ದೇಶಾದ್ಯಂತ ನವರಾತ್ರಿ ಆಚರಣೆ ನಡೆಯುತ್ತದೆ. ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯಲ್ಲಿ ನವರಾತ್ರಿ ಆಚರಣೆ ಮಾಡಲಾಗುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹುಟ್ಟೂರು ಗುಜರಾತ್‌ನಲ್ಲಿ ನವರಾತ್ರಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. ಸ್ವತಃ ಪ್ರಧಾನಿ ಮೋದಿ ನವರಾತ್ರಿ ವೇಳೆ ಉಪವಾಸ ವ್ರತ ಕೈಗೊಳ್ಳುತ್ತಾರೆ. ಆದರೆ ಪ್ರಧಾನಿ ಮೋದಿ ಅವರ ತವರು, ಗುಜರಾತ್‌ನಲ್ಲಿ ನವರಾತ್ರಿ ವೇಳೆ ದುರಂತಗಳು ಸಂಭವಿಸಿವೆ. ನವರಾತ್ರಿ ಸಂದರ್ಭದಲ್ಲಿ ಗರ್ಬಾ ಡ್ಯಾನ್ಸ್ ಮಾಡುವುದು ವಿಶೇಷ. ನವರಾತ್ರಿ ವೇಳೆ ಗರ್ಬಾ ಡ್ಯಾನ್ಸ್ ಆಡುತ್ತಲೇ ಸಾವನ್ನಪ್ಪಿದ್ದಾರೆ.
ಗರ್ಬಾ ಡ್ಯಾನ್ಸ್ ವೇಳೆ ಒಂದೇ ದಿನದಲ್ಲಿ 10 ಮಂದಿ ಸಾವು..!
ನವರಾತ್ರಿ ವೇಳೆ ಗರ್ಬಾ ನೃತ್ಯ ಮಾಡುವುದೇ ಒಂದು ವಿಶೇಷ. ರಾಜಸ್ಥಾನ, ಗುಜರಾತ್ ಸೇರಿದಂತೆ ಉತ್ತರ ಭಾರತದಲ್ಲಿ ಗರ್ಬಾ ನೃತ್ಯ ಬಹಳ ಖ್ಯಾತಿ ಪಡೆದಿದೆ. ಇತ್ತೀಚಿಗೆ ಬೆಂಗಳೂರಿನಲ್ಲೂ ನವರಾತ್ರಿ ವೇಳೆ ಗರ್ಬಾ ನೃತ್ಯ ಬಹಳ ಪ್ರಸಿದ್ಧಿ ಪಡೆದುಕೊಂಡಿದೆ. ಆದರೆ ಗುಜರಾತ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 10ಕ್ಕೂ ಹೆಚ್ಚು ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗರ್ಬಾ ಡ್ಯಾನ್ಸ್ನಲ್ಲಿ ಖುಷಿ ಖುಷಿಯಾಗಿ ಪಾಲ್ಗೊಂಡಿದ್ದ ವೇಳೆಯಲ್ಲೇ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಕಪದ್ವಾಂಜ್ನಲ್ಲಿ 17 ವರ್ಷದ ಬಾಲಕ ಕೂಡ ಡ್ಯಾನ್ಸ್ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎನ್ನುವುದು ಆತಂಕ ಸೃಷ್ಟಿಸಿದೆ.

ನೃತ್ಯ ಮಾಡುವ ವೇಳೆ ಆತಂಕ ಮತ್ತಷ್ಟು ಹೆಚ್ಚು..!
ಗರ್ಬಾ ನೃತ್ಯ ಮಾಡುವ ವೇಳೆ ಒಂದೇ ದಿನದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ವಿಚಾರ ಆತಂಕ ಸೃಷ್ಟಿಸಿದೆ. ಆದರೆ ಆ ಆತಂಕವನ್ನು ಹೆಚ್ಚಳ ಮಾಡುವ ವಿಚಾರ ಅಂದ್ರೆ ಈ ಸಂಖ್ಯೆ ಒಟ್ಟು 521 ಹಾರ್ಟ್ ಸಮಸ್ಯೆಗೆ ಒಳಗಾಗಿದ್ದಾರೆ ಇನ್ನು 609 ಜನರು ಉಸಿರಾಟ ಸಮಸ್ಯೆಯಿಂದಲೇ ಆಸ್ಪತ್ರೆ ದಾಖಲು ಆಗಿದ್ದಾರೆ. ಕರ್ನಾಟಕದಲ್ಲಿ ಇರುವಂತೆ ಗುಜರಾತ್‌ನಲ್ಲೂ 108 ಆ್ಯಂಬುಲೆನ್ಸ್ ಸೇವೆ ಇದ್ದು, ಗರ್ಬಾ ನೃತ್ಯದ ವೇಳೆ ಉಸಿರಾಟದ ಸಮಸ್ಯೆ ಹಾಗು ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಂಕಿಸಂಖ್ಯೆಗಳು ಸಾಬೀತು ಮಾಡಿವೆ. ಬರೋಡಾದ ದಬೋಯ್‌ನಲ್ಲಿ 13 ವರ್ಷದ ಬಾಲಕ ಕೂಡ ಸಾವನ್ನಪ್ಪಿದ್ದು, ಸರ್ಕಾರವೇ ಶಾಕ್ ಆಗುವಂತೆ ಮಾಡಿದೆ.
ನೃತ್ಯ ಮಾಡುವ ಸ್ಥಳದಲ್ಲೇ ಅಲರ್ಟ್‌ಗೆ ಸೂಚನೆ..
ಒಂದೇ ದಿನದಲ್ಲಿ 10 ಮಂದಿ ಗರ್ಬಾ ನೃತ್ಯ ಮಾಡುವಾಗ ಸಾವನ್ನಪ್ಪಿರುವ ವಿಚಾರವನ್ನು ಗುಜರಾತ್ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಗರ್ಬಾ ನೃತ್ಯ ನಡೆಯುವ ಸ್ಥಳದಲ್ಲಿ ಸರ್ಕಾರಿ ವೈದ್ಯರು ಹಾಗು ವೈದ್ಯಕೀಯ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತ ಇರಬೇಕು ಎಂದು ಆದೇಶ ಮಾಡಿದೆ. ಸಿಪಿಆರ್ ಸೇರಿದಂತೆ ಪ್ರಮುಖ ವೈದ್ಯಕೀಯ ಸಲಕರಣೆಗಳನ್ನು ಇಟ್ಟುಕೊಳ್ಳಬೇಕು ಎಂದು ಆದೇಶದಲ್ಲಿ ಸೂಚನೆ ಕೊಡಲಾಗಿದೆ. ಜೊತೆಗೆ ಎಂದೂ ಇಲ್ಲದ ಈ ಸಮಸ್ಯೆ ಈಗ ಬಂದಿದ್ದು ಯಾಕೆ ಅನ್ನೋ ಬಗ್ಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಲು ಮುಂದಾಗಿದೆ.
ಕೃಷ್ಣಮಣಿ