ಭಾರತದ ಉದ್ಯಮಿ ಗೌತಮ್ ಅದಾನಿ ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಗೌತಮ್ ಅದಾನಿ ಒಂದು ಸ್ಥಾನ ಕುಸಿದು 3ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಗೌತಮ್ ಅದಾನಿ ಆದಾಯ 135 ಶತಕೋಟಿ ಡಾಲರ್ ಆದಾಯ ಹೊಂದಿದ್ದರೆ, ಜೆಫ್ ಬೆಜೊಸ್ 138 ಶತಕೋಟಿ ಡಾಲರ್ ಮೂಲಕ ಎರಡನೇ ಸ್ಥಾನಕ್ಕೆ ಜಿಗಿದಿದ್ದರೆ, ಟೆಲ್ಸಾ ಇಲಾನ್ ಮಸ್ಕ್ 247 ಶತಕೋಟಿ ಡಾಲರ್ ಆದಾಯದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಭಾರತದ ಮತ್ತೊಬ್ಬ ಉದ್ಯಮಿ ರಿಲಾಯನ್ಸ್ ಕಂಪನಿಯ ಒಡೆಯ ಮುಖೇಶ್ ಅಂಬಾನಿ 82 ಶತಕೋಟಿ ಡಾಲರ್ ಆದಾಯ ಹೊಂದಿದ್ದು, 11ನೇ ಸ್ಥಾನದಲ್ಲಿದ್ದಾರೆ.
ಗೌತಮ್ ಅದಾನಿ ವಿದ್ಯುತ್ ಕ್ಷೇತ್ರದಲ್ಲಿ ಶೇ.70ರಷ್ಟು ಬಂಡವಾಳ ಹೂಡಿಕೆ ಮಾಡಿದ್ದು, ರೈಲು, ವಿಮಾನ ನಿಲ್ದಾಣ, ಸೀಮೆಂಟ್ ಮುಂತಾದ ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡಿದ್ದು, ಇದೀಗ ಟೆಲಿಕಾಂ ಉದ್ಯಮಕ್ಕೂ ಕಾಲಿಡುತ್ತಿದ್ದಾರೆ.








