
ಹಾಸನ (Hassan) ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal revanna) ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ (Rape case) ಸಂಬಂಧಿಸಿದಂತೆ ಇಂದು (ಜು.30) ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಹೀಗಾಗಿ ಪ್ರಜ್ವಲ್ ರೇವಣ್ಣಗೆ ಟೆನ್ಷನ್ ಹೆಚ್ಚಾಗಿದೆ.

ಈ ತೀರ್ಪು ಪ್ರಜ್ವಲ್ ರೇವಣ್ಣ ಭವಿಷ್ಯದ ಪಾಲಿಗೆ ಮಹತ್ವ ಪಡೆದುಕೊಂಡಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು 4 ಕೇಸ್‌ಗಳಿವೆ. ಈ ನಾಲ್ಕು ಕೇಸ್‌ಗಳ ಪೈಕಿ ಈಗ ಮೊದಲ ಕೇಸ್ ತೀರ್ಪು ಪ್ರಕಟವಾಗುತ್ತಿದೆ. ಈ ಕೇಸ್‌ನಲ್ಲಿ ಈಗಾಗಲೇ ವಾದ- ಪ್ರತಿವಾದ ಮುಗಿದಿದ್ದು, ಸಾಕ್ಷ್ಯಗಳ ವಿಚಾರಣೆ ಕೂಡ ಮುಗಿದಿದೆ.

ಹೀಗಾಗಿ ಕಾಯ್ದಿರಿಸಿರುವ ಕೇಸ್ ತೀರ್ಪು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನೀಡಲಿದೆ. ಒಂದು ವೇಳೆ ಅಪರಾಧಿ ಎಂದು ತೀರ್ಪು ನೀಡಿದರೇ, ಬಳಿಕ ಶಿಕ್ಷೆಯ ಪ್ರಮಾಣವನ್ನೂ ಪ್ರಕಟಿಸಲಾಗುತ್ತೆ. ಶಿಕ್ಷೆಯ ಪ್ರಮಾಣದ ಬಗ್ಗೆ ವಾದ- ಪ್ರತಿವಾದ ನಡೆಯಲಿದೆ. ಗರಿಷ್ಠ ಶಿಕ್ಷೆಯನ್ನು ವಿಧಿಸಬೇಕೆಂದು ಪ್ರಾಸಿಕ್ಯೂಷನ್ ಪರ ವಕೀಲರು ವಾದ ಮಂಡಿಸಲಿದ್ದಾರೆ. ಕಡಿಮೆ ಶಿಕ್ಷೆ ವಿಧಿಸಬೇಕೆಂದು ಪ್ರಜ್ವಲ್ ರೇವಣ್ಣ ಪರ ವಕೀಲರು ಪ್ರತಿವಾದ ಮಂಡಿಸಲಿದ್ದಾರೆ.