ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಆಗಿರುವ ಕೆಸಿ ವ್ಯಾಲಿ ನೀರು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಕೋಲಾರಕ್ಕೆ ಹರಿಯುತ್ತಿದ್ದ ಕೆ.ಸಿ ವ್ಯಾಲಿ ಯೋಜನೆ ನೀರನ್ನು ಕಳೆದ ಒಂದು ವಾರದಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.
ಇಂದಿನಿಂದ ಮತ್ತೆ ಲಕ್ಷ್ನೀಸಾಗರ ಕೆರೆಗೆ ನೀರು ಹರಿಸಲಾಗುವುದು ಎಂದು ಕೆ.ಸಿ ವ್ಯಾಲಿ ಯೋಜನೆಯ ಹಿರಿಯ ಇಂಜಿನಿಯರ್ ಕೃಷ್ಣ ಮಾಹಿತಿ ನೀಡಿದ್ದಾರೆ. ಲಕ್ಷ್ಮೀಸಾಗರ ಡಿ.ಸಿ ಪಾಯಿಂಟ್ ಬಳಿ ದುರಸ್ತಿ ಕಾರ್ಯ ಹಾಗು ಮೇನ್ ಪೈಪ್‌ಲೈನ್ ಶುಚಿ ಕಾರ್ಯ ಹಿನ್ನಲೆ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು.
ಇದೀಗ ದುರಸ್ತಿ ಕಾರ್ಯ ಮುಕ್ತಾಯಗೊಂಡಿದ್ದು, ಇಂದಿನಿಂದ ಕೋಲಾರ ಜಿಲ್ಲೆಗೆ ಎಂದಿನಂತೆ ನೀರು ಹರಿಸಲು ಸಣ್ಣ ನೀರಾವರಿ ಇಲಾಖೆ ಸಜ್ಜಾಗಿದೆ. ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ವೃದ್ಧಿಸಲು ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ, ಕೋಲಾರದ ಕೆರೆಗಳಿಗೆ ಹರಿಸುವ ಕೆ.ಸಿ ವ್ಯಾಲಿ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ.