ಭಾರತೀಯ ಕ್ರಿಕೇಟ್ನ ಯುವ ಭರವಸೆಯ ಆಟಗಾರ ಶುಬಮನ್ ಗಿಲ್ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಇದೀಗ ಅನಾರೋಗ್ಯ ಹೆಚ್ಚಿದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾಸಗಿ ಮಾಧ್ಯಮಗಳ ವರದಿಯ ಪ್ರಕಾರ, ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಜ್ವರದ ಹಿನ್ನೆಲೆ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕೋಚ್ ದ್ರಾವಿಡ್ ಮತ್ತು ನಾಯಕ ರೊಹಿತ್ ಶರ್ಮಾ ಹೇಳಿದ್ದರು.
ಸೋಮವಾರವಷ್ಟೇ ಬಿಸಿಸಿಐ ಶುಭಮನ್ ಗಿಲ್ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿತ್ತು. ಅಫಘಾನಿಸ್ತಾನ ವಿರುದ್ಧದ ಪಂದ್ಯದಿಂದ ಗಿಲ್ ಹೊರಗುಳಿಯಲಿದ್ದಾರೆ ಆದರೆ, ಪಾಕ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದೀಗ ಮಂಗಳವಾರ ಬಂದ ಮಾಹಿತಿ ಪ್ರಕಾರ ಶುಭಮನ್ ಗಿಲ್ಗೆ ಮತ್ತೆ ಜ್ವರ, ತಲೆನೋವು, ನಿಶಕ್ತಿ ಕಾಡಿದ್ದು ಪ್ಲೇಟ್ ಲೆಟ್ ಗಳು ಕೂಡ ಕಡಿಮೆಯಾಗಿದೆ. ಹೀಗಾಗಿ ಅವರನ್ನು ಚೆನ್ನೈಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಆರಂಭಿಕ ಯುವ ಆಟಗಾರ ಶುಭಮನ್ ಗಿಲ್ ಮುಂದಿನ ಎರಡು ಪಂದ್ಯಗಳಿಗೆ ತಂಡದಲ್ಲಿ ಲಭ್ಯ ಇರುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಅಂದರೆ 11ನೇ ತಾರೀಖು ನಡೆಯುವ ಅಫ್ಘಾನಿಸ್ತಾನದ ವಿರುದ್ದ ಪಂದ್ಯಕ್ಕೂ ಗಿಲ್ ಇರುವುದಿಲ್ಲ.