ಬಿಗ್ ಬಾಸ್ ಕನ್ನಡ ಸೀಸನ್–12ರ ವಿಜೇತರಾಗಿ ಹೊರಹೊಮ್ಮಿರುವ ಗಿಲ್ಲಿ ನಟ (Gilli Nata) ತಮ್ಮ ಗೆಲುವಿನ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva Rajkumar) ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

ಗಿಲ್ಲಿ ಗೆಲ್ಲುವುದಕ್ಕೂ ಮುಂಚೆ ಶಿವಣ್ಣ ಗಿಲ್ಲಿ ಗೆದ್ದೆ ಗೆಲ್ತಾನೆ ಎಂದು ಟೇಬಲ್ ತಟ್ಟಿ ಭರವಸೆ ವ್ಯಕ್ತಪಡಿಸಿದ್ದರು. ಅದರಂತೆ ಈಗ ಗಿಲ್ಲಿ ನಟ ಗೆದ್ದು ಟ್ರೋಫಿಯೊಂದಿಗೆ ಶಿವಣ್ಣ ಮನೆಗೆ ಹೋಗಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಆಂಕರ್ ಅನುಶ್ರೀ ಕೂಡ ವಿಡಿಯೋ ಕಾಲ್ ಮೂಲಕ ಗಿಲ್ಲಿಗೆ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: Gilli Nata:ಜೀರೋದಿಂದ ಹೀರೋ ಆದ್ರೂ ಗಿಲ್ಲಿಗೆ ʼಬಡವʼ ಟ್ಯಾಗ್ ಕೊಟ್ಟಿದ್ಯಾರು..? ಫ್ಯಾನ್ಸ್..? ಸೆಲೆಬ್ರಿಟಿಸ್..?
ಇದಕ್ಕೂ ಮೊದಲು ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ಜನಪ್ರಿಯ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜಡ್ಜ್ ಆಗಿದ್ದರು. ಆ ಶೋದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಗಿಲ್ಲಿ ತಮ್ಮ ಡ್ಯಾನ್ಸ್ ಹಾಗೂ ಕಾಮಿಡಿ ಪರ್ಫಾರ್ಮೆನ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆಗಲೇ ಶಿವರಾಜ್‌ಕುಮಾರ್ ಅವರಿಗೆ ಗಿಲ್ಲಿ ಮೇಲೆ ವಿಶೇಷ ಮೆಚ್ಚುಗೆ ಮೂಡಿತ್ತು ಎನ್ನಲಾಗುತ್ತಿದೆ.

ಇನ್ನು ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಗಿಲ್ಲಿ ಹಾಗೂ ಅವರ ಸಹೋದರ ನಟ ಕಿಚ್ಚ ಸುದೀಪ್ ಅವರ ನಿವಾಸಕ್ಕೆ ತೆರಳಿದ್ದಾರೆ. ಕಿಚ್ಚ ಸುದೀಪ್ ಗಿಲ್ಲಿಗೆ ಒಳ್ಳೆಯದಾಗಲಿ ಎಂದು ಮನಸ್ಫೂರ್ತಿಯಾಗಿ ಹಾರೈಸಿದ್ದಾರೆ. ಕನ್ನಡ ಚಿತ್ರರಂಗದ ಸ್ಟಾರ್ ನಟರ ಆಶೀರ್ವಾದ ಪಡೆದ ಗಿಲ್ಲಿ ಫುಲ್ ಖುಷಿಯಾಗಿದ್ದಾರೆ.













