
ಸಲಿಂಗಕಾಮ ಆರೋಪ ಪ್ರಕರಣ ಸಂಬಂಧ ಸೂರಜ್ ರೇವಣ್ಣನನ್ನು ಬಂಧಿಸಿದ ಅರಸೀಕೆರೆ ಪೊಲೀಸ್ರು, ಹಾಸನದಿಂದ ಬೆಂಗಳೂರಿಗೆ ಕರೆತಂದು ಕೋರಮಂಗಲ ಜಡ್ಜ್ ನಿವಾಸದಲ್ಲಿ ಹಾಜರುಪಡಿಸಲಾಯ್ತು. 42ನೇ ಎಸಿಎಂಎಂ ನ್ಯಾಯಾಧೀಶರು ಸೂರಜ್ ರೇವಣ್ಣಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ರು. ಇನ್ನೂ ಈ ಪ್ರಕರಣ ಈಗಾಗಲೇ ಸಿಐಡಿ ತನಿಖೆಗೆ ಆದೇಶ ಆಗಿದ್ದು, ಸಿಐಡಿ ಅಧಿಕಾರಿಗಳ ಕೈಗೆ ಕೇಸ್ ಫೈಲ್ ಸೇರದ ಹಿನ್ನೆಲೆಯಲ್ಲಿ ನಿನ್ನೆ ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಇಂದು ಸೂರಜ್ ರೇವಣ್ಣನನ್ನ ಕಸ್ಟಡಿಗೆ ಪಡೆಯಲು ಓಪನ್ ಕೋರ್ಟ್‌ನಲ್ಲಿ ಬಾಡಿ ವಾರಂಟ್ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ಸೂರಜ್ ರೇವಣ್ಣನನ್ನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಇವತ್ತು ಬಾಡಿ ವಾರೆಂಟ್ ಮೇಲೆ ಸೂರಜ್‌ನನ್ನ ವಶಕ್ಕೆ ಪಡೆಯಲು ಸಿಐಡಿ ಅಧಿಕಾರಿಗಳು ಸಿದ್ದತೆ ಮಾಡಿಕೊಳ್ತಿದ್ರೆ, ಇನ್ನೊಂದು ಕಡೆ ಇವತ್ತು ಓಪನ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಕೆಗೂ ವಕೀಲರ ತಂಡ ತಯಾರಿ ಮಾಡಿಕೊಂಡಿದೆ. ಈ ಬಗ್ಗೆ ಸೂರಜ್ ರೇವಣ್ಣ ಪರ ವಕೀಲ ನಿಖಿಲ್ ಕಾಮತ್ ಮಾತನಾಡಿ, ಸಿಐಡಿ ಅಧಿಕಾರಿಗಳು ಓಪನ್ ಕೋರ್ಟ್‌ನಲ್ಲಿ ಕಸ್ಟಡಿಗೆ ಪಡೆಯಲು ಅರ್ಜಿ ಹಾಕ್ತಾರೆ. ಹೀಗಾಗಿ ನಾವು ಕೂಡ ಜಾಮೀನು ಅರ್ಜಿ ಸಲ್ಲಿಕೆ ಮಾಡ್ತೀವಿ ಎಂದಿದ್ದಾರೆ.

ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣಗಳ ತನಿಖೆ ಹೊಣೆ ಹೊತ್ತಿರುವ ಬಿ.ಕೆ.ಸಿಂಗ್ ಹೆಗಲಿಗೆ ಸೂರಜ್ ರೇವಣ್ಣ ಕೇಸ್ ಕೂಡ ನೀಡಲಾಗಿದೆ. ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಎಡಿಜಿಪಿಯಾಗಿರುವ ಬಿಕೆ ಸಿಂಗ್ ನೇತೃತ್ವದಲ್ಲಿ ಸಲಿಂಗ ಕಾಮದ ಬಗ್ಗೆ ತನಿಖೆ ನಡೆಯಲಿದೆ. ಮಾಜಿ ಸಚಿವ ಹೆಚ್.ಡಿ ರೇವಣ್ಣ ಸೇರಿದಂತೆ ಎಲ್ಲಾ ಕೇಸ್‌ಗಳ ತನಿಖೆಯನ್ನ ಎಸ್ಐಟಿ ತಂಡ ನಡೆಸುತ್ತಿದೆ. ಇದೀಗ ಸಿಐಡಿ ತನಿಖೆಗೆ ಹಸ್ತಾಂತರ ಆಗಿರುವ ಕಾರಣ ಬಿ.ಕೆ ಸಿಂಗ್ ಈ ಕೇಸ್‌ನ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

ಮಗ ಸೂರಜ್ ರೇವಣ್ಣ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಹೆಚ್.ಡಿ.ರೇವಣ್ಣ, ಬಂಧನ ಮಾಡ್ಲಿ ಬಿಡಿ, ಯಾರು ಬೇಡ ಅಂದೋರು. ಇಂತಹ ಷಡ್ಯಂತ್ರಕ್ಕೆಲ್ಲಾ ನಾನು ಹೆದರಲ್ಲ. ಷಡ್ಯಂತ್ರ ನಡೆಸ್ತಿರೋರು ಯಾರು..? ಅಂತ ನಾನು ಈಗ ಹೇಳಲ್ಲ. ಸದ್ಯಕ್ಕೆ ಎಲ್ಲವನ್ನ ಎದುರಿಸ್ತೇನೆ. ಕಾಲ ಬಂದಾಗ ಎಲ್ಲವನ್ನೂ ಹೇಳ್ತೇನೆ ಎಂದಿದ್ದಾರೆ. ಆದರೆ ಸೂರಜ್ ರೇವಣ್ಣ ಪರವಾಗಿ ದೂರು ದಾಖಲು ಮಾಡಿದ್ದ ಆಪ್ತ ಕೂಡ ಅಸಹಜ ಲೈಂಗಿಕ ದೌರ್ಜನ್ಯ ನನ್ನ ಮೇಲೂ ನಡೆದಿದೆ ಎಂದು ಹೇಳಿಕೊಂಡಿದ್ದು, ಇಂದು ಪ್ರಕರಣ ದಾಖಲಿಸುತ್ತೇನೆ ಎಂದಿದ್ದಾರೆ.
ಮೊದಲ ಸಂತ್ರಸ್ತ ದೂರು ನೀಡದಂತೆ ಹಣದ ಆಮಿಷ ಒಡ್ಡಲು ಸೂರಜ್ ರೇವಣ್ಣ ಮತ್ತೋರ್ವ ಸಂತ್ರಸ್ತನ ಸಹಾಯ ಪಡೆದಿರೋ ಬಗ್ಗೆಯೂ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾನೆ. ಸೂರಜ್ ಮೊದಲನೇ ಸಂತ್ರಸ್ತನಿಗೆ ಹಣ ನೀಡಲು ಮುಂದಾಗಿದ್ರು. ನಾನು ಮೊದಲ ಸಂತ್ರಸ್ತನ ಜೊತೆ ಮಾತಾಡಿದೆ. ಆದ್ರೆ ಅವನು ಒಪ್ಪಲಿಲ್ಲ ದೂರು ನೀಡಿದ್ದ. ಅಲ್ಲದೆ, ನನ್ನ ಮೇಲೆ ಕೂಡಾ ಸೂರಜ್ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಕೋವಿಡ್ 19 ವೇಳೆ ದೌರ್ಜನ್ಯ ಎಸಗಿದ್ದಾರೆ. ಹೀಗಾಗಿ ಇವತ್ತು ಸೂರಜ್ ವಿರುದ್ಧ ದೂರು ದಾಖಲಿಸುತ್ತೇನೆ ಎಂದಿದ್ದಾನೆ.
