ಐನಾತಿ ಆಸಾಮಿಯೊಬ್ಬ ಹೊಲದಲ್ಲಿ ತೋಗರಿ ಕಾಲು, ಅವರೆ, ಹಳಸಂದೆ, ರಾಗಿ ಜೊತೆಗೆ ಸಾಲು ಸಾಲಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕು (Doddaballapur taluk), ತೂಬಗೆರೆ ಹೋಬಳಿ, ಗೆದ್ದಲಪಾಳ್ಯ ಗ್ರಾಮದಲ್ಲಿ ನಡೆದಿದೆ.
ನಿಷೇಧಿತ ಗಾಂಜಾ ಗಿಡಗಳನ್ನು (Ganja plants) ಬೆಳೆಸಿ ಅವುಗಳಿಗೆ ಗೊಬ್ಬರ ಹಾಕಿ ಪೋಷಣೆ ಮಾಡಿ ಬೆಳೆಸಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರ ಕೈಗಿ ಸಿಕ್ಕಿಬಿದ್ದಿದ್ದಾನೆ. ಈತನ ಹೊಲದಲ್ಲಿ ಸುಮಾರು 92 ಸಾವಿರ ರೂ. ಮೌಲ್ಯದ 8 ಕೆಜಿ 700 ಗ್ರಾಂ ತೂಕದ ಗಾಂಜಾವನ್ನ ವಶಪಡಿಸಿಕೊಳ್ಳಲಾಗಿದೆ.
ದೊಡ್ಡಬಳ್ಳಾಪುರದ ನಿವಾಸಿ ನಾರಾಯಣಸ್ವಾಮಿ (Narayanaswamy) ಎಂಬಾತ ತನ್ನ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುತ್ತಾನೆ ಎಂಬ ಖಚಿತ ಮಾಹಿತಿ ಆಧರಿಸಿ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಸಾದಿಕ್ ಪಾಷಾ (Sadiq pasha) ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಒಟ್ಟು 568 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ.