• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಇನ್ನು ಮುಂದೆ ‘ಆಲ್ ಇಂಡಿಯಾ ರೇಡಿಯೋ’ ಬದಲಾಗಿ ಕೇಳಿಬರಲಿರುವುದು ಬರಿ ‘ಆಕಾಶವಾಣಿ’

ಫಾತಿಮಾ by ಫಾತಿಮಾ
May 5, 2023
in ಅಂಕಣ
0
ಇನ್ನು ಮುಂದೆ ‘ಆಲ್ ಇಂಡಿಯಾ ರೇಡಿಯೋ’ ಬದಲಾಗಿ ಕೇಳಿಬರಲಿರುವುದು ಬರಿ ‘ಆಕಾಶವಾಣಿ’
Share on WhatsAppShare on FacebookShare on Telegram

From now on, only ‘Akaashvani’ will be heard instead of ‘All India Radio’.

ADVERTISEMENT


‘This is all india radio’ ಎನ್ನುವ ಮಾತಿನ ಮೂಲಕ ಆರಂಭವಾಗುತ್ತಿದ್ದ, ದಶಕಗಳ ಕಾಲ ಭಾರತೀಯರ ಸುದ್ದಿಯ ಹಸಿವನ್ನು ತಣಿಸಿದ ‘ಆಲ್ ಇಂಡಿಯಾ’ ರೇಡಿಯೋ ಇನ್ನು ಮುಂದೆ ಕೇಳಲು ಸಾಧ್ಯವಾಗುವುದಿಲ್ಲ. ಇನ್ನು ಮುಂದೆ ಇಂಗ್ಲಿಷ್ ನ್ಯೂಸ್ ‘ಇದು ಆಕಾಶವಾಣಿ’ ಎಂಬಂತೆ ಶುರುವಾಗಲಿದೆ.

ಬುಧವಾರ, ಮೇ 3 ರಂದು ಹೊರಡಿಸಲಾದ ಉಪಗ್ರಹ ಸಂದೇಶದಲ್ಲಿ, ಆಕಾಶವಾಣಿಯ ಮಹಾನಿರ್ದೇಶಕರ ಕಚೇರಿಯ ನೀತಿ ವಿಭಾಗವು ದೇಶದಾದ್ಯಂತ ಎಲ್ಲಾ ಆಕಾಶವಾಣಿ ಕೇಂದ್ರಗಳಿಗೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ (I&B) ಕಾನೂನನ್ನು ಜಾರಿಗೊಳಿಸಲು ನಿರ್ಧರಿಸಿದೆ. ಈ ಪ್ರಕಾರ ಪ್ರಸಾರ ಭಾರತಿಯ ರೇಡಿಯೋ ವರ್ಟಿಕಲ್ ಅನ್ನು ಮುಂದೆ ಈಗ ಆಕಾಶವಾಣಿ ಎಂದು ಮಾತ್ರ ಕರೆಯಲಾಗುವುದು.

ಈ ಬಗ್ಗೆ ಮಾತಾಡಿರುವ ಮಾಜಿ ಮಾಹಿತಿ ಮತ್ತು ಪ್ರಸಾರ ಸಚಿವ ಮನೀಶ್ ತಿವಾರಿ, “ಆಲ್ ಇಂಡಿಯಾ ರೇಡಿಯೋ ಪದವನ್ನು ಬಳಸುವುದರಲ್ಲಿ ತಪ್ಪೇನಿತ್ತು? ಇದು ನಿಜವಾಗಿಯೂ ಮೂರ್ಖತನದ ನಿರ್ಧಾರ. ಶುದ್ಧ ಟೋಕನಿಸಂ ಹೊರತುಪಡಿಸಿ ಇದರಲ್ಲಿ ಬೇರೇನಿಲ್ಲ” ಎಂದಿದ್ದಾರೆ.

“ಆಕಾಶವಾಣಿ” ಪದವನ್ನು 1939 ರಲ್ಲಿ ‘ಆಲ್ ಇಂಡಿಯಾ ರೇಡಿಯೋ’ದ ಕಾವ್ಯಾತ್ಮಕ ಅನುವಾದವಾಗಿ ಮೊದಲು ಬಳಸಿದ್ದು ರವೀಂದ್ರನಾಥ ಟಾಗೋರರು. ಕಲ್ಕತ್ತಾದ ಆಲ್ ಇಂಡಿಯಾ ರೇಡಿಯೊದ ಡಾಲ್ಹೌಸಿ ಸ್ಕ್ವೇರ್ ಕಛೇರಿಯನ್ನು ಉದ್ಘಾಟಿಸಲು ಬರಲು ಸಾಧ್ಯವಾಗದೇ ಇದ್ದಾಗ ಟಾಗೋರರು ಈ ಪದವನ್ನು ಬಳಸಿ ಸಂದೇಶವನ್ನು ಕಳಿಸಿದ್ದರು. ಈ ಬಗ್ಗೆ ಮಾತನಾಡಿದ ಟಿಎಂಸಿ ಸಂಸದ ಮತ್ತು ಮಾಜಿ ಐ & ಬಿ ಕಾರ್ಯದರ್ಶಿ ಜವಾಹರ್ ಸಿರ್ಕಾರ್ ” ಆ ಹೊತ್ತಿನಲ್ಲಿ ಸ್ವಾತಂತ್ರ್ಯ ಚಳುವಳಿಯು ಉತ್ತುಂಗದಲ್ಲಿತ್ತು ಮತ್ತು ಆಕಾಶವಾಣಿ ಎಂಬ ಪದವು ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ಸೂಕ್ಷ್ಮ ರಾಷ್ಟ್ರೀಯತೆಯ ಭಾಗವಾಯಿತು” ಎನ್ನುತ್ತಾರೆ.

ಆದರೆ ಆ ಪದಕ್ಕೂ ಕರ್ನಾಟಕಕ್ಕೂ ಒಂದು ಅವಿನಾಭಾವ ಸಂಬಂಧ ಇದೆ ಎಂದು ಇತಿಹಾಸ ಹೇಳುತ್ತದೆ. 1939ಕ್ಕೆ ಮುಂಚೆಯೇ ಮೈಸೂರಿನಲ್ಲಿದ್ದ ರೇಡಿಯೋ ಸ್ಟೇಷನ್ ಅನ್ನು ಆಕಾಶವಾಣಿ ಎಂದೇ ಕರೆಯಲಾಗುತ್ತಿತ್ತು. ಆದರೆ ಈ ಪದವನ್ನು ಜನಪ್ರಿಯಗೊಳಿಸಿದ್ದು ಮಾತ್ರ ಟಾಗೋರರೇ.

ಈಗ, ಪ್ರಧಾನ ಕಚೇರಿಯಿಂದ ಬಂದಿರುವ ಸಂದೇಶದ ಪ್ರಕಾರ ಎಲ್ಲಾ ಭಾಷೆಗಳಿಗೂ ಈ ನಿಯಮ ಅನ್ವಯವಾಗಲಿದೆ. ನವೆಂಬರ್ 1997 ರಲ್ಲಿ ಜಾರಿಗೆ ತರಲಾದ ಪ್ರಸಾರ ಭಾರತಿ (ಭಾರತೀಯ ಪ್ರಸಾರ ನಿಗಮ) ಕಾಯಿದೆ1990ರ ಸೆಕ್ಷನ್ 2 (ಎ)ಯು ‘ಆಕಾಶವಾಣಿ’ ಎಂದರೆ “ಆಲ್ ಇಂಡಿಯಾ ರೇಡಿಯೋದ ಅಡಿಯಲ್ಲಿ ಬರುವ ಎಲ್ಲಾ ಕಚೇರಿಗಳು, ಸ್ಟೇಷನ್‌ಗಳು ಮತ್ತು ಇತರ ಯಾವುದೇ ಹೆಸರಿನಿಂದ ಕರೆಯಲ್ಪಡುವ ಸಂಸ್ಥೆಗಳಾಗಿರುತ್ತವೆ ಮತ್ತು ಆಲ್ ಇಂಡಿಯಾ ರೇಡಿಯೋದ ಮಹಾ ನಿರ್ದೇಶಕರ ಅಡಿಯಲ್ಲಿ ಬರುವ, 1997ರ ಮುಂಚೆ ಸ್ಥಾಪನೆಯಾದ ಎಲ್ಲಾ ಸಂಸ್ಥೆಗಳು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಈಗ 26 ವರ್ಷಗಳ ನಂತರ ಈ ನಿಬಂಧನೆಯನ್ನು ಜಾರಿಗೆ ತರಲು ಸಚಿವಾಲಯ ನಿರ್ಧರಿಸಿದೆ.

ಈ ಬಗ್ಗೆಯೂ ಮಾತಾನಾಡಿರುವ ಸಿರ್ಕಾರ್ “ಕಾಯ್ದೆಯ ನಿಬಂಧನೆಯು ತುಂಬಾ ಸ್ಪಷ್ಟವಾಗಿದೆ. ನವೆಂಬರ್ 15, 1997 ರಂದು ರೇಡಿಯೊ ವರ್ಟಿಕಲ್‌ನ ಭಾಗವಾಗಿರುವ ಎಲ್ಲಾ ಸಂಸ್ಥೆಗಳು ಎಂದು ಕಾಯ್ದೆ ಹೇಳುತ್ತವೆ. ಈ ದಿನಾಂಕದ ನಂತರ ಸ್ಥಾಪಿಸಲಾದ ಕಚೇರಿಗಳಿಗೆ ಏನಾಗುತ್ತದೆ ಎಂಬುದರ ಕುರಿತು ಕಾನೂನು ಸ್ಪಷ್ಟವಾಗಿಲ್ಲ”ಎನ್ನುತ್ತಾರೆ.

“ವಸಾಹತುಶಾಹಿ ಪರಂಪರೆಯನ್ನು ತೊಡೆದುಹಾಕುವುದು ಈ ಹೊಸ ಘೋಷಣೆಯ ಉದ್ದೇಶವಾಗಿದ್ದರೆ, ‘ವಿವಿಧ ಭಾರತಿ’ಯ ಬಗ್ಗೆ ಸರ್ಕಾರದ ನಿರ್ಧಾರ ಏನು?” ಎಂದು ಕೇಳುವ ಅವರು ಅಗಾಧವಾಗಿ ಜನಪ್ರಿಯವಾಗಿದ್ದ ರೇಡಿಯೊ ಸಿಲೋನ್‌ಗೆ ಪ್ರತಿಸ್ಪರ್ಧಿಯಾಗಿ 1957 ರಲ್ಲಿ ಪ್ರಾರಂಭವಾದ ‘ವಿವಿಧ ಭಾರತಿ’ ಇನ್ನೂ ‘ವಾಣಿಜ್ಯ ಪ್ರಸಾರ ಸೇವೆ’ ಎಂದೇ ಗುರುತಿಸಿಕೊಳ್ಳುತ್ತಿದೆ. ಅದನ್ನು ಬದಲಾಯಿಸುವ ಬಗ್ಗೆ ಸರ್ಕಾರ ಮಾತಾಡುತ್ತಿಲ್ಲವೇಕೆ ಎಂದೂ ಪ್ರಶ್ನಿಸುತ್ತಾರೆ.

Tags: AIRAkaashvaniAkashvaniAll India Radio'BJPbjpindaiCongress PartyManish TiwariMinistry of Information and BroadcastingPMModiPrasar BharatiThis is all india radioಬಿಜೆಪಿ
Previous Post

ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ ; ನಗರದಲ್ಲಿ ಮಾರ್ಗ ಬದಲಾವಣೆ

Next Post

ಕೊಪ್ಪಳದಲ್ಲಿ ಅಮಿತ್​ ಶಾ ಪ್ರಚಾರ ಕಾರ್ಯಕ್ರಮ ಏಕಾಏಕಿ ರದ್ದು : ಇದರ ಹಿಂದಿದೆ ಈ ಕಾರಣ

Related Posts

ಒಳದನಿಗೆ ಜೀವತುಂಬಿದ ʼ ಪ್ರತಿಧ್ವನಿ ʼ ಯೊಡನೆ- ನಾ ದಿವಾಕರ  ಲೇಖನ
ಅಂಕಣ

ಒಳದನಿಗೆ ಜೀವತುಂಬಿದ ʼ ಪ್ರತಿಧ್ವನಿ ʼ ಯೊಡನೆ- ನಾ ದಿವಾಕರ  ಲೇಖನ

by ಪ್ರತಿಧ್ವನಿ
April 13, 2026
0

-ನಾ ದಿವಾಕರ ವಿಕಸಿತ ಆಗಲು ಮುಂದಡಿಯಿಡುತ್ತಿರುವ ನವ ಭಾರತದಲ್ಲಿ ಡಿಜಿಟಲ್‌ ಯುಗ ಸೃಷ್ಟಿಸಿರುವ ತಲ್ಲಣಗಳು ಜನಸಂಖ್ಯೆಯ ಯಾವ ವಲಯವನ್ನೂ ಬಿಡದೆ ಪ್ರಭಾವಿಸಿವೆ ಪ್ರಭುತ್ವದ ಆಡಳಿತ ನೀತಿಗಳು ಮತ್ತು...

Read moreDetails
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

April 13, 2026
ಶಿಕ್ಷಣೋದ್ಯಮಕ್ಕೆ ಶಿಕ್ಷಣಾರ್ಥಿಗಳೇ ಸರಕುಗಳು- ನಾ ದಿವಾಕರ ಲೇಖನ

ಶಿಕ್ಷಣೋದ್ಯಮಕ್ಕೆ ಶಿಕ್ಷಣಾರ್ಥಿಗಳೇ ಸರಕುಗಳು- ನಾ ದಿವಾಕರ ಲೇಖನ

April 12, 2026
ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ-ನಾ ದಿವಾಕರ ಲೇಖನ

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ-ನಾ ದಿವಾಕರ ಲೇಖನ

April 10, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
Next Post
ಕೊಪ್ಪಳದಲ್ಲಿ ಅಮಿತ್​ ಶಾ ಪ್ರಚಾರ ಕಾರ್ಯಕ್ರಮ ಏಕಾಏಕಿ ರದ್ದು : ಇದರ ಹಿಂದಿದೆ ಈ ಕಾರಣ

ಕೊಪ್ಪಳದಲ್ಲಿ ಅಮಿತ್​ ಶಾ ಪ್ರಚಾರ ಕಾರ್ಯಕ್ರಮ ಏಕಾಏಕಿ ರದ್ದು : ಇದರ ಹಿಂದಿದೆ ಈ ಕಾರಣ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada