್ಲಾ ಆಗಲ್ಲ ಅಂದ್ರಂತೆ ಜಡ್ಜ್.

ಪ್ರಪಂಚದ ಯಾವುದೇ ಮೂಲೆಗೆ ಹೋಗಿ ಅದು ದರ್ಶನ್ ಅಂತಲ್ಲ ತಾನು ಮಾಡಿದ ಪಾಪ ಕರ್ಮಗಳಿಗೆ ಇಲ್ಲೇ ಅನುಭವಿಸಿ ಹೋಗಬೇಕು ಅದು ಒಳ್ಳೇದಿರಲಿ, ಕೆಟ್ಟದಿರಿಲಿ.. ಹಾಗಂತ ದರ್ಶನ್ ಒಳ್ಳೇದ್ ಮಾಡಿಲ್ವಾ? ನಾನು ರಿಪೋರ್ಟಿಂಗ್ ಮಾಡುವಾಗ ಒಂದೊಮ್ಮೆ ಅವರ ಹುಟ್ಟಿದ ಹಬ್ಬದ ದಿನ ಒಬ್ಬ ಮಹಿಳೆ ಬೆಳಗ್ಗೆನೆ ಅವರ ಮನೆ ಮುಂದೆ ಬಂದು ನಿಂತಿತ್ತು, ನೋಡೋಕೆ ತೀರ ಬಡ ಕುಟುಂಬದ ಹೆಣ್ಣು ಮಗಳು ಆಗ ನಾನು ಅವರನ್ನ ಕೇಳ್ದೆ ಯಾಕೆ ಇಲ್ಲಿ ನಿಂತಿದ್ದೀರಾ ಕಷ್ಟ ಆಗುತ್ತೆ ಅನಿಸುತ್ತೆ ಅವರನ್ನ ಮೀಟ್ ಮಾಡೋಕೆ ಅಂದೆ ಆದ್ರೆ ಆಕೆ ಇಲ್ಲ ನಾನ್ ನೋಡ್ಬೇಕು ಅಂದ್ರು ಅಲ್ಲೇ ಇದ್ದ ದರ್ಶನ್ ಕಡೆಯವರು ಲೇಟಾಗುತ್ತಮ್ಮ ಹೋಗಿ ಅಂದ್ರು ಇಲ್ಲ ಇಲ್ಲ ಎಷ್ಟೋಂದ್ ಜನ ಇದ್ದಾರೆ ಬರ್ತಾರೆ ಸರ್ ಅಂತು ಆ ಮಹಿಳೆ ನಾನು ನೋಡ್ತಾನೆ ಇದ್ದೆ ದರ್ಶನ್ ಬಂದ್ರು ಅದೇನೊ ಅವರಿಗೆ ನೇರವಾಗಿ ಕಾಣಿಸಿದ್ದು ಈ ಮಹಿಳೆ ಅವರೆ ಮಹಿಳೆಯತ್ರ ಬಂದು ವಿಶ್ ಮಾಡಿಸಿಕೊಂಡು ಆಕೆಯ ಸಮಸ್ಯೆ ಕೇಳ್ತಿದ್ರು ಆಕೆ ಅದೇನ್ ಹೇಳಿದ್ರೊ ಗೊತ್ತಿಲ್ಲ ಆದ್ರೆ ಕೂಡಲೆ ಅವರ ಕಡೆಯವರನ್ನ ಕರೆದು ಎಲ್ಲಾ ನೀಟಾಗಿ ಆಗಬೇಕು ಅವರಿಗೆ ಏನೂ ಸಮಸ್ಯೆ ಆಗಬಾರದು ನಾನ್ ಮಾಡ್ದೆ ಅಂತ ಯಾರಿಗೂ ಹೇಳ್ಬೇಡಿ ಅಂದ್ರು ಆಟೊ ಹತ್ತಿಸಿ ಮನೆಗೆ ಕಳಿಸಿಕೊಟ್ರು.

ಇದು ಒಂದು ಸೀನ್ ಅಷ್ಟೆ ಆ ದಿನ ನಾನು ನೋಡಿದ ಈ ರೀತಿಯ ಅನೇಕ ಉದಾಹರಣೆ ಕೊಡಬಲ್ಲೆ. ಹಾಗಂತ ದರ್ಶನ್ ಪರವಾದ ವಿರುದ್ಧವಾದ ಪೋಸ್ಟ್ ಅಂತೂ ಅಲ್ಲ. ಮನುಷ್ಯನ ಕೆಟ್ಟ ಸಮಯ ಎಂಥಾ ಒಳ್ಳೆಯದನ್ನು ಮರೆಸಿಬಿಡುತ್ತೆ, ಹಿಂದೆ ಸರಿಸಿಬಿಡುತ್ತೆ. ಆ ಕೆಟ್ಟ ಸಮಯದಲ್ಲೆ ನಮ್ಮ ನಿಜವಾದ ವಸ್ತುಸ್ಥಿತಿ ಏನು ನಮ್ಮ ನೆಲೆ ಏನು ಅನ್ನೋದನ್ನ ತೋರಿಸಕೊಡುತ್ತೆ ಈಗ ದರ್ಶನ್ ಗೆ ಆಗಿರೋದು ಇದೆ. ಆದಷ್ಟು ಬೇಗ ಎಲ್ಲಾ ಒಳ್ಳೇದಾಗಿ ತನ್ನ ತಪ್ಪಿನ ಅರಿವಾಗ್ಲಿ.
ಕೃಪೆ.
ಪಲ್ಲವಿ ಶಂಕರಮೂರ್ತಿ.