ಅನ್ನ, ಅಕ್ಷರ, ಅವಕಾಶ ಕಲ್ಪಿಸುವ ಸಂಕಲ್ಪದೊಂದಿಗೆ ಒಕ್ಕಲಿಗ ಯುವ ಬ್ರಿಗೇಡ್ ನೇತೃತ್ವದಲ್ಲಿ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯುತ್ಸವ ಅಂಗವಾಗಿ ಉದ್ಯೋಗ ಮೇಳವನ್ನು, ಪಿರಿಯಾಪಟ್ಟಣ್ಣದಲಿರುವ ಆದಿ ಚುಂಚನಗಿರಿ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ರೈತರ ಮಕ್ಕಳಿಗಾಗಿ ಜನವರಿ 19ರೆಂದು ಬೆಳಿಗ್ಗೆ 10 ರಿಂದ ಸಂಜೆ 05 ರವರಿಗೆ ಉಚಿತ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ.
ವಿವಿಧ ವಿದ್ಯಾಹರ್ತೆಗೆ ಅವಕಾಶ: ಉದ್ಯೋಗಾಂಕ್ಷಿಗಳಿಗೆ ಈ ಮೇಳವು ಸಂಪೂರ್ಣ ಉಚಿತವಾಗಿದ್ದು, ಪ್ರತಿ ಅಭ್ಯರ್ಥಿಯು 5 ಕಂಪನಿಗಳಿಗೆ ಸಂದರ್ಶನ ನೀಡಬಹುದಾಗಿದೆ.ಎಸ್ ಎಸ್ ಎಲ್ ಸಿ, ಪಿಯುಸಿ, ವಿವಿಧ ಕೋರ್ಸ್ ಗಳ ಪದವಿ (ಪಾಸ್, ಫೇಲ್), ITI , ಡಿಪ್ಲೋಮ, ಇಂಜಿನಿಯರಿಂಗ್, ಸ್ನಾತಕೋತರ ಪದವಿದಾರರು ಈ ಮೇಳದಲ್ಲಿ ಭಾಗವಹಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ .
50 ಕಂಪನಿಗಳು ಮತ್ತು 2000 ಉದ್ಯೋಗ ಅವಕಾಶಗಳು:ಈ ಮೇಳದಲ್ಲಿ ಸುಮಾರು ೫೦ ಕಂಪನಿಗಳು ಭಾಗವಹಿಸಲಿದ್ದು, 2000 ಕಿಂತ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿದೆ.
ವಿಶೇಷ ಚೇತನ ಹಾಗೂ ಅಂಗವಿಕಲರಿಗೂ ಉದ್ಯೋಗ ಅವಕಾಶ: ಈ ಮೇಳದಲ್ಲಿ ವಿಶೇಷವಾಗಿ ವಿಶೇಷ ಚೇತನ ಹಾಗೂ ಅಂಗವಿಕಲರಿಗೂ ಉದ್ಯೋಗ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ.ಬಕಾರ್ಡಿ ಇಂಡಿಯಾ ಲಿಮಿಟೆಡ್ , ಸಂಧರ್ ಇಂಡಿಯಾ ಲಿಮಿಟೆಡ್,ಅಯುಷ್ಮಾನ್ ಹೆಲ್ತ್ ಕೇರ್, ಆಟೋಮೋಟಿವ್ ಆಸ್ಲ್ಸ್ , ಏಶಿಯನ್ ಪೇಂಟ್ಸ್, ಪ್ರಬೋಧಿತ ಸರ್ವಿಸಸ್, ಮಹಾಲಕ್ಷ್ಮಿ ಸ್ವೀಟ್ಸ್, ಭೀಮ ಪ್ರಾಪರ್ಟೀಸ್, ಕೇರ್ ಹೆಲ್ತ್ ಇನ್ಶೂರೆನ್ಸ್, ರುಚಾ ಇಂಜಿನಿಯರಿಂಗ್, ಆಟೋಲೈವ್ ಇಂಡಿಯಾ , ಕ್ರಿಯೇಟಿವ್ ಎಂಜಿನೀರ್ಸ್, ಕಲ್ಯಾಣಿ ಮೋಟರ್ಸ್, ಕ್ರಿಯಾ ನೆಕ್ಸ್ಟ್ ವೆಲ್ತ್, ವಿಧಾರ್ಥಿ ಮೋಟರ್ಸ್, ಮಾಂಡೋವಿ ಮೋಟರ್ಸ್ , ಸೇವ್ ಸಂಗ್ರಹ ಕಾಪೋರೇಷನ್, ತೆಮೆರೆ ಇಂಡಿಯಾ ಲಿಮಿಟೆಡ್, ಅಪೊಲೊ ಫಾರ್ಮ , ಮುಥೂತ್ ಫೈನಾನ್ಸ್, ವಾಯ್ಸ್ ಆ ನೀಡಿ ಫೌಂಡೇಶನ್, ಸೂರ್ಯೋದಯ ಬ್ಯಾಂಕ್, ಆದರ್ಶ್ ಕೀಯ ಮೋಟರ್ಸ್, ದ್ವಾರ ಫೈನಾನ್ಸಿಯಲ್ ಸರ್ವಿಸಸ್, Dusters ಇಂಡಿಯಾ ಲಿಮಿಟೆಡ್ , VFS ಗ್ಲೋಬಲ್, ಇಂಡಸ್ ಬ್ಯಾಂಕ್, ಸುರಕ್ಷಾ ಕೇರ್ ಕೇರ್ ಹಾಗೂ ಇನ್ನಿತರ ಕಂಪನಿಗಳು ಭಾಗವಹಿಸಲಿದ್ದಾವೆ.
ಹೆಚ್ಚಿನ ಮಾಹಿತಿಗಾಗಿ ಮೋಹನ್: 9686564192 ಮತ್ತು ಶಿವ ಕುಮಾರ್: 6363144181 ರವರನ್ನು ಸಂಪರ್ಕಿಸಬಹುದು ಎಂದು ಒಕ್ಕಲಿಗ ಯುವ ಬ್ರಿಗೇಡ್ ನ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ತಿಳಿಸಿದ್ದಾರೆ .