• Home
  • About Us
  • ಕರ್ನಾಟಕ
Wednesday, December 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಪರಾರಿಯಾಗಿದ್ದ ಖತರ್ನಾಕ್ ಅಂಕುರ್ ರಾಣಾ ಜೈಪುರದಲ್ಲಿ ಅರೆಸ್ಟ್.

ಪ್ರತಿಧ್ವನಿ by ಪ್ರತಿಧ್ವನಿ
November 6, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಪ್ರೀತಿಯ ಬಲೆಗೆ ಬಿದ್ದು ಪ್ರಿಯತಮನ ಸಹಾಯದಿಂದ ತನ್ನ ಪತಿಯನ್ನು ಕೊಡಗಿನ ಪನ್ಯ ಎಸ್ಟೇಟ್ ಬಳಿ ಸುಟ್ಟು ಹತ್ಯೆ ಮಾಡಿದ ಯುವತಿಯ ಪ್ರಕರಣ ಕೊಡಗು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂತು. ಯಾವುದೇ ಕುರುಹು ಸಿಗದಂತೆ ಮೃತ ದೇಹ ಸುಟ್ಟು ಹಾಕಿದ್ದ ಅತ್ಯಂತ ಕ್ಲಿಷ್ಟಕರ ಎನಿಸಿದ್ದ ಪ್ರಕರಣವನ್ನು ಚಾಣಕ್ಷತನದಿಂದ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದ ಕೊಡಗು ಜಿಲ್ಲಾ ಪೊಲೀಸ್ ತಂಡ ಇಡೀ ದೇಶದ ಗಮನ ಸೆಳೆದಿತ್ತು. ಪೊಲೀಸರ ಈ ಸಾಧನೆಗೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

ADVERTISEMENT

ಆದರೆ. ಅಂಕುರ್ ರಾಣಾ ಇದೇ ಪೊಲೀಸರ ಖ್ಯಾತಿಗೆ ಮಣ್ಣು ಎರಚುವ ಕೃತ್ಯ ಮಾಡಿದ. ಆರೋಪಿ ಅಂಕುರ್ ರಾಣಾ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿ ಪೊಲೀಸ್ ಇಲಾಖೆಗೆ ಸಾಕಷ್ಟು ಮುಜುಗರ ಉಂಟು ಮಾಡಿದ್ದ.

ಆದರೂ ಕುಗ್ಗದ ಪೊಲೀಸ್ ವಿಶೇಷ ತನಿಖಾ ತಂಡ ಛಲ ಬಿಡದೇ ಕಾರ್ಯಾಚರಣೆಗೆ ಇಳಿದು ನೆನ್ನೆ ದಿನ ರಾಜಸ್ಥಾನದ ಜೈಪುರದಲ್ಲಿ ಅಂಕುರ್ ರಾಣಾನ ಪಲಾಯನಕ್ಕೆ ಅಂಕುಶ ಹಾಕಿ ಪೊಲೀಸ್ ತಂಡ ಮತ್ತೆ ಈತನ ಹೆಡೆಮುರಿ ಕಟ್ಟಿದೆ.

ಅಕ್ಟೋಬರ್ ತಿಂಗಳ ಎಂಟನೇ ತಾರೀಖಿನಂದು ಸುಂಟಿಕೊಪ್ಪ ಪನ್ಯ ತೋಟದ ಮಾರಿಗುಡಿ ಬಳಿ ಕಾಫಿ ತೋಟದ ನಡುವೆ ಅಪರಿಚಿತ ಪುರುಷನ ಅರೆಬೆಂದ ಮೃತದೇಹ ಪತ್ತೆಯಾಗಿತ್ತು.

ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 4 ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ನಂತರ ಆರೋಪಿಗಳ ಹೆಡೆಮುರಿ ಕಟ್ಟಲಾಗಿತ್ತು. ಇದಕ್ಕಾಗಿ ಕೊಡಗು ಪೊಲೀಸರು ವ್ಯಾಪಕ ಪ್ರಶಂಸೆ ಪಡೆದಿದ್ದರು.ಮೂವರು ಆರೋಪಿಗಳನ್ನು ಅ. 28 ರಂದು ಸ್ಥಳ ಮಹಜರಿಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು.

ತನಿಖೆ ಮುಗಿದ ನಂತರ ಕಳೆದ ಮಂಗಳವಾರ ಆರೋಪಿಗಳ ಪೈಕಿ ನಿಹಾರಿಕ ಮತ್ತು ಅಂಕುರ್ ರಾಣಾನನ್ನು ತೆಲಂಗಾಣಾದ ಉಪ್ಪಲ್ ಎಂಬಲ್ಲಿಗೆ ಕರೆದುಕೊಂಡು ಹೋಗಿ ಆ ದಿನದ ಮಹಜರು ಮುಗಿಸಿ ಲಾಡ್ಜ್ ನಲ್ಲಿ ತನಿಖಾ ತಂಡ ವಾಸ್ತವ್ಯ ಹೂಡಿತ್ತು.

ಗುರುವಾರ ಬೆಳಗಿನ ಜಾವ ಎರಡೂವರೆಯಿಂದ ಮೂರೂವರೆ ಗಂಟೆಯ ನಡುವೆ ಅಂಕುರ್ ರಾಣಾ ಕೈಕೊಳವನ್ನು ಬಿಡಿಸಿಕೊಂಡು ಪೊಲೀಸ್ ಸಿಬ್ಬಂದಿಯೊಬ್ಬರ ಮೊಬೈಲ್ ಅನ್ನು ಎಗರಿಸಿ ಕಿಟಕಿ ಮೂಲಕ ಪರಾರಿ ಆಗಿದ್ದ.ಇದರಿಂದ ತಬ್ಬಿಬ್ಬಾದ ಪೊಲೀಸರು ಈತನ ಪತ್ತೆಗಾಗಿಉತ್ತರ ಭಾರತಕ್ಕೆ ತೆರಳಿದರು.ಈ ತನಿಖಾ ತಂಡ ನಿನ್ನೆ ಜೈಪುರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿ ಕೊಡಗಿಗೆ ಕರೆ ತರಲಾಗುತ್ತಿದೆ.

ಮೊನ್ನೆ ಸೋಮವಾರ ನಿಹಾರಿಕಾ ಹಾಗೂ ಅಂಕುರ್ ರಾಣಾನನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿತ್ತು.ಆದರೆ ಅಂಕುರ್ ರಾಣಾ ತಪ್ಪಿಸಿಕೊಂಡಿದ್ದರಿಂದ ನಿಹಾರಿಕಾಳನ್ನು ಮಾತ್ರ ಹಾಜರುಪಡಿಸಿ ತೆಲಂಗಾಣದಲ್ಲಿ ದೂರು ನೀಡಲಾದ ಎಫ್.ಐ.ಆರ್.ಅನ್ನು ಹಾಜರುಪಡಿಸಿ, ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವುದಾಗಿ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.ಕೊನೆಗೂ ಕೊಡಗು ಪೊಲೀಸರು ಕೆಚ್ಚೆದೆಯಿಂದ ನಿಟ್ಟುಸಿರು ಬಿಡುವಂತೆ ಆಗಿದೆ.

Tags: accusedarrested in Jaipur.BangaloreCoffee plantationhalf-burnt bodyKodaguMarigudi of Suntikoppa Panya Plantation.Niharika and Ankur Ran.Telangana
Previous Post

ಬೆರಳೆಣಿಕೆಯ ಖಲಿಸ್ಥಾನಿಗಳಿಂದ ಹಿಂದೂ -ಸಿಖ್‌ ಸಂಬಂಧ ಹಾಳು ಗೆಡವಲು ಯತ್ನ ; ಮಾಜಿ ರಾಜತಾಂತ್ರಿಕ

Next Post

ಡೊನಾಲ್ಡ್ ಟ್ರಂಪ್ ಮೋಟರ್‌ಕೇಡ್ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ಗೆ ಭೇಟಿ

Related Posts

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಶಾಕ್
ಕರ್ನಾಟಕ

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಶಾಕ್

by ಪ್ರತಿಧ್ವನಿ
December 3, 2025
0

ಬೆಂಗಳೂರು: ಅತ್ಯಾಚಾರ ಕೇಸ್ ನಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ(Prajwal Revanna)ಗೆ ಹೈಕೋರ್ಟ್ ಶಾಕ್ ನೀಡಿದೆ. ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡಲು ಹೈಕೋರ್ಟ್...

Read moreDetails
ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ಸಾ**

ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ಸಾ**

December 3, 2025
ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

December 3, 2025
ಮಹಿಳಾ ನೌಕರರಿಗೆ ಋತುಚಕ್ರ ರಜೆ ಆದೇಶ ಈ ತಕ್ಷಣದಿಂದಲೇ ಜಾರಿ..!

ಮಹಿಳಾ ನೌಕರರಿಗೆ ಋತುಚಕ್ರ ರಜೆ ಆದೇಶ ಈ ತಕ್ಷಣದಿಂದಲೇ ಜಾರಿ..!

December 3, 2025
ರಜತ್‌, ಚೈತ್ರಾ ಈ ವಾರವೇ ಔಟ್‌: ಹಾಲಿ ಸ್ಪರ್ಧಿಗಳಿಗೆ ಚಮಕ್ ಕೊಟ್ರಾ ಬಿಗ್‌ ಬಾಸ್‌..?

ರಜತ್‌, ಚೈತ್ರಾ ಈ ವಾರವೇ ಔಟ್‌: ಹಾಲಿ ಸ್ಪರ್ಧಿಗಳಿಗೆ ಚಮಕ್ ಕೊಟ್ರಾ ಬಿಗ್‌ ಬಾಸ್‌..?

December 3, 2025
Next Post

ಡೊನಾಲ್ಡ್ ಟ್ರಂಪ್ ಮೋಟರ್‌ಕೇಡ್ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ಗೆ ಭೇಟಿ

Recent News

ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ಸಾ**
Top Story

ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ಸಾ**

by ಪ್ರತಿಧ್ವನಿ
December 3, 2025
ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ
Top Story

ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

by ಪ್ರತಿಧ್ವನಿ
December 3, 2025
ಮಹಿಳಾ ನೌಕರರಿಗೆ ಋತುಚಕ್ರ ರಜೆ ಆದೇಶ ಈ ತಕ್ಷಣದಿಂದಲೇ ಜಾರಿ..!
Top Story

ಮಹಿಳಾ ನೌಕರರಿಗೆ ಋತುಚಕ್ರ ರಜೆ ಆದೇಶ ಈ ತಕ್ಷಣದಿಂದಲೇ ಜಾರಿ..!

by ಪ್ರತಿಧ್ವನಿ
December 3, 2025
ರಜತ್‌, ಚೈತ್ರಾ ಈ ವಾರವೇ ಔಟ್‌: ಹಾಲಿ ಸ್ಪರ್ಧಿಗಳಿಗೆ ಚಮಕ್ ಕೊಟ್ರಾ ಬಿಗ್‌ ಬಾಸ್‌..?
Top Story

ರಜತ್‌, ಚೈತ್ರಾ ಈ ವಾರವೇ ಔಟ್‌: ಹಾಲಿ ಸ್ಪರ್ಧಿಗಳಿಗೆ ಚಮಕ್ ಕೊಟ್ರಾ ಬಿಗ್‌ ಬಾಸ್‌..?

by ಪ್ರತಿಧ್ವನಿ
December 3, 2025
Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!
Top Story

Daily Horoscope: ಇಂದು ದಿಢೀರ್‌ ಧನ ಲಾಭವಾಗುವ ರಾಶಿಗಳಿವು..!

by ಪ್ರತಿಧ್ವನಿ
December 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಶಾಕ್

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಶಾಕ್

December 3, 2025
ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ಸಾ**

ಬಾಗಲಕೋಟೆಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ಯುವಕರು ಸ್ಥಳದಲ್ಲೇ ಸಾ**

December 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!