-ಕೃಷ್ಣಮಣಿ
ಶಿವಮೊಗ್ಗ (Shivamogga) ಕಾಂಗ್ರೆಸ್ (Congress) ಅಭ್ಯರ್ಥಿ ಆಗಿರುವ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಬೆಂಬಲಕ್ಕೆ ಚಲನಚಿತ್ರ ನಿರ್ಮಾಪಕರು ಬಂದಿದ್ದಾರೆ. ಮಾಜಿ ಸಿಎಂ ಬಂಗಾರಪ್ಪನ (Bangarappa) ವರ್ಚಸ್ಸು ಇರೋ ಶಿವಮೊಗ್ಗದಿಂದ ಕಣಕ್ಕಿಳಿದಿರುವ ಗೀತಾ ಶಿವರಾಜ್ ಕುಮಾರ್, ಬಿಜೆಪಿ-ಜೆಡಿಎಸ್ (BJP̲JDS) ಮೈತ್ರಿ ಅಭ್ಯರ್ಥಿ ಬಿ.ವೈ ರಾಘವೇಂದ್ರ (B̤ Y̤ Raghavendra) ಅವರನ್ನು ಎದುರಿಸಲಿದ್ದಾರೆ.
ಶಿವರಾಜ್ ಕುಮಾರ್ ನಿವಾಸದಲ್ಲಿ ನಿರ್ಮಾಪಕರು ಸಭೆ ನಡೆಸಿ, ಬೆಂಬಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ (Umesh Banakar), ಸಾ.ರಾ ಗೋವಿಂದು (Sa Ra Govindu), ಸಚಿವ ಮಧು ಬಂಗಾರಪ್ಪ(Madhu Bangarappa), ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಹಾಗೂ ನಟಿ ಶ್ರುತಿ ಹಾಸನ್, ಸಾರಾ ಗೋವಿಂದು, ಕೆ.ವಿ ಚಂದ್ರಶೇಖರ್, ಥಾಮಸ್ ಡಿಸೋಜಾ, ಚಿನ್ನೇಗೌಡ್ರು, ಕೆ.ಪಿ ಶ್ರೀಕಾಂತ್ ಭಾಗಿಯಾಗಿದ್ದರು.
ಬೆಂಗಳೂರಿನ ಮಾನ್ಯತಾ ಟೆಕ್‌ಪಾರ್ಕ್ ಬಳಿಯ ನಾಗವಾರದ ನಟ ಶಿವಣ್ಣ (Shivanna) ನಿವಾಸ ‘ಶ್ರೀಮುತ್ತು’ ವಿನಲ್ಲಿ ಸಭೆ ಮಾಡಿದ ಬಳಿಕ ಶಿವಣ್ಣ ಮಾತನಾಡಿ, ಗೀತಾರನ್ನ ಒಮ್ಮೆ ಸಂಸದರನ್ನಾಗಿ ನೋಡ್ಬೇಕು ಎಂದಿದ್ದಾರೆ. ತಮ್ಮ ಪತ್ನಿ ಪರವಾಗಿ ಪ್ರಚಾರಕ್ಕೆ ಸಿದ್ದವಾಗ್ತಿರೋ ಶಿವಣ್ಣ, ಮಾರ್ಚ್ 20ಕ್ಕೆ ಶಿವಮೊಗ್ಗಕ್ಕೆ ತೆರಳಲಿದ್ದೇವೆ. ಹೋಬಳಿ ಮಟ್ಟದಲ್ಲಿ ಪ್ರಚಾರ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 400 ಸಭೆಗಳನ್ನ ಮಾಡಲು ಗೀತಾ ಶಿವರಾಜ್ ಕುಮಾರ್ ಯೋಜನೆ ರೂಪಿಸಿದ್ದಾರೆ. ತಾಲ್ಲೂಕು ಮಟ್ಟದ ಸಭೆಗಳಿಗೆ ಸಿಎಂ, ಡಿಸಿಎಂ ಬರಲಿದ್ದಾರೆ ಎಂದಿದ್ದಾರೆ. ಇದೇ ವೇಳೆ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರ ಮಾಡಲು ನಿರ್ಮಾಪಕರು ನಿರ್ಧಾರ ಮಾಡಿದ್ದಾರೆ.

ಗೀತಾ ಶಿವರಾಜ್‌ಕುಮಾರ್ ರಾಜಕೀಯದ ಬಗ್ಗೆ ಮಧು ಬಂಗಾರಪ್ಪ ಮಾತನಾಡಿ, ಎಲ್ಲಾ ಹಿರಿಯರ ಬೆಂಬಲ ನಮಗೆ ಸಿಕ್ತಿದೆ. ಚಿತ್ರರಂಗದ ಎಲ್ರು ನನಗೆ ಪರಿಚಯ. ನಾನು ಒಂದು ಸಿನಿಮಾ ನಿರ್ಮಿಸ್ತೀನಿ, ಎಲ್ಲರಿಗೂ ಅನ್ನ ಕೊಡೋರು ನಿರ್ಮಾಪಕರು, ಅವರ ಬೆಂಬಲ ಸಿಕ್ತಿದೆ ಅಂದ್ರೆ ದೊಡ್ಡ ವಿಷಯ ಎಂದಿದ್ದಾರೆ. 2014ರಲ್ಲಿ ಬೇರೆ ಒತ್ತಡವಿತ್ತು. ಸುಮಾರು ವಿಷಯ ನಿಮಗೆ ಗೊತ್ತಿಲ್ಲ, ಶಿವಣ್ಣ-ಗೀತಾಕ್ಕ ನಮ್ಮ ತಾಯಿಯನ್ನ ಭೇಟಿಯಾಗಿದ್ರು. ಗೀತಾ ಅಕ್ಕ ಚುನಾವಣೆಗೆ ನಿಲ್ಲೋದಾದ್ರೆ ನಿಲ್ಲಲಿ ಅಂದ್ರು. ಆಗ ಶಿವಣ್ಣನ ಫ್ಯಾನ್ಸ್ ಏನೇನೋ ಹೇಳಿದ್ರು. ಬಂಗಾರಪ್ಪ ಜೀವನದ ಕೊನೆ ಎಲೆಕ್ಷನ್ ಸೋತಿದ್ರು. ಅದೆಲ್ಲವನ್ನೂ ಎಲೆಕ್ಷನ್ ಮುಗಿದ ಮೇಲೆ ಹೇಳ್ತಿನಿ ಎಂದಿದ್ದಾರೆ.
ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು ಎಂದಿರುವ ಶಿವರಾಜ್ ಕುಮಾರ್, ಮನಸಿದ್ದರೆ ಮಾರ್ಗಸಿನಿಮಾರಂಗಕ್ಕೆ ಥ್ಯಾಂಕ್ಸ್ ಹೇಳ್ತಿನಿ. ಇವತ್ತು ಅನಿಸ್ತಿದೆ, ಅಪ್ಪಾಜಿ ಹೇಳ್ತಿದ್ರು ನಾವೆಲ್ಲಾ ಒಂದು ಕುಟುಂಬ ಅಂತ. ನಮಗೆ ನಿರ್ಮಾಪಕರ ಪ್ರೀತಿ ಹೆಮ್ಮೆ ಅನ್ನಿಸ್ತಿದೆ. ನಾನು ಗೀತಾಗೆ ಹೇಳೋದು ಒಂದೇ. ಇಲ್ಲಿ ಅನುಭವ ಮುಖ್ಯವಲ್ಲ. ಹೊಸ ರೂಪ ಕೊಡೋಕೆ ಪಳಗಬೇಕಿಲ್ಲ. ಅನುಭವಕ್ಕಿಂತ ಹೃದಯ ದೊಡ್ಡದು. ನಾನು ಯಾವಾಗಲು ಗೀತಾ ಜೊತೆಗೆ ಇರ್ತೀನಿ ಎಂದಿದ್ದಾರೆ. ರಾಜ್ ಕುಮಾರ್‌ಗೂ ಪಾಲಿಟಿಕ್ಸ್ ಬೇಕಾಗಿತ್ತು. ಅವರು ರಾಜಕೀಯ ತಪ್ಪು ಅನ್ನಲಿಲ್ಲ. ನಾನು ಬೇರೆ, ಗೀತಾ ಬೇರೆ, ಗೀತಾಗೆ ಒಂದು ಜವಾಬ್ದಾರಿ ಇದೆ. ರಾಜಕೀಯದಲ್ಲಿ ಹೆಂಗಸರು ಕಡಿಮೆಯಿದ್ದಾರೆ ಎಂದಿದ್ದಾರೆ.
ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ಶಿವಮೊಗ್ಗದಲ್ಲಿ ನನ್ನ ಮೊದಲ ಎಲೆಕ್ಷನ್‌ನಲ್ಲಿ ನಾನು ಏನು ಕಲಿತಿದ್ರು, ಮಧು ಬಂಗಾರಪ್ಪ ಇಂದಾನೆ ಕಲಿತಿದ್ದು. ನಾನು ಯಾರಿಗೂ ಹೆದರಲ್ಲ. ನನಗೆ ಚುನಾವಣೆ ಅಂದ್ರೆ ಭಯವಿಲ್ಲ. ಚಿತ್ರರಂಗಕ್ಕೆ ನಾನು ಯಾವಾಗಲು ನಿಲ್ತಿನಿ. ನಿರ್ಮಾಪಕರ ಬೆಂಬಲದ ವಿಚಾರ ಕೇಳಿ ನನಗೆ ಹೃದಯತುಂಬಿ ಬಂತು ಎಂದಿದ್ದಾರೆ. ಒಟ್ಟಾರೆ ಚಿತ್ರರಂಗ ಗೀತಾ ಶಿವರಾಜ್ ಕುಮಾರ್ ಬೆಂಬಲಕ್ಕೆ ನಿಂತಿದೆ. ಶಿವಮೊಗ್ಗದಲ್ಲಿ ಶಿವಣ್ಣನಿಗಾಗಿ ಯಾರೆಲ್ಲಾ ನಟರು ಪ್ರಚಾರ ಮಾಡ್ತಾರೆ..? ಯಾರು ಯಾರು ಮತಯಾಚನೆಗೆ ಕೈ ಜೋಡಿಸ್ತಾರೆ ಅನ್ನೋದು ಈಗ ಇರುವ ಕುತೂಹಲ. ಆದರೆ ಸಿನಿಮಾ ಮಂದಿ ನೋಡಿ ಶಿವಮೊಗ್ಗ ಮಂದಿ ಮತ ಹಾಕ್ತಾರಾ..? ಅಥವಾ ಪಕ್ಷ ನೋಡಿ ಮತ ಹಾಕ್ತಾರಾ..? ಅನ್ನೋದು ಜೂನ್ 4ರಂದು ಗೊತ್ತಾಗಬೇಕಿದೆ.
#karnataka #bengaluru #loksabhaelection #geethashivarajkumar #shivarajkumar #shivamogga #congress