ಗಾಲಿ ಜನಾರ್ದನ ರೆಡ್ಡಿ (Janardhana Reddy)
ಬಿಜೆಪಿಗೆ (BJP) ಅಧಿಕೃತವಾಗಿ ಸೇರ್ಪಡೆ ಆಗ್ತಾರಾ ಅಥವಾ ಬಾಹ್ಯ ಬೆಂಬಲ ಮಾತ್ರನಾ ಎನ್ನುವ ಸುದ್ದಿ ಹರಿದಾಡುತ್ತಿದೆ.

ಗಾಲಿ ಜನಾರ್ದನ ರೆಡ್ಡಿ ವಿಚಾರ ಮಾತನಾಡಲು ಶ್ರೀರಾಮುಲು (SriRamulu) ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬಿಗ್ ಸಂಚಲನ ಉಂಟಾಗಿದ್ದು ಜನಾರ್ದನ ರೆಡ್ಡಿ ಬಿಜೆಪಿ ಸೇರುತ್ತಾರೆ ಎನ್ನುವ ಮಾಹಿತಿ ಸಿಕ್ಕಿದೆ.

ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿರುವ ಬಿ. ಶ್ರೀರಾಮುಲು. ದೆಹಲಿಯ ಅಮಿತ್ ಶಾ ರ ನಿವಾಸದಲ್ಲಿ, ಅವರ ಭೇಟಿಗಾಗಿ ಕಾದು ಕುಳಿತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಧ್ವನಿಗೆ ಬಿ.ಶ್ರೀರಾಮುಲು ಅವರ ಆಪ್ತ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದ್ದು, ಅಮಿತ್ ಶಾ ಸೂಚನೆ ಬಂದರೆ, ನಾಳೆ ದೆಹಲಿಗೆ ಗಾಲಿ ಜನಾರ್ದನ ರೆಡ್ಡಿ ಪ್ರಯಾಣ ಬೆಳೆಸಲಿದ್ದಾರೆ.

ಬುಧವಾರ ಅಥವಾ ಗುರುವಾರ ಗಾಲಿ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಅಥವಾ ಬಾಹ್ಯ ಬೆಂಬಲದ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ.ಲೋಕಸಭಾ ಚುನಾವಣೆಗೂ ಮುನ್ನಾ ಜಗದೀಶ್ ಶೆಟ್ಟರ್‌ರನ್ನು ಸೆಳೆದಿರುವ ಬಿಜೆಪಿ.ಈಗ ಗಾಲಿ ಜನಾರ್ದನ ರೆಡ್ಡಿಯನ್ನು ಸೆಳೆಯಲು ಮುಂದಾಗಿದೆ.
ಇಂದು ರಾತ್ರಿ ಗಾಲಿ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಬಗ್ಗೆ ಅಮಿತ್ ಶಾ ಜೊತೆಗೆ ರಾಮುಲು ಚರ್ಚೆ ನಡೆಸಲಿದ್ದಾರೆ. ಬಳಿಕ ರಾಜ್ಯ ಬಿಜೆಪಿ ನಾಯಕರಿಗೆ ಹಾಗೂ ಗಾಲಿ ಜನಾರ್ದನ ರೆಡ್ಡಿಗೂ ರಾಮುಲು ಮಾಹಿತಿ ನೀಡಲಿದ್ದಾರೆ.2024 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಬುಧವಾರ ಬೆಳಿಗ್ಗೆ ತಮ್ಮ ಕೆಆರ್‌ಪಿಪಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಕರೆದಿರುವ ಗಾಲಿ ಜನಾರ್ದನ ರೆಡ್ಡಿ. ಸಭೆಯ ಬಳಿಕ ಅಂತಿಮ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಪ್ರಕಟಿಸಲಿದ್ದಾರೆ ಈ ಬಗ್ಗೆ
ಪ್ರತಿಧ್ವನಿಗೆ ಕೆಆರ್‌ಪಿಪಿದಿಂದಲೇ ರಾಜ್ಯ ಕಾರ್ಯಕಾರಿಣಿ ಸಭೆಯ ಬಗ್ಗೆ ಮಾಹಿತಿ ಸಿಕ್ಕಿದೆ.