ಉತ್ತರ ಪ್ರದೇಶವನ್ನು ಕಳೆದ ಮೂರು ನಾಲ್ಕು ವರ್ಷಗಳಿಂದ ಗೂಂಡ ರಾಜ್ಯ ಅಂತ ಕರೆಯಲಾಗುತ್ತದೆ. ಇದಕ್ಕೆ ಕಾರಣ ಅಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳು. ಇವತ್ತು ಇಂತಹದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ..

ಹೌದು ಲಕ್ನೋ ಕೋರ್ಟ್ ಮುಂಬಾಗ ಇಂದು ಈ ಘಟನೆ ನಡೆದಿದೆ ಈ ವಿದ್ವಂಸಕ ಕೃತ್ಯದ ನಂತರ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಅಂತ ವಿರೋಧ ಪಕ್ಷಗಳು ವ್ಯಾಪಕವಾದ ಟೀಕೆಯನ್ನು ಮಾಡುತ್ತಿವೆ. ಇದೀಗ ಒಂದರ ನಂತರ ಒಂದು ಅಪರಾಧ ಪ್ರಕರಣಗಳು ಉತ್ತರಪ್ರದೇಶದಲ್ಲಿ ದಾಖಲಾಗುತ್ತಿದ್ದು ಇದು ಅಲ್ಲಿನ ಯೋಗಿ ಸರಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ.
ಅಷ್ಟಕ್ಕೂ ಇವತ್ತು ನಡೆದ ಘಟನೆ ಏನು ಅಂದ್ರೆ ಲಕ್ನೋ ಕೋರ್ಟ್ ನಲ್ಲಿ ಗ್ಯಾಂಗ್‌ಸ್ಟಾರ್ ಮತ್ತು ರಾಜಕಾರಣಿ ಮುಕ್ತಾರ್ ಅನ್ಸಾರಿ ಆಪ್ತ ಸಹಾಯಕ ಸಂಜೀವ್ ಮಹೇಶ್ವರಿ ಜೀವಾ, ಬಿಜೆಪಿ ಶಾಸಕ ಬ್ರಹ್ಮದತ್ ದ್ವಿವೇದಿ ಹತ್ಯೆ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದು, ಈತನ ವಿಚಾರಣೆಯನ್ನು ನಡೆಸಲಾಗುತ್ತಿತ್ತು ಇನ್ನು ವಿಚಾರಣೆ ಮುಗಿದು ಕೋರ್ಟ್ ಆವರಣದಿಂದ ಹೊರ ಬರ್ತಾ ಇದ್ದಂತೆ ಈತನ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ
ವಕೀಲರ ಸೋಗಿನಲ್ಲಿ ಬಂದು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.ಗುಂಡು ತಗಲಿದ ಜೀವಾ ನೆಲಕ್ಕೆ ಬಿದ್ದಿದ್ದು, ಗಂಭೀರ ಗಾಯಗಳಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ
ಒಟ್ಟಾರೆಯಾಗಿ ಇದೀಗ ಈ ಘಟನೆಯಿಂದ ಇಡಿ ಉತ್ತರ ಪ್ರದೇಶವೇ ಬೆಚ್ಚಿಬಿದ್ದಿದೆ ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಲಿದ್ದೇವೆ ಅಂತ ಉತ್ತರಪ್ರದೇಶದ ಸರ್ಕಾರ ಸಬೂಬು ನೀಡಿದೆ

