ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12(Bigg Boss Kannada Season 12) ಇದೀಗ ಅಂತಿಮ ಹಂತದತ್ತ ಸಾಗುತ್ತಿದೆ. ಫಿನಾಲೆಗೆ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆ ಒಳಗಿನ ವಾತಾವರಣ ಮತ್ತಷ್ಟು ಕುತೂಹಲಕಾರಿ ಆಗಿದೆ. ಮಿಡ್ ವೀಕ್ ಎಲಿಮಿನೇಷನ್ ಒತ್ತಡದ ನಡುವೆ ಸ್ಪರ್ಧಿಗಳಿಗೆ ಸ್ವಲ್ಪ ನೆಮ್ಮದಿ ನೀಡುವ ಉದ್ದೇಶದಿಂದ ಬಿಗ್ ಬಾಸ್ ಹೊಸ ಟಾಸ್ಕ್ ಒಂದನ್ನು ನೀಡಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ನಿಮ್ಮ ಯಾವ ಆಸೆಯನ್ನು ಈಡೇರಿಸಬೇಕು? ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಪ್ರಶ್ನೆ ಹಾಕಿದ್ದಾರೆ. ಪ್ರತಿ ಸ್ಪರ್ಧಿಗೂ ಬಿಗ್ ಬಾಸ್ ಮನೆಯೊಳಗೆ ಈಡೇರಬೇಕು ಎಂದುಕೊಂಡಿರುವ ಮೂರು ಆಸೆಗಳನ್ನು ಪತ್ರದಲ್ಲಿ ಬರೆದು ನೀಡುವಂತೆ ಸೂಚಿಸಲಾಗಿದೆ. ಈ ಮೂರು ಆಸೆಗಳಲ್ಲಿ ಈಡೇರಿಸಬಹುದಾದ ಆಸೆಗಳನ್ನು ಈಡೇರಿಸುವುದಾಗಿ ಬಿಗ್ ಬಾಸ್ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ನಿನ್ನೆ ಎಲ್ಲ ಸ್ಪರ್ಧಿಗಳು ತಮ್ಮ ತಮ್ಮ ಆಸೆಗಳನ್ನು ಪತ್ರದ ಮೂಲಕ ಬರೆದು, ಕ್ಯಾಮೆರಾ ಮುಂದೆ ಓದಿ ತಿಳಿಸಿದ್ದಾರೆ. ಈ ಪೈಕಿ ಗಿಲ್ಲಿ ನಟನ ಆಸೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಗಮನ ಸೆಳೆಯುತ್ತಿವೆ. ಗಿಲ್ಲಿ ನಟನ ಮೂರು ಆಸೆಗಳ ಪೈಕಿ ಎರಡು ಆಸೆ ಕೇಳಿ ಪ್ರೇಕ್ಷಕರು ಬಿದ್ದು ಬಿದ್ದು ನಕ್ಕಿದ್ದಾರೆ. ಬಿಗ್ ಬಾಸ್ ಮನೆಯ ಟಿವಿಯಲ್ಲಿ ಒಂದು ಒಳ್ಳೆಯ ಸಿನಿಮಾ ನೋಡಬೇಕು.

ಬಿಗ್ ಬಾಸ್ ಮನೆಯೊಳಗೆ ಇರುವ ಆನೆ ಮೇಲೆ ಒಮ್ಮೆ ಕುಳಿತುಕೊಳ್ಳಬೇಕು. ತಾನು ಬಹಳ ಇಷ್ಟಪಡುವ ನಲ್ಲಿ ಮೂಳೆಯನ್ನು ಹೊಟ್ಟೆ ತುಂಬಾ ತಿನ್ನಬೇಕು. ತಿಂದ ನಂತರ ಒಂದು ಗಂಟೆ ಮಲಗಲು ಅವಕಾಶ ಕೊಡಬೇಕು. ಮಲಗಿರುವಾಗ ನಾಯಿ ಬೊಗಳುವ ಶಬ್ದ ಬರಬಾರದು ಎಂಬ ವಿಶೇಷ ಬೇಡಿಕೆಯನ್ನೂ ಗಿಲ್ಲಿ ಮುಂದಿಟ್ಟಿದ್ದಾರೆ.

ಇನ್ನು ಗಿಲ್ಲಿಯ ಈ ವಿಚಿತ್ರ ಆಸೆಗಳನ್ನು ಬಿಗ್ ಬಾಸ್ ಈಡೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ. ಫಿನಾಲೆ ಹಂತಕ್ಕೆ ತಲುಪುತ್ತಿರುವ ಬಿಗ್ ಬಾಸ್‌ನಲ್ಲಿ ಪ್ರತಿದಿನವೂ ಹೊಸ ಟ್ವಿಸ್ಟ್‌ಗಳು, ಭಾವನಾತ್ಮಕ ಕ್ಷಣಗಳು ಮತ್ತು ಮನರಂಜನೆ ಹೆಚ್ಚಾಗುತ್ತಿದ್ದು, ಮುಂದಿನ ಎಪಿಸೋಡ್‌ಗಳು ಇನ್ನಷ್ಟು ರೋಚಕವಾಗಲಿವೆ.












