ರಾಜ್ಯದಲ್ಲಿ ಉಪ ಚುನಾವಣೆ ಕದನ ಜೋರಾಗಿದ್ದು ಚನ್ನಪಟ್ಟಣದಲ್ಲಿ (Channapattana) ಅಖಾಡ ರಂಗೇರುತ್ತಿದೆ. ಈಗಾಗಲೇ ಸ್ಥಳೀಯ ಜೆಡಿಎಸ್ (Jds) ಕಾರ್ಯಕರ್ತರು, ಯೋಗೇಶ್ವರ್ (Yogeshwar) ಅಭಿಮಾನಿಗಳನ್ನ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಂಡ ಡಿ.ಕೆ ಶಿವಕುಮಾರ್ (Dk shivakumar), ಜೆಡಿಎಸ್‌ಗೆ ಶಾಕ್ ಕೊಟ್ಟಿದ್ದರು.

ಆದ್ರೆ ಇದೀಗ ಸಿಎಂ ಸಿದ್ದರಾಮಯ್ಯ (Cm siddaramaiah) ಆಪ್ತ ಬಣದ ಕಾಂಗ್ರೆಸ್ ನಾಯಕಿಯನ್ನೇ ಜೆಡಿಎಸ್ ಸೇರ್ಪಡೆ ಮಾಡಿಕೊಂಡು ಹೆಚ್.ಡಿ ಕುಮಾರಸ್ವಾಮಿ (Hd kumaraswamy) ಸಿಎಂಗೆ ಶಾಕ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಆಪ್ತಬಣದಲ್ಲಿ ಗುರುತಿಸಿಕೊಂಡಿದ್ದ ಗೀತಾ ಶಿವರಾಮ್ ಜೆಡಿಎಸ್ ಸೇರಿದ್ದಾರೆ.
ನಾನು ದಾಸರಹಳ್ಳಿಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆ. ನನ್ನನ್ನ ನಂಬಿಸಿ ಮೋಸ ಮಾಡಿದ್ರು, ಮನೆ ಹಾಳು ಮಾಡಿದ್ರು ಅಂತಾ ಬೇಸರ ವ್ಯಕ್ತ ಪಡಿಸಿದ ಗೀತಾ ಶಿವರಾಮ್ ಕಾಂಗ್ರೆಸ್ ತೊರೆದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.











