ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ರಾಜ್ಯದ ಜನರಿಗೆ 5 ಭರವಸೆಗಳನ್ನು ಕೊಡಲಾಗಿತ್ತು. ಪಂಚ ಗ್ಯಾರಂಟಿಗಳನ್ನು ರಾಜ್ಯದ ಜನರ ಮುಂದಿಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಊಹೆಗೂ ನಿಲುಕದ ಫಲಿತಾಂಶ ಕೊಟ್ಟಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೂ ಬಂತು. ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿಯನ್ನೂ ಮಾಡಿತು. ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ ಹಾಗು ಯುವನಿಧಿ ಯೋಜನೆಗಳಲ್ಲಿ ಜನಮೆಚ್ಚುಗೆ ಪಡೆದಿದ್ದು ಗೃಹಜ್ಯೋತಿ. ಇಂಧನ ಇಲಾಖೆಯಿಂದ ಪ್ರತಿಯೊಂದು ಮನೆಗೂ ತಲಾ 200 ಯೂನಿಟ್ ವಿದ್ಯುತ್ ಕೊಡುವ ಯೋಜನೆ ಕರ್ನಾಟಕದ ಶೇಕಡ 90ರಷ್ಟು ಕುಟುಂಬಗಳಿಗೆ ಅನುಕೂಲಕರವಾಗಿದೆ.
ಕರ್ನಾಟಕದ ಪ್ರತಿಯೊಂದು ಗ್ರಾಮಗಳಲ್ಲೂ ಈ ಯೋಜನೆ ಜಾರಿಯಾಗಿದ್ದು, ಕಳೆದ ವರ್ಷ ಆಗಸ್ಟ್ ಮೊದಲ ವಾರದಿಂದ. ಅಂದರೆ ಒಂದು ವರ್ಷ ಪೂರ್ಣ. ಸಾಮಾನ್ಯ ಕುಟುಂಬವೊಂದು ತಿಂಗಳಿಗೆ 200 ಯೂನಿಟ್ಗಿಂತ ಹೆಚ್ಚು ಬಳಕೆ ಮಾಡುವುದಿಲ್ಲ ಾದ್ದರಿಂದ ಬಹುತೇಕ ಜನತೆಗೆ ಉಪಯೋಗಕ್ಕೆ ಬಂದಿದೆ. ಯಾವುದೇ ಮಾನದಂಡ ನಿಗದಿ ಮಾಡದೆ ಪ್ರತಿಯೊಂದು ಕುಟುಂಬಕ್ಕೂ ಕಾಂಗ್ರೆಸ್ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ತಿಂಗಳಿಗೆ 1500 ರೂಪಾಯಿ ಅಂತಾ ಲೆಕ್ಕ ಇಟ್ಟುಕೊಂಡರೂ ಈಗಾಗಲೇ ರಾಜ್ಯದ ಬಹುತೇಕ ಕುಟುಂಬಗಳಿಗೆ 18 ಸಾವಿರ ಉಳಿತಾಯ ಆದದಂತೆ ಆಗಿದೆ. ಅದರಲ್ಲೂ ಈ ಯೋಜನೆಯನ್ನು ಸಮರ್ಥವಾಗಿ ಜಾರಿ ಮಾಡುವಲ್ಲಿ ಸಚಿವ ಕೆ.ಜೆ ಜಾರ್ಜ್ ಅವರ ಶ್ರಮ ಮೆಚ್ಚುವಂತದ್ದು.
ಕರ್ನಾಟಕದಲ್ಲಿ ಇಂಧನ ಇಲಾಖೆ ಈಗಾಗಲೇ ನಷ್ಟದಲ್ಲಿದ್ದು, ಉಚಿತವಾಗಿ ವಿದ್ಯುತ್್್ ಕೊಡುವುದು ಅಸಾಧ್ಯ ಎಂದವರು ಹಲವು ಮಂದಿ. ಆದರೆ ಕರ್ನಾಟಕ ಪವರ್ ಕಾರ್ಪೊರೇಷನ್ ಜೊತೆಗೆ ನಿರಂತರ ಸಭೆಗಳನ್ನು ಮಾಡುತ್ತ, ಹಣದ ಮೂಲ ಹಾಗು ಉಚಿತ ವಿದ್ಯುತ್ ವಿತರಣೆಯಿಂದ ಆಗುವ ನಷ್ಟವನ್ನು ಸರಿದೂಗಿಸಿಕೊಂಡು ಬಂದಿದ್ದು ಸಚಿವ ಕೆ.ಜೆ ಜಾರ್ಜ್. ಜೊತೆಗೆ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಜೊತೆಗೆ ಉತ್ತಮ ಬಾಂಧವ್ಯದೊಂದಿಗೆ ಇಡೀ ರಾಜ್ಯದ ಜನರಿಗೆ ಬೆಳಕು ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರದ ಸಾಧನೆಯೇ ಸರಿ. ಬೇರೆಲ್ಲಾ ಯೋಜನೆಗಳು ಕೇವಲ ವ್ಯಕ್ತಿ ಆಧಾರಿತವಾಗಿದ್ದು, ವೈಯಕ್ತಿಕ ಲಾಭ ತಂದು ಕೊಡುತ್ತವೆ. ಆದರೆ ಗೃಹಜ್ಯೋತಿ ಯೋಜನೆ ಇಡೀ ಕುಟುಂಬಕ್ಕೆ ಲಾಭದಾಯಕ ಎನ್ನಬಹುದು.
ಗೃಹಜ್ಯೋತಿಗೆ 2024ರ ಜೂನ್ ತನಕದ ಲೆಕ್ಕ ನೋಡುವುದಾದರೆ ಒಟ್ಟು 1 ಕೋಟಿ 67 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. 1 ಕೋಟಿ 56 ಲಕ್ಷ ಜನರು ಈ ಯೋಜನೆಯ ಸಂಪೂಣ್ಳ ಲಾಭ ಪಡೆದಿದ್ದು, ಆಗಸ್ಟ್ 2023 ರಿಂದ ಜೂನ್ 2024ರ ತನಕ ರಾಜ್ಯ ಸರ್ಕಾರ 8,239 ಕೋಟಿ ಹಣವನ್ನು ಅನುದಾನ ರೂಪದಲ್ಲಿ ಬಿಡುಗಡೆ ಮಾಡಿದೆ.
ಬೆಂಗಳೂರು ಸೇರಿದಂತೆ ಇತರೆ ನಗರ ಪ್ರದೇಶಗಳಲ್ಲಿ ವಾಸ ಮಾಡುವ ಬಾಡಿಗೆದಾರರನ್ನು ಗಮನದಲ್ಲಿ ಇಟ್ಟುಕೊಂಡ ಇಂಧನ ಇಲಾಖೆ, ಮನೆ ಬದಲಾಯಿಸಿದ ನಂತರ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಹಳೆ ಮನೆಯ ಆರ್.ಆರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡುವ ಸೌಲಭ್ಯ ಕಲ್ಪಿಸಿದೆ. ನೀವು ಈಗಾಗಲೇ ಲಿಂಕ್ ಮಾಡಿರುವ ಆಧಾರ್ ಕಾರ್ಡ್ ಅನ್ನು ಡಿ-ಲಿಂಕ್ ಮಾಡಿ ಹೊಸ ಮನೆಯ ಆರ್ ಆರ್ ನಂಬರ್ ಜೊತೆಗೆ ಹೊಸದಾಗಿ ಲಿಂಕ್ ಮಾಡುವ ಸೌಲಭ್ಯವನ್ನು ಇಂಧನ ಇಲಾಖೆ ಪ್ರಕಟಿಸಿದೆ.
Krishnamani