ಬೀದರ್ :ಏ.೧೦: ಗಡಿ ಜಿಲ್ಲೆ ಬೀದರ್ ನಲ್ಲಿ ಇವತ್ತು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 1.50 ಕೋಟಿ ಮೌಲ್ಯದ ಗಾಂಜಾ ಸೊಪ್ಪನ್ನ ವಶಕ್ಕೆ ಪಡೆದು, ಅದನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಜಿಲ್ಲೆಯ ಔರಾ ಎಕಂಬಾ ಚೆಕ್ ಪೋಸ್ಟ್ ಬಳಿ ಬೊಲೆರೋ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಪಡೆದು ವಾಹನವನ್ನು ತಪಾಸಣೆ ನಡೆಸಿ ಸುಮಾರು 150 ಕೆ.ಜಿ. ಗಾಂಜಾ ಸೊಪ್ಪು ವಶಕ್ಕೆ ಪಡೆದಿದ್ದಾರೆ.

ತೆಲಂಗಾಣ ರಾಜ್ಯದಿಂದ ಬೀದರ್ ಮೂಲಕ ಮುಂಬೈಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಗ್ಯಾಂಗ್ ಇದಾಗಿತ್ತು. ಔರಾದ ಪೊಲೀಸರ ಕಾರ್ಯಕ್ಕೆ ಬಹುಮಾನವನ್ನು ಬೀದರ್ ಪೊಲೀಸರು ಘೋಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ.