ತಿರುಮಲ : ಡಿ.23ರಿಂದ ಜ.1ರವರೆಗೆ ಜರುಗುವ ವೈಕುಂಠ ದ್ವಾರ ದರ್ಶನ ಮಹೋತ್ಸವಕ್ಕೆ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು ನ.10ರಿಂದ ಅವಕಾಶ ಕಲ್ಪಿಸಲಾಗಿದೆ ಎಂದು ತಿರುಮಲ ತಿರುಪತಿ ದೇಗುಲ ಕಾರ್ಯನಿರ್ವಹಣಾಧಿಕಾರಿ ಧರ್ಮರೆಡ್ಡಿ ತಿಳಿಸಿದ್ದಾರೆ. ‘ಈ ಬಾರಿ 10 ದಿನಗಳ ಅವಧಿಯಲ್ಲಿ 4.25ಲಕ್ಷ ಜನರಿಗೆ ವೈಕುಂಠ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆ ಸಮಯದಲ್ಲಿ 300 ರು. ವಿಶೇಷ ದರ್ಶನ ಹಾಗೂ ಶ್ರೀವಾಣಿ ದರ್ಶನ ಹೊರತುಪಡಿಸಿ ಉಳಿದ ಎಲ್ಲ ರೀತಿಯ ದರ್ಶನಗಳನ್ನು ರದ್ದುಪಡಿಸಲಾಗಿದೆ’ ಎಂದು ತಿಳಿಸಿದ್ದಾರೆ.

ವೈಕುಂಠ ಏಕಾದಶಿಯಂದು ವೈಕುಂಠ ದ್ವಾರ ದರ್ಶನವು ಡಿಸೆಂಬರ್ 23 ರಂದು ಪ್ರಾರಂಭವಾಗಲಿದ್ದು, ಜನವರಿ 1 ರವರೆಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಸುಗಮ ದರ್ಶನಕ್ಕೆ ಅನುಕೂಲವಾಗುವಂತೆ, ಟಿಟಿಡಿ ಈ 10 ದಿನಗಳಲ್ಲಿ 4.25 ಲಕ್ಷ ಎಸ್ಎಸ್ಡಿ ಟೋಕನ್ಗಳನ್ನು ವಿತರಿಸಲಿದೆ.